ರಜನಿಕಾಂತ್ (Rajanikanth) ನಟನೆಯ ’ವೆಟ್ಟೈಯಾನ್’ (Vettaiyan) ಟ್ರೈಲರ್ ರಿಲೀಸ್ ಆಗಿದೆ. ದಿಗ್ಗಜರಾದ ರಜನಿಕಾಂತ್, ಬಿಗ್ ಬಿ ಸಂಘರ್ಷ ರೋಚಕವಾಗಿದೆ. ತಲೈವಾ ಖಡಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:‘ಪ್ರೇಮಲು’ ಬ್ಯೂಟಿಗೆ ಜಾಕ್‌ಪಾಟ್- ‘ದಳಪತಿ 69’ ಸಿನಿಮಾದಲ್ಲಿ ಮಮಿತಾ ಬೈಜು
ರಜನಿಕಾಂತ್ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಜೀವ ತುಂಬಿದ್ದಾರೆ. ಬಿಗ್ ಬಿ ನ್ಯಾಯಾಧೀಶರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಟ್ರೈಲರ್ ನೋಡಿದಾಗ ‘ವೆಟ್ಟೈಯಾನ್’ ಇಬ್ಬರು ಮಹಾನ್ ನಟರ ಜುಗಲ್‌ಬಂದಿ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ. ಈ ಸಿನಿಮಾ ಪೊಲೀಸ್ ಹಾಗೂ ಕಾನೂನಿನ ನಡುವಿನ ಸಮರ ಎಂಬುದರ ಸುಳಿವು ನೀಡಿದ್ದಾರೆ.
ಮಹಿಳೆಯ ವಿರುದ್ಧ ಎಸಗಿದ ಅಪರಾಧಕ್ಕೆ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರ ಮೇಲೆ ಒತ್ತಡ ಹಾಕಲಾಗುತ್ತದೆ. ಈ ವೇಳೆ ರಜನಿಕಾಂತ್ ಅವರೆಲ್ಲರನ್ನೂ ಮೂರು ದಿನದಲ್ಲಿ ಎನ್‌ಕೌಂಟರ್ ಮಾಡುತ್ತೇನೆಂದು ಮಾತು ಕೊಡುತ್ತಾರೆ. ಅನ್ಯಾಯದ ವಿರುದ್ಧ ಮತ್ತೊಂದು ಅನ್ಯಾಯ ಆಗಬಾರದು ಎಂದು ಬಿಗ್ ಬಿ ಹೇಳುವ ಡೈಲಾಗ್ ಕುತೂಹಲ ಮೂಡಿಸಿದೆ. ಇದು ರಜನಿಕಾಂತ್ ಹಾಗೂ ಬಿಗ್ ಬಿ (Amitabh Bachchan) ನಡುವಿನ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ.
ಅಂದಹಾಗೆ, ವೆಟ್ಟೈಯಾನ್ ಸಿನಿಮಾ ಸದ್ಯದಲ್ಲೇ ರಿಲೀಸ್ ಆಗುತ್ತಿದೆ. ತಲೈವಾ, ಬಿಗ್ ಬಿ ಜೊತೆ ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ಮಂಜು ವಾರಿಯರ್ ಸೇರಿದಂತೆ ಅನೇಕರು ನಟಿಸಿದ್ದಾರೆ.