ಬೆಂಗಳೂರು: ಅವರು ಕನ್ನಡ ನಾಡು ಕಂಡ ಅದ್ಭುತ ಕಲಾವಿದರು. ಕನ್ನಡ ಚಿತ್ರರಂಗ ಸೇರಿದಂತೆ ಇತರೆ ಭಾಷೆಗಳಲ್ಲಿ ಸರಿ ಸುಮಾರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಿಯಿಸದ ಹಿರಿಯ ಕಲಾವಿದ. ಇತ್ತೀಚೆಗಷ್ಟೇ ಗ್ಯಾಂಗ್ರೀನ್‍ಗೆ ತುತ್ತಾಗಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡ ನಟ ಇದೀಗ ನಿವೇಶನಕ್ಕಾಗಿ ಪ್ರತಿನಿತ್ಯ ಬಿಡಿಎ ಕದ ತಟ್ಟುತ್ತಿದ್ದಾರೆ.
ಹಿರಿಯ ನಟ ಸತ್ಯಜಿತ್ ಬಿಡಿಎ ಸೈಟ್‍ಗಾಗಿ ಪ್ರತಿನಿತ್ಯ ಬಿಡಿಎ ಮುಂದೆ ಅಲೆದಾಡೋ ಪರಿಸ್ಥಿತಿ ಬಂದಿದೆ. ಗ್ಯಾಂಗ್ರೀನ್‍ಗೆ ತುತ್ತಾಗಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿರೋ ಸತ್ಯಜಿತ್ ವ್ಹೀಲ್ ಚೇರ್‍ನಲ್ಲಿ ಬಿಡಿಎ ಆಯುಕ್ತರ ಭೇಟಿಗೆ ಬಂದಿದ್ರು. ಆದ್ರೆ 3-4 ಇಲಾಖೆಗಳನ್ನು ನೋಡಿಕೋಳ್ತಿರೋ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಬಿಡಿಎಗೆ ಅಪರೂಪಕ್ಕೊಮ್ಮೆ ಬರುತ್ತಾರೆ. ಈ ಬಗ್ಗೆ ಗೊತ್ತಿರದ ಸತ್ಯಜಿತ್ ಪ್ರತಿನಿತ್ಯ ಬಿಡಿಎಗೆ ಬಂದು ಆಯುಕ್ತರ ಭೇಟಿಗಾಗಿ ಗಂಟೆಗಟ್ಟಲೆ ಕಾದು ಕಾದು ವಾಪಸ್ ಹೋಗುವುದು ಸಾಮಾನ್ಯವಾಗಿಬಿಟ್ಟಿದೆ.
ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಕೊಟ್ಟ ಪತ್ರವನ್ನು ಪ್ರತಿನಿತ್ಯ ಹಿಡಿದುಕೊಂಡು ನನಗೋಂದು ಸೈಟ್ ಸಿಗುತ್ತೆ ಅನ್ನೋ ಆಸೆಯಿಂದ ಬರೋ ಸತ್ಯಜಿತ್‍ಗೆ ಇದುವರೆಗು ಬಿಡಿಎ ಆಯುಕ್ತ ರಾಕೇಶ್ ಸಿಂಗ್‍ರ ಮುಖ ದರ್ಶನವಾಗಿಲ್ಲ.
ಇನ್ನಾದ್ರು ಆಯುಕ್ತರು ಕಚೇರಿಗೆ ಬಂದು ಇವರ ನೋವನ್ನು ಆಲಿಸಲಿ ಅನ್ನೋದು ನಮ್ಮ ಆಶಯ