ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ಹಿರಿಯ ನಟ ಕೆ.ಎಸ್. ಅಶ್ವಥ್ ಅವರ ಪುತ್ರ ಈಗ ಜೀವನ ನಿರ್ವಹಣೆಗೆ ಕ್ಯಾಬ್ ಚಾಲಕರಾಗಿ ಕೆಲಸ ಮಾಡ್ತಿದ್ದಾರೆ.
ಮನೋಜ್ಞ ಅಭಿನಯದ ಮೂಲಕವೇ ಕನ್ನಡಿಗರ ಮನೆ-ಮನ ಗೆದ್ದವರು ಕೆ.ಎಸ್ ಅಶ್ವಥ್. ಇಂತಹ ಮೇರು ನಟನ ಮಗನಾಗಿ ಎರಡೂವರೆ ದಶಕಗಳಿಂದ ಪುತ್ರ ಶಂಕರ್ ಅಶ್ವಥ್ ಬೆಳ್ಳಿತೆರೆ ಮತ್ತು ಕಿರುತೆರೆಗಳಲ್ಲಿ ಅಭಿನಯಿಸಿದ್ದರು.
ಶಂಕರ್ ಅಶ್ವಥ್ ಹೊಟ್ಟೆಪಾಡಿಗಾಗಿ ಇದೀಗ ಕ್ಯಾಬ್ ಚಾಲಕರಾಗಿ ದುಡಿಯುತ್ತಿದ್ದಾರೆ. ಬೆಳ್ಳಿತೆರೆ ಮತ್ತು ಕಿರುತೆರೆಗಳಲ್ಲಿ ಹೆಚ್ಚಿನ ಅವಕಾಶ ಸಿಗದಿದ್ದಕ್ಕೆ ಜೀವನ ನಿರ್ವಹಣೆಗಾಗಿ ಊಬರ್ ಕ್ಯಾಬ್ ಚಾಲಕರಾಗಿ ಜೀವನ ಸಾಗಿಸುತ್ತಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಂಕರ್ ಪತ್ನಿ ಸುಧಾ, ಅವರು ಬದುಕುವ ದಾರಿ ನೋಡಿಕೊಂಡಿದ್ದಾರೆ. ನಾವು ಯಾರ ಹಂಗು ಇಲ್ಲದೆ ಬದುಕುವುದಕ್ಕಾಗಿ ಈ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ರಂಗವನ್ನು ಬಿಟ್ಟಿಲ್ಲ. ಸಣ್ಣ ಪುಟ್ಟ ಸಿನಿಮಾ ಮಾಡುತ್ತಿದ್ದಾರೆ. ಏಪ್ರಿಲ್ ನಿಂದ ಧಾರಾವಾಹಿ ಅವಕಾಶ ಸಿಕ್ಕಿಲ್ಲ. ಬಿಡುವಿನ ವೇಳೆ ಮನೆಯಲ್ಲಿ ಕುಳಿತುಕೊಳ್ಳೊವುದು ಬೇಡ. ಸ್ವಾಭಿಮಾನಿಗೆಯಾಗಿ ಬದುಕಬೇಕು ಎಂದು ಈ ಕೆಲಸ ಮಾಡುತ್ತಿದ್ದಾರೆ ಅಂದ್ರು.
ನಮ್ಮ ಅತ್ತೆ, ಮಗನಿಗೆ ಸ್ವಲ್ಪ ಬೇಸರವಾಗಿದೆ. ಆದರೆ ಸಿನಿಮಾ ಧಾರಾವಾಹಿ ಇಲ್ಲದೇ ಇದ್ದಾಗ ಈ ಕೆಲವಸವನ್ನು ಮಾಡುತ್ತಿದ್ದಾರೆ. ಸಿನಿಮಾ ವೃತ್ತಿಯನ್ನೇ ಅವಲಂಭಿತರಾಗುವುದು ಬೇಡ ಎಂದು ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು.