ಬೆಂಗಳೂರು: ಮೇ 7 ರಂದು ಪಶು ಸಂಗೋಪನ ಇಲಾಖೆಯಿಂದ ಸಂಚಾರಿ ಪಶು ಚಿಕಿತ್ಸಾಲಯ ಲೋಕಾರ್ಪಣೆ ನಡೆಯಲಿದೆ ಎಂದು ಪಶು ಸಂಗೋಪನ ಸಚಿವ ಪ್ರಭು ಚೌವ್ಹಾಣ್ ಹೇಳಿದ್ದಾರೆ.
Advertisement
ವಿಕಾಸ ಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಮೇ 7 ರಂದು ಕೇಂದ್ರ ಸರ್ಕಾರದಿಂದ ಕೊಡ ಮಾಡಲ್ಪಟ್ಟ 275 ಪಶು ಸಂಜೀವಿನಿ ಅಂಬುಲೆನ್ಸ್ ಲೋಕಾರ್ಪಣೆ ನಡೆಯಲಿದೆ. 1962 ಹೆಲ್ಪ್ ಲೈನ್ ಜಾರಿಯಾಗಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಅಂಬುಲೆನ್ಸ್ ಕೊಡಲಾಗುತ್ತದೆ ಮೇ 7 ರಂದು ಮತ್ತು 12ಕ್ಕೆ ಕೇಂದ್ರ ಸಚಿವರು ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿಧಾನಸೌಧದ ಮುಂಭಾಗದಲ್ಲಿ ಪಶು ಸಂಜೀವಿನಿ ಅಂಬುಲೆನ್ಸ್ ಲೋಕಾರ್ಪಣೆ ಮಾಡಲಿದ್ದಾರೆ ಎಂದರು. ಇದನ್ನೂ ಓದಿ: ಗೌರವ್ ಗುಪ್ತ ಎತ್ತಂಗಡಿ – ತುಷಾರ್ ಗಿರಿನಾಥ್ ಬಿಬಿಎಂಪಿ ಮುಖ್ಯ ಆಯುಕ್ತರಾಗಿ ವರ್ಗ
Advertisement
Advertisement
ಒಂದು ಲಕ್ಷ ಜಾನುವಾರಗಳಿಗೆ ಒಂದು ವಾಹನ ಇರುತ್ತದೆ. ಒಬ್ಬ ಪಶು ವೈದ್ಯರು, ಸಹಾಯಕ, ಚಾಲಕರು ವಾಹನಗಳಲ್ಲಿ ಇರುತ್ತಾರೆ. ರೈತರು ಕರೆ ಮಾಡಿದ ಕಡೆ ವಾಹನ ಹೋಗುತ್ತದೆ. ಕೇಂದ್ರ 60% ರಷ್ಟು, ರಾಜ್ಯದ 40% ಅನುದಾನದಲ್ಲಿ ಇದರ ನಿರ್ವಾಹಣೆ ನಡೆಯಲಿದೆ. ಈಗ ಪಶು ಸಂಜೀವಿನಿ ಅಂಬುಲೆನ್ಸ್ ಲೋಕಾರ್ಪಣೆ ಆಗುತ್ತಿರುವುದು ಒಟ್ಟು 44 ಕೋಟಿ ವೆಚ್ಚದ ಯೋಜನೆಯಾಗಿದೆ ಎಂದು ಮಾಹಿತಿ ಹಂಚಿಕೊಂಡರು.
Advertisement
ಪಶು ಸಂಗೋಪನಾ ಇಲಾಖೆಯಲ್ಲಿ ನೇಮಕಾತಿ ವಿಚಾರವಾಗಿ ಮಾತನಾಡಿ, ನನ್ನ ಇಲಾಖೆಯಲ್ಲಿ ನೇಮಕಾತಿ ಪಾರದರ್ಶಕವಾಗಿ ಆಗಿದೆ. ಯಾವುದೇ ಒಂದು ಸಿಂಗಲ್ ಅಲಿಗೇಷನ್ ನನ್ನ ಮೇಲೆ ಇಲ್ಲ. ನನ್ನ ಮೂರು ವರ್ಷಗಳ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ಆರೋಪ ಬಂದಿಲ್ಲ. ನನ್ನ ಕೆಲಸವನ್ನು ಬೊಮ್ಮಾಯಿ ಅವರು ಹೊಗಳಿದ್ದಾರೆ. ವರಿಷ್ಠರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು. ಇದನ್ನೂ ಓದಿ: ಪಿಎಸ್‌ಐ ಸಮವಸ್ತ್ರ ಧರಿಸಿ ಬಿಲ್ಡಪ್ – ಬೆಂಗಳೂರಿನ ಕಾನ್‌ಸ್ಟೇಬಲ್ ಅಮಾನತು
ಪಿಎಸ್‍ಐ ಅಕ್ರಮದ ಕುರಿತಾಗಿ ಮಾತನಾಡಿ, ಪಿಎಸ್‍ಐ ಅಕ್ರಮ ನೇಮಕಾತಿ ಆಗಿದೆ ಎಂದು ನಮ್ಮ ಜಿಲ್ಲೆಯ ಅಭ್ಯರ್ಥಿಗಳ ಬಂದು ಹೇಳಿದ ಕಾರಣಕ್ಕೆ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ಹೇಳಿದ್ರು ಅಕ್ರಮ ನಡಿದಿದೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ಹಾಗಾಗಿ ಕೂಡಲೇ ಪಿಎಸ್‍ಐ ತಾತ್ಕಾಲಿಕ ಆಯ್ಕೆ ಪಟ್ಟಿ ತಡೆ ಹಿಡಿಯಬೇಕು, ತನಿಖೆ ನಡೆಸಬೇಕು ಎಂದು ನಾನು ಪತ್ರ ಬರೆದಿದ್ದೆ. ನಾನು ಕಲ್ಯಾಣ ಕರ್ನಾಟಕ ಭಾಗದ ಮಂತ್ರಿ. ಪಿಎಸ್‍ಐ ನೇಮಕಾತಿ ಅಕ್ರಮ ದಿಂದ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಿತ್ತು. ಈ ಬಗ್ಗೆ ಜಿಲ್ಲೆಯ ಶಾಸಕರು ಕೂಡ ನನಗೆ ಹೇಳಿದ್ರು ಅದಕ್ಕಾಗಿ ನಾನು ಸೂಕ್ತ ತನಿಖೆಗೆ ಸಿಎಂಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.