ಮುಂಬೈ: ಕೂಡಿ ಬಾಳುವ ಸಂಸ್ಕೃತಿ ನಮಗೆ ಬಂದಿದ್ದೇ ಹಿಂದೂ ಧರ್ಮದಿಂದ. ಭಾರತದಲ್ಲಿ ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯದಿಂದಾಗಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ ಎಂದು ಹಿರಿಯ ಕವಿ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್ (Javed Akhtar) ಅವರು ಹಿಂದೂ ಸಮುದಾಯವನ್ನು ಕೊಂಡಾಡಿದರು.
ಮುಂಬೈನಲ್ಲಿ (Mumbai) ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಹಿಂದೂಗಳು ಉದಾರ ಮತ್ತು ಸ್ವಚ್ಛ ಮನಸ್ಸಿನವರು ಎಂದು ಹೇಳಿದರು. ಕೆಲವರು ಯಾವಾಗಲೂ ಅಸಹಿಷ್ಣುತೆಯನ್ನು ಹೊಂದಿದ್ದಾರೆ. ಹಿಂದೂಗಳು ಹಾಗಲ್ಲ, ಅವರು ಈ ಶ್ರೇಷ್ಠ ಗುಣವನ್ನು ಹೊಂದಿದ್ದಾರೆ. ಹೀಗಾಗಿ ಅದನ್ನು ಕಳೆದುಕೊಳ್ಳಬೇಡಿ, ಕಳೆದುಕೊಂಡರೆ ನೀವು ಇತರರಂತೆ ಆಗುತ್ತೀರಿ ಎಂದರು.
Advertisement
Advertisement
ಇಡೀ ಜಗತ್ತಿನಲ್ಲಿ ಇಂದು ಅಸಹಿಷ್ಣುತೆ ಹೆಚ್ಚಾಗಿದೆ. ಆದರೆ ಭಾರತದಲ್ಲಿ ಮಾತ್ರ ಎಲ್ಲಾ ಧರ್ಮ, ಜಾತಿಯ ಜನರು ಒಂದಾಗಿ ಬದುಕುತ್ತಿದ್ದಾರೆ. ಈ ಕೂಡಿಬಾಳುವ ಸಂಸ್ಕೃತಿ ನಮಗೆ ಬಂದಿದ್ದೇ ಹಿಂದೂ ಧರ್ಮದಿಂದ. ಹಿಂದೂ ಎನ್ನುವುದು ಕೇವಲ ಒಂದು ಧರ್ಮವಲ್ಲ. ಅದು ಈ ನೆಲದ ಸಂಸ್ಕøತಿಯೂ ಹೌದು ಎಂದಿದ್ದಾರೆ.
Advertisement
ಭಗವಾನ್ ರಾಮ ಮತ್ತು ಸೀತಾ ದೇವಿಯ ನಾಡಿನಲ್ಲಿ ಹುಟ್ಟಿದ್ದಕ್ಕೆ ನಾನು ಹೆಮ್ಮೆಪಡುತ್ತೇನೆ. ತಾನು ನಾಸ್ತಿಕನಾಗಿದ್ದಾಗಲೇ ರಾಮ ಮತ್ತು ಸೀತೆಯನ್ನು ಈ ದೇಶದ ಸಂಪತ್ತು ಎಂದು ಪರಿಗಣಿಸುತ್ತಾನೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ
Advertisement
ಇದೇ ವೇಳೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕುಸಿತದ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. ಇದು ಹಿಂದೂ ಸಂಸ್ಕೃತಿ, ಇದು ನಾಗರಿಕತೆ. ಇದು ನಮಗೆ ಪ್ರಜಾಸತ್ತಾತ್ಮಕ ಧೋರಣೆಗಳನ್ನು ಕಲಿಸಿದೆ. ಅದಕ್ಕಾಗಿಯೇ ಈ ದೇಶದಲ್ಲಿ ಪ್ರಜಾಪ್ರಭುತ್ವವಿದೆ. ನಾವು ಸರಿ, ಎಲ್ಲರೂ ತಪ್ಪು ಎಂದು ಭಾವಿಸುವುದು ಹಿಂದೂಗಳ ಕೆಲಸವಲ್ಲ. ಇದನ್ನು ನಿಮಗೆ ಕಲಿಸಿದವರು ತಪ್ಪು ಎಂದು ಅವರು ತಿಳಿಸಿದರು.