ಚೆನ್ನೈ: ಹಿರಿಯ ಸಿಪಿಎಂ (CPIM) ನಾಯಕ ಮತ್ತು ಪಕ್ಷದ ಮಾಜಿ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ (68) (Kodiyeri Balakrishnan) ನಿಧನರಾಗಿದ್ದಾರೆ.
ಕೊಡಿಯೇರಿ ಬಾಲಕೃಷ್ಣನ್ ಅವರು ಹಲವು ದಿನಗಳಿಂದ ಕ್ಯಾನ್ಸರ್‌ಗೆ (Cancer) ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚೆನ್ನೈನಲ್ಲಿ (Chennai) ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ; ತ್ರಿಪಾಠಿ ನಾಮಪತ್ರ ತಿರಸ್ಕೃತ – ಖರ್ಗೆ, ಶಶಿ ತರೂರ್ ನಡುವೆ ಫೈಟ್
Advertisement
ಕಣ್ಣೂರಿನ (Kannur) ತಲಶ್ಶೇರಿಯಿಂದ (Thalassery) ಐದು ಬಾರಿ ಶಾಸಕರಾಗಿದ್ದ ಕೊಡಿಯರಿ ಬಾಲಕೃಷ್ಣನ್ ಅವರು 2006 ರಿಂದ 2011 ರವರೆಗೆ ವಿಎಸ್ ಅಚ್ಯುತಾನಂದನ್ (Achuthanandan) ಅವರ ಸಂಪುಟದಲ್ಲಿ ಕೇರಳದ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಹೋಗ್ತಾರಲ್ಲ ಇದು ಚೈಲ್ಡಿಶ್ ತನ, ರಾಹುಲ್ ಗಾಂಧಿ ಫನ್ನಿಬಾಯ್ : ರೇಣುಕಾಚಾರ್ಯ ವ್ಯಂಗ್ಯ
Advertisement
Advertisement
2021ರಲ್ಲಿ ಸಿಪಿಎಂ ಪಕ್ಷವನ್ನು ಎರಡನೇ ಬಾರಿಗೆ ಮುನ್ನಡೆಸುವಲ್ಲಿ ಕೊಡಿಯೇರಿ ಪ್ರಮುಖ ಪಾತ್ರ ವಹಿಸಿದ್ದರು. 2015 ರಿಂದ 2022 ರವರೆಗೆ ಕೇರಳ ಸಿಪಿಎಂನ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿದ್ದ ಕೊಡಿಯೇರಿ ಬಾಲಕೃಷ್ಣನ್ ಅವರು ಅನಾರೋಗ್ಯದ ಕಾರಣದಿಂದ ತಮ್ಮ ಸ್ಥಾನದಿಂದ ಹೊರ ನಡೆದಿದ್ದರು.