– ಅಮ್ಮ ಲೀಲಾವತಿ ಪಾರ್ಥಿವ ಶರೀರದ ಮುಂದೆ ಕುಳಿತು ಪುತ್ರ ಕಣ್ಣೀರು
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ (Leelavathi) ಅವರ ನಿಧನದಿಂದಾಗಿ ಪುತ್ರ ವಿನೋದ್ ರಾಜ್ (Vinod Raj) ಶೋಕಸಾಗರದಲ್ಲಿ ಮುಳುಗಿದ್ದಾರೆ. ತಾಯಿಯ ಪಾರ್ಥಿವ ಶರೀರದ ಮುಂದೆ ಕುಳಿತು ಕಣ್ಣೀರಿಟ್ಟಿದ್ದಾರೆ. ಈ ವೇಳೆ ತಾಯಿ ಮಹತ್ವ ಏನೆಂದು ಮನಬಿಚ್ಚಿ ಮಾತನಾಡಿದ್ದಾರೆ.
Advertisement
ತಾಯಿ ಇಲ್ಲದೇ ನಾವಿಲ್ಲ. ನಾವು ದೊಡ್ಡವರಾದ ಮೇಲೆ ನೀನಿಲ್ಲದೇ ನಾವಿಲ್ಲ ಅಂತಾ ಯಾಕೆ ಹೇಳೋಕೆ ಆಗ್ತಿಲ್ಲ? ತಾಯಿಯನ್ನ ಬಿಟ್ಟವರನ್ನ ಯಾವ ಸಮಾಜವೂ ಸಹಿಸಲ್ಲ. ತಾಯಿಯನ್ನ ನೋಡಿಕೊಳ್ಳದ ಮಕ್ಕಳ ಬದುಕು ವ್ಯರ್ಥ ಎಂದು ವಿನೋದ್ ರಾಜ್ ಹೇಳಿದ್ದಾರೆ. ಇದನ್ನೂ ಓದಿ: ಲೀಲಾವತಿ ಅಂತಿಮ ದರ್ಶನಕ್ಕೆ ಬಂದ ಮೊಮ್ಮಗ ಮತ್ತು ಸೊಸೆ
Advertisement
Advertisement
ತಾಯಿ ಮಕ್ಕಳನ್ನ ಸಾಕುವಾಗ ಖುಷಿ ಖುಷಿಯಿಂದ ಸಾಕಿರುತ್ತಾಳೆ. ತಾಯಿಯನ್ನೂ ಮಕ್ಕಳು ಖುಷಿಯಿಂದ ನೋಡಿಕೊಳ್ಳಬೇಕು. ತಾಯಿಯ ಸಂತೋಷವೇ ನಮಗೆ ಸ್ವರ್ಗ. ಇದನ್ನ ಯಾರೂ ಮರೆಯಬೇಡ. ತಾಯಿಯನ್ನ ಯಾರೂ ಕೇವಲ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.
Advertisement
ತಾಯಿಯನ್ನ ಆಶ್ರಮಗಳಿಗೆ ಸೇರಿಸುವ ಕೆಲಸ ಮಾಡಬೇಡಿ. ತಾಯಿ ಬಿಟ್ಟರೆ ಈ ಭೂಮಿ ಮೇಲೆ ಏನೂ ಇಲ್ಲ. ತಂದೆ ಕಾರಣನಾಗ್ತಾನೆ, ಅದರೆ ತಾಯಿಯೇ ಸತ್ಯ. ತಾಯಿಯನ್ನ ನೋಡಿಕೊಂಡಾಗಲೇ ರಾಮರಾಜ್ಯವಾಗೋದು ಎಂದು ನುಡಿದಿದ್ದಾರೆ. ಇದನ್ನೂ ಓದಿ: ಲೀಲಮ್ಮನ ಫೋಟೋ ಮುಂದೆ ಕುಳಿತು ಮೂಕ ವೇದನೆ – ಕಣ್ಣೀರಿಟ್ಟ ಪ್ರೀತಿಯ ಶ್ವಾನ!
ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಅಂತಿಮ ಸಂಸ್ಕಾರವನ್ನು (Cremation) ಅವರ ನೆಚ್ಚಿನ ತೋಟದಲ್ಲಿ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ನೆಲಮಂಗಲದ ಸೋಲದೇವನಹಳ್ಳಿ (Soladevanahalli) ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ.