ಬೆಂಗಳೂರು: ಹಿರಿಯ ನಟ ರಾಜೇಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 82 ವರ್ಷ ವಯಸ್ಸಿನ ರಾಜೇಶ್, ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕಸ್ತೂರಿ ಬಾ ನಗರದ ನ್ಯೂ ಜನಪ್ರಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸದ್ಯ ವೆಂಟಿಲೇಟರ್ ನಲ್ಲಿ ಉಸಿರಾಡುತ್ತಿದ್ದಾರೆ. ಇತ್ತಿಚೆಗೆ ಪತ್ನಿಯನ್ನ ಕಳೆದುಕೊಂಡಿರುವ ರಾಜೇಶ್ ಅವರಿಗೆ 5 ಜನ ಮಕ್ಕಳಿದ್ದಾರೆ.
ರಾಜೇಶ್ ಆರೋಗ್ಯದ ಬಗ್ಗೆ ಆಸ್ಪತ್ರೆ ನಿರ್ದೇಶಕ ಡಾಕ್ಟರ್ ಗಂಗಾಧರ್ ಮಾತನಾಡಿ, ಫೆಬ್ರವರಿ 9 ಕ್ಕೆ ರಾಜೇಶ್ ಅವರು ದಾಖಲಾಗಿದ್ದಾರೆ. ಉಸಿರಾಟದ ಸಮಸ್ಯೆ ಅಂತ ಆಸ್ಪತ್ರೆಗೆ ಬಂದಿದ್ರು. ಚಿಕಿತ್ಸೆಗೆ ರಾಜೇಶ್ ಅವರು ಸ್ಪಂದಿಸ್ತಿದ್ದಾರೆ. ಸ್ವಲ್ಪ ಕಾಲಾವಕಾಶ ಬೇಕಾಗುತ್ತೆ. ಸಂಬಂಧಪಟ್ಟ ವೈದ್ಯರು ಕೂಡ ಬಂದು ಚಿಕಿತ್ಸೆ ಕೊಡ್ತಿದ್ದಾರೆ ಎಂದರು. ಇದನ್ನೂ ಓದಿ: ಹಿಜಬ್ ಧರಿಸಿ ನರ್ಸಿಂಗ್ ಪರೀಕ್ಷೆ ಬರೆದ ವಿದ್ಯಾರ್ಥಿನಿಯರು – ಬ್ರೀಮ್ಸ್ ಮೆಡಿಕಲ್ ಕಾಲೇಜು ಅನುಮತಿ
ಅಡ್ಮಿಟ್ ಆಗಿ ನಾಲ್ಕೈದು ದಿನಗಳಾಗಿದೆ. ಇನ್ನೂ ಎರಡ್ಮೂರು ದಿನ ಚಿಕಿತ್ಸೆ ಕೊಡಬೇಕಾಗುತ್ತೆ. ಅವರ ಮಗಳು ಮತ್ತು ಮೊಮ್ಮಗ ರಾಜೇಶ್ ಅವರನ್ನ ನೋಡಿಕೊಳ್ತಿದ್ದಾರೆ. ಉಳಿದ ಕುಟುಂಬಸ್ಥರಿಗೆ ಫೋನ್ ಮೂಲಕ ಮಾಹಿತಿ ಕೊಡಲಾಗ್ತಿದೆ. ಚೇತರಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಕಾಣ್ತಿದೆ ಎಂದು ಭರತ್ ವಿವರಿಸಿದ್ದಾರೆ.