ನವದೆಹಲಿ: ಖ್ಯಾತ, ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ ಕುಲದೀಪ್ ನಾಯರ್ (95) ಅವರು ಬುಧವಾರ ದೆಹಲಿ ನಿವಾಸದಲ್ಲಿ ನಿಧನರಾಗಿದ್ದಾರೆ.
1923 ಆಗಸ್ಟ್ 14 ರಂದು ಇಂದಿನ ಪಾಕಿಸ್ತಾನದ ಸಿಯಾಲ್‍ಕೋಟ್ ಎಂಬಲ್ಲಿ ಜನಿಸಿದ ನಾಯರ್ ಅವರು ಭಾರತೀಯ ಪತ್ರಿಕೋದ್ಯಮದಲ್ಲಿ ಹಲವು ದಶಗಳ ಕಾಲ ಅಪಾರ ಸೇವೆ ಸಲ್ಲಿಸಿದ್ದರು. ಸ್ಟೇಟ್ಸ್ ಮನ್ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ನಾಯರ್ ಅವರ Between the lines ಅಂಕಣ ಹೆಚ್ಚು ಜನಪ್ರಿಯಾವಾಗಿತ್ತು.
Advertisement
Kuldip Nayar was an intellectual giant of our times. Frank and fearless in his views, his work spanned across many decades. His strong stand against the Emergency, public service and commitment to a better India will always be remembered. Saddened by his demise. My condolences.
— Narendra Modi (@narendramodi) August 23, 2018
Advertisement
ಉರ್ದು ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭಿಸಿದ ನಾಯರ್ ಅವರ ಬರಹಗಳು 14 ಭಾಷೆಗಳ 80 ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. 1990 ರಲ್ಲಿ ಇಂಗ್ಲೆಂಡ್ ಹೈ ಕಮಿಶನರ್ ಆಗಿ ನೇಮಕವಾಗಿ ಸೇವೆ ಸಲ್ಲಿಸಿದ್ದ ನಾಯರ್ 1997 ರಲ್ಲಿ ರಾಜ್ಯಸಭೆಗೆ ಆಯ್ಕೆ ಆಗಿದ್ದರು. ಲಾಹೋರ್ ನಲ್ಲಿ ಕಾನೂನು ಪದವಿ ಪಡೆದಿದ್ದ ಅವರು ಅಮೆರಿಕದಲ್ಲಿ ಪತ್ರಿಕೋದ್ಯಮ ಪದವಿಯನ್ನು ಪಡೆದಿದ್ದರು. ಅಲ್ಲದೇ ತತ್ವಶಾಸ್ತ್ರದಲ್ಲಿ ಪಿಎಚ್‍ಡಿ ಪದವಿ ಪೂರ್ಣಗೊಳಿಸಿದ್ದರು.
Advertisement
ದೆಹಲಿಯ ಲೋಧಿ ಬಳಿ ಇಂದು ಮಧ್ಯಾಹ್ನದ ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭಿಸಿದ್ದು, ಇದಕ್ಕೂ ಮುನ್ನ ಸಾರ್ವಜನಿಕ ದರ್ಶನ ವ್ಯವಸ್ಥೆ ಮಾಡಲಾಗುತ್ತದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Sad to hear of the passing of Kuldip Nayar, veteran editor and writer, diplomat and parliamentarian, and a determined champion of democracy during the Emergency. His readers will miss him. Condolences to his family and associates #PresidentKovind
— President of India (@rashtrapatibhvn) August 23, 2018