ಬೆಳಗಾವಿ: ಜಾನಪದ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದ ಬಸಲಿಂಗಯ್ಯ ಹಿರೇಮಠ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿಂದು ನಿಧನರಾಗಿದ್ದಾರೆ.
Advertisement
ಬಸಲಿಂಗಯ್ಯ ಹಿರೇಮಠ (63) ನಗರದ ಬೈಲೂರು ಗ್ರಾಮದ ಮೂಲ ನಿವಾಸಿಯಾಗಿದ್ದ ಅವರು, ಜಾನಪದ ಕ್ಷೇತ್ರದಲ್ಲಿ ವಿದ್ವಾಂಸರಾಗಿದ್ದರು. ಪತ್ನಿ ವಿಶ್ವೇಶ್ವರಿ ಹಿರೇಮಠ ಅವರು ಜಾನಪದ ಕಲಾವಿದೆ ಆಗಿದ್ದು, ದಂಪತಿಯು ಅನೇಕ ಜಾನಪದ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದ್ದಾರೆ. ದಂಪತಿ ಜಾನಪದ ಸಂಶೋಧನಾ ಕೇಂದ್ರದ ಮೂಲಕ ಕಲಾ ಸೇವೆ ಮಾಡುತ್ತಿದ್ದರು. ಬಸಲಿಂಗಯ್ಯ ಅವರು ತಮ್ಮ ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ. ಇದನ್ನೂ ಓದಿ: ಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿ: ಬಿಜೆಪಿ ವ್ಯಂಗ್ಯ
Advertisement
ಹಿರೇಮಠರವರು ಸುಮಾರು 4000 ಹಾಡುಗಳನ್ನು ಹಾಡಿದ್ದು, ಜಾನಪದಗಳ ಜೊತೆಗೆ ರಂಗಗೀತೆ, ತತ್ವಪದ, ಭಾವಗೀತೆಗಳನ್ನೂ ಸಹ ಅವರು ಹಾಡುತ್ತಿದ್ದರು.ಇದನ್ನೂ ಓದಿ: ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ಚಾಲನೆ