ತೆಲುಗು ಮತ್ತು ಹಿಂದಿಯಲ್ಲಿ ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿಸಿದ ಚಲನಚಿತ್ರ ನಿರ್ದೇಶಕ 84ರ ಹರೆಯದ ತಾತಿನೇನಿ ರಾಮರಾವ್ ಅವರು ಬುಧವಾರ ಚೆನ್ನೈನಲ್ಲಿ ನಿಧನರಾದರು. ಇವರು ಟಾಲಿವುಡ್ ತಲೈವಾ ರಜನಿಕಾಂತ್ ಮತ್ತು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವನ್ನು ನಿದೇಶಿಸಿದ್ದರು.
ರಾಮರಾವ್ ಅವರು ವಯೋಸಹಜ ಸಮಸ್ಯೆಗಳಿಂದ ನಿಧನರಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ರಾಮರಾವ್ ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಚಿತ್ರರಂಗದಲ್ಲಿ ಟಿ.ರಾಮರಾವ್ ಎಂದೇ ಇವರು ಜನಪ್ರಿಯವಾಗಿದ್ದಾರೆ. ಇವರು ನಿರ್ದೇಶಕರಾಗಿ ಸುಮಾರು ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ಯಶಸ್ಸನ್ನು ಕಂಡಿದ್ದು, ದೊಡ್ಡ ಸ್ಟಾರ್‍ಗಳನ್ನು ಹುಟ್ಟುಹಾಕಿದ್ದಾರೆ. ಇದನ್ನೂ ಓದಿ: ಬಸವಣ್ಣನಂತೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ದೇಶಿಕೇಂದ್ರ ಮಹಾಸ್ವಾಮಿಜೀ
Advertisement
Advertisement
ರಾವ್ ಅವರ ನಿಧನದ ಕುರಿತು ನಟ ಅನುಪಮ್ ಖೇರ್ ಪೋಸ್ಟ್ ಮಾಡಿದ್ದು, ನಿರ್ದೇಶಕರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಪೋಸ್ಟ್‍ನಲ್ಲಿ, ಹಿರಿಯ ಚಲನಚಿತ್ರ ನಿರ್ಮಾಪಕ ಮತ್ತು ಆತ್ಮೀಯ ಗೆಳೆಯ ಟಿ.ರಾಮರಾವ್ ಅವರ ನಿಧನದ ಬಗ್ಗೆ ತಿಳಿದು ತೀವ್ರ ದುಃಖವಾಯಿತು. ಅವರು ಸಹಾನುಭೂತಿ, ಕಮಾಂಡಿಂಗ್ ಮತ್ತು ಉತ್ತಮ ಹಾಸ್ಯಪ್ರಜ್ಞೆಯನ್ನು ಹೊಂದಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪ! ಓಂ ಶಾಂತಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
Advertisement
ರಾಮರಾವ್ ನಿಧನಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ ಸಂತಾಪ ವ್ಯಕ್ತಪಡಿಸಿದ್ದು, ಚಿತ್ರ ನಿರ್ಮಾಪಕ, ನಿರ್ದೇಶಕ ಟಿ.ರಾಮರಾವ್ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಅವರು 80 ರ ದಶಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ನನ್ನ ತಂದೆ ಮತ್ತು ನಾನು ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದೇವೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ರಾಮರಾವ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
Advertisement
Deeply saddened to know about the demise of veteran filmmaker & a dear friend Shri #TRamaRao ji. I had the privilege of working with him in #AakhriRaasta and #Sansaar!! He was compassionate, commanding & had a great sense of humour. My condolences to his family! Om Shanti! ????♿️ pic.twitter.com/k66KwN8ymT
— Anupam Kher (@AnupamPKher) April 20, 2022
ರಾಮರಾವ್ ಅವರು 1966 ರಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್ ಅವರಿಗೆ ನಿರ್ದೇಶನ ಮಾಡಿದ್ದಾರೆ. ಹಳೆಯ ಎನ್‍ಟಿಆರ್ ಜೊತೆಗಿನ ಅವರ 1977 ರ ಫ್ಯಾಂಟಸಿ ಹಾಸ್ಯ ಚಲನಚಿತ್ರ ‘ಯಮಗೋಳ’ ಸಿನಿಮಾ ಮಾಡಿದ್ದು, ಇದು ಬ್ಲಾಕ್‍ಬಸ್ಟರ್ ಆಗಿತ್ತು. ಇದನ್ನೂ ಓದಿ: ತಮಿಳುನಾಡಿನಲ್ಲಿ ಯಾರಿಗೂ ರಾಮನ ಪರಿಚಯವಿಲ್ಲವೆಂದ ಕಾಂಗ್ರೆಸ್ ಸಂಸದೆ
ರಾಮರಾವ್ ಅವರ 1985ರ ರೊಮ್ಯಾಂಟಿಕ್ ಕೌಟುಂಬಿಕ ನಾಟಕ ‘ಪಚನಿ ಕಪುರಂ ಕೃಷ್ಣ’ ಸಿನಿಮಾದಲ್ಲಿ ಶ್ರೀದೇವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಹಾಡುಗಳನ್ನು ಇಂದಿಗೂ ಅಭಿಮಾನಿಗಳು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ