ಬೆಂಗಳೂರು: ಹಿರಿಯ ರಂಗ ಕಲಾವಿದೆ, ಸಂಘಟಕಿ, ಲಲಿತಕಲೆಗಳ ಪೋಷಕರಾಗಿದ್ದ ವಿಮಲಾ ರಂಗಾಚಾರ್ (Vimala Rangachar) (97) ವಿಧಿವಶರಾದರು.
97 ವರ್ಷದ ವಿಮಲಾ ರಂಗಾಚಾರ್ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಂದು ಕೊನೆಯುಸಿರೆಳೆದ ವಿಮಲಾ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ವಿರುದ್ಧ ಯತ್ನಾಳ್ ನೇತೃತ್ವದಲ್ಲಿ ಲಿಂಗಾಯತ ಮುಖಂಡರ ಸಭೆ – ಹೈಕಮಾಂಡ್ ಭೇಟಿಗೆ ತೀರ್ಮಾನ
1956ರಲ್ಲಿ ನಮ್ಮ ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ಮರುನಾಮಕರಣವಾದ ಸಂದರ್ಭದಲ್ಲಿ ಎಂಇಎಸ್ ಶಿಕ್ಷಣ ಸಂಸ್ಥೆಯನ್ನ ಮಲ್ಲೇಶ್ವರಂನಲ್ಲಿ ಪ್ರಾರಂಭ ಮಾಡುವಲ್ಲಿ ವಿಮಲಾ ಅವರ ಪಾತ್ರ ದೊಡ್ಡದು. ಮೈಸೂರಿನಲ್ಲಿ ಮಹಿಳೆಯರಿಗಾಗಿ ಶಿಕ್ಷಣ ಸಂಸ್ಥೆಯನ್ನು ಎಂಪಿಎಲ್ ಶಾಸ್ತ್ರಿ ಮತ್ತು ಎಂ ಚಿನ್ನಸ್ವಾಮಿ ಮತ್ತಿತರರ ಜೊತೆಗೂಡಿ ಆರಂಭಿಸಿದ ಕೀರ್ತಿ ವಿಮಲಾ ರಂಗಾಚಾರ್ ಅವರಿಗೆ ಸಲ್ಲುತ್ತದೆ.
ಭಾರತೀಯ ನಾಟ್ಯ ಸಂಘದ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದ ಅವರು, ಬೆಂಗಳೂರಿನ ಎಡಿಎ ರಂಗಮಂದಿರದ ಗೌರವ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಜೊತೆಗೆ ಶಿಕ್ಷಣ ಕ್ಷೇತ್ರ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅನನ್ಯವಾಗಿದೆ. ಬೆಂಗಳೂರಿನ ಸೇವಾ ಸದನವನ್ನು ವಿಮಲಾ ರಂಗಾಚಾರ್ ಕಟ್ಟಿ ಬೆಳೆಸಿದ್ದರು.
ವಿಮಲಾ ಅವರ ಪುತ್ರಿ ರೇವತಿ ವಿದೇಶದಲ್ಲಿದ್ದು, ಅವರು ಬೆಂಗಳೂರಿಗೆ ಬಂದ ಬಳಿಕ ಇದೇ ಫೆ.27 ರಂದು ಅಂತ್ಯಕ್ರಿಯೆ ನಡೆಯಲಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಬಳಿಕ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬವರ್ಗ ನಿರ್ಧರಿಸಿದೆ. ಇದನ್ನೂ ಓದಿ: Maha Shivaratri| ನಾಗ ಸಾಧುಗಳು ಶಿವನನ್ನು ಪೂಜಿಸೋದು ಯಾಕೆ?