ಮುಂಬೈ: ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಾಯಿಯ ಪಾತ್ರದಲ್ಲಿ ನಟಿಸಿದ ಹಿರಿಯ ನಟಿ ರೀಟಾ ಬಾದುರಿ ನಿಧನರಾಗಿದ್ದಾರೆ.
ರೀಟಾ ಅವರ ನಿಧನವಾಗಿರುವ ವಿಷಯವನ್ನು ಹಿರಿಯ ನಟ ಶಿಶಿರ್ ಶರ್ಮಾ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. “ಬಹಳ ದುಃಖದಿಂದ ನಾನು ಈ ವಿಷಯವನ್ನು ಹೇಳುತ್ತಿದ್ದೇನೆ. ರೀಟಾ ಬಾದುರಿ ಅವರು ನಮ್ಮೊಂದಿಗೆ ಇಲ್ಲ. ಅವರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಅವರು ನಮಗೆಲ್ಲಾ ತಾಯಿಯಾಗಿದ್ದರು. ಅವರು ನಮಗೆ ತುಂಬಾ ನೆನಪಾಗುತ್ತಾರೆ” ಎಂದು ಟ್ವೀಟ್ ಮಾಡಿದ್ದಾರೆ.
Advertisement
ಮೂಲಗಳ ಪ್ರಕಾರ ರೀಟಾ ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೀಟಾ ಎರಡು ದಿನಕ್ಕೆ ಒಂದು ಬಾರಿ ಆಸ್ಪತ್ರೆಗೆ ಹೋಗುತ್ತಿದ್ದರು ಎನ್ನಲಾಗಿದೆ. ರೀಟಾ ಈ ನಡುವೆ ‘ನಿಮಕಿ ಮುಖಿಯಾ’ದಲ್ಲಿ ಇಮರತಿ ದೇವಿ ಪಾತ್ರವನ್ನು ನಿರ್ವಹಿಸುತ್ತಿದ್ದರು. ಸೆಟ್‍ನಲ್ಲಿ ಕೆಲಸವಿಲ್ಲದ ಸಮಯದಲ್ಲಿ ರೀಟಾ ವಿಶ್ರಾಂತಿ ಪಡೆಯುತ್ತಿದ್ದರು. ರೀಟಾ ಅವರಿಗೆ 62 ವರ್ಷಗಳಾಗಿದ್ದು, ಅವರಿಗೆ ಅನುಕೂಲ ಆಗುವ ರೀತಿಯಲ್ಲಿ ಶೂಟಿಂಗ್ ಶೆಡ್ಯೂಲ್ ನಿರ್ಧರಿಸಲಾಗುತ್ತಿತ್ತು ಎಂದು ವರದಿಯಾಗಿದೆ.
Advertisement
Advertisement
ವಯಸ್ಸಾದ ಕಾಲದಲ್ಲಿ ಬರುವ ಕಾಯಿಲೆಗಳಿಂದ ಹೆದರಿ ಕೆಲಸ ಬಿಡಲು ಆಗುತ್ತಾ?. ನನಗೆ ಕೆಲಸ ಮಾಡಲು ಹಾಗೂ ನನ್ನನ್ನು ನಾನು ಬ್ಯುಸಿಯಾಗಿಡಲು ಇಷ್ಟಪಡುತ್ತೇನೆ. ನನಗೆ ಎಲ್ಲ ಸಮಯದಲ್ಲೂ ನನ್ನ ಕಾಯಿಲೆ ಬಗ್ಗೆ ಯೋಚಿಸುತ್ತಾ ಇರೋದಕ್ಕೆ ಇಷ್ಟವಿಲ್ಲ. ಹಾಗಾಗಿ ನಾನು ಯಾವಗಲೂ ಕೆಲಸದಲ್ಲಿ ತೊಡಗಿಕೊಂಡಿರುತ್ತೇನೆ. ನನ್ನನ್ನು ಅರ್ಥ ಮಾಡಿಕೊಳ್ಳುವ ಹಾಗೂ ಸಪೋರ್ಟ್ ಮಾಡುವ ಶೂಟಿಂಗ್ ತಂಡ ಸಿಕ್ಕಿದ್ದು ಅದೃಷ್ಟ ಎಂದು ರೀಟಾ ಈ ಹಿಂದೆ ಹೇಳಿದ್ದರು.
Advertisement
ರೀಟಾ ‘ಸಾರಾ ಬಾಯಿ ವಸ್‍ರ್ಸ್ ಸಾರಾ ಬಾಯಿ’, ‘ಅಮಾನತ್’, ‘ಏಕ್ ನಯೀ ಪೆಹೆಚಾನ್’ ಹಾಗೂ ‘ಬೈಬಲ್ ಕೀ ಕಹಾನೀಯಾ’ ಎಂಬ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದು, ಹಲವಾರು ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.