ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕನ್ನಡದ ಹಿರಿಯ ನಟಿ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ನಿನ್ನೆ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಸಿಎಂ ಕಚೇರಿಯಲ್ಲಿ ಭೇಟಿ ಮಾಡಿರುವ ತಾಯಿ ಮತ್ತು ಮಗ ಮಹತ್ತರ ಕಾರ್ಯಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದಾರೆ. ಲೀಲಾವತಿ ಅವರ ಕೆಲಸ ಕಂಡು ಸ್ವತಃ ಮುಖ್ಯಮಂತ್ರಿಗಳು ಶ್ಲ್ಯಾಘಿಸಿದ್ದಾರೆ.
Advertisement
ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಅವರು ತಾವು ನೆಲೆಸಿರುವ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಿದ್ದಾರೆ. ಆ ಆಸ್ಪತ್ರೆಯ ಉದ್ಘಾಟನೆಯನ್ನು ಮುಖ್ಯಮಂತ್ರಿಗಳ ಅಮೃತಹಸ್ತದಿಂದ ಮಾಡಿಸಬೇಕು ಎನ್ನುವುದು ಲೀಲಾವತಿ ಅವರ ಆಸೆಯಂತೆ. ಹಾಗಾಗಿ ಸಿಎಂ ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ:ನಟ ಕಮಾಲ್ ಖಾನ್ ಗೆ 14 ದಿನಗಳ ನ್ಯಾಯಾಂಗ ಬಂಧನ: ಕಣ್ಣೀರಿಟ್ಟ ಖಾನ್
Advertisement
Advertisement
ಈ ಹಿಂದೆ ಪುಟ್ಟದೊಂದು ಆಸ್ಪತ್ರೆ ಕಟ್ಟಿದ್ದರು ಲೀಲಾವತಿ. ಇದೀಗ ಪ್ರಾಥಮಿಕ ಚಿಕಿತ್ಸಾ ಕೇಂದ್ರವನ್ನು ಕಟ್ಟಿದ್ದಾರಂತೆ. ಚೆನೈ ನಲ್ಲಿ ಜಮೀನು ಮಾರಿದ ಹಣದಲ್ಲಿ ಈ ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ಉದ್ಘಾಟನೆಯ ನಂತರ ಈ ದವಾಖಾನೆಯನ್ನು ಸರಕಾರಕ್ಕೆ ಬಿಟ್ಟು ಕೊಡಲಿದ್ದಾರಂತೆ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಕುಮಾರ್.