ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕ ಕರುಣಾನಿಧಿ ಅವರು ಒಳ್ಳೆಯ ಸಾಹಿತಿ. ಮಾತ್ರವಲ್ಲದೆ ಸಕಲಕಲಾವಲ್ಲಭರಾಗಿದ್ದರು. ಎಲ್ಲಾ ಕಲೆಯಲ್ಲಿಯೂ ಅವರಿದ್ದರು. ಸಾಧ್ಯವಾಗಲ್ಲ ಅನ್ನೋ ವಿಷಯಗಳೇ ಅವರಿಗೆ ಇರಲಿಲ್ಲ ಅಂತ ಹಿರಿಯ ನಟಿ ಲೀಲಾವತಿ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, 60 ವರ್ಷ ತಮಿಳುನಾಡಿನಲ್ಲಿ ತೋಟ ಮಾಡಿಕೊಂಡಿದ್ದೆ. ನಾನು ಮಾತ್ರವಲ್ಲ ಎನ್ ಟಿ ರಾಮ್ ರಾವ್, ಚಿರಂಜಿವಿ ಹೀಗೆ ಎಲ್ಲ ಶ್ರೇಷ್ಠ ನಟರು ಅಲ್ಲೇ ಇದ್ದು ಬಂದವರು. ಇಲ್ಲಿ ನಮ್ಮ ಮೇಲೆ ಶೂಟೌಟ್ ಆಗಿದ್ದಾಗ ಅಲ್ಲಿನ ಪೇಪರ್ ನಲ್ಲಿ ಹಾಕಿದ್ದರು. ಪಾಪ ಕನ್ನಡದ ಕಲಾವಿದೆ ಲೀಲಾವತಿಗೆ ಅವರಿಗೆ ಯಾಕೆ ಅಲ್ಲಿ ತೊಂದರೆ ಮಾಡುತ್ತಿದ್ದಾರೆ ಅಂತ ಬರೆದಿದ್ದರಂತೆ. ಈ ಬಗ್ಗೆ ನಾನು ನೋಡಿಲ್ಲ. ಕೆಲ ಜನರು ಬಂದು ನನಗೆ ಹೇಳಿದ್ದರು ಎಂದು ತಿಳಿಸಿದರು.
ಜನರನ್ನು ಆಕರ್ಷಣೆ ಮಾಡುವ ಶಕ್ತಿ ಕರುಣಾನಿಧಿ ಅವರಲ್ಲಿತ್ತು. ಥಳ್ಳುವ ಗಾಡಿಯೊಂದಿಗೆ ಬಂದಾದ್ರೂ ಅವರು ಜನಗಳ ಜೊತೆಯೇ ಇರುತ್ತಿದ್ದರು. ಎಷ್ಟೋ ಜನರು ಸತ್ತಾಗ ಅವರ ಜೊತೆಗೆ ನಾನು ಸತ್ತು ಸತ್ತು ಹೋಗುತ್ತಿದ್ದೆ. ಆದ್ರೆ ಕರುಣಾನಿಧಿ ಅವರನ್ನು ನೋಡಿದಾಗ ನಾನು ಬದುಕಬೇಕು ಅನ್ನೋ ಆಸೆ ಹುಟ್ಟಿದೆ.
ಎಷ್ಟೇ ಕಷ್ಟ ಆದ್ರೂ ಚಕ್ರದ ಗಾಡಿಯಲ್ಲಿ ಬಂದು ಜನರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರು. ಕೈ ಎತ್ತಕ್ಕೆ ಆಗದಿದ್ದರೂ ಕಷ್ಟು ಪಟ್ಟಾದ್ರೂ ಕೈ ಎತ್ತಿ ಜನರಿಗೆ ಧನ್ಯವಾದ ತಿಳಿಸುತ್ತಿದ್ದರು ಅಂತ ಕಣ್ಣೀರು ಸುರಿಸಿದ್ರು.
https://www.youtube.com/watch?v=XBSxkFb20h4