ಬೆಂಗಳೂರು: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ…… ಈ ಹಾಡನ್ನು ನೀವೆಲ್ಲರೂ ಕೇಳಿ ನೋಡಿ ಆನಂದಿಸಿದ್ದಿರಾ. ಬ್ಲಾಕ್ ಆಡ್ ವೈಟ್ ತೆರೆಯ ಮೇಲೆ 55 ವರ್ಷಗಳ ಹಿಂದೆ ಕುಲವಧು ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ತಾರೆ ನಟಿ ಲೀಲಾವತಿ. ಲೀಲಾವತಿ ಅವರು ತಮ್ಮ ಮನೆಯಲ್ಲಿ ಪಬ್ಲಿಕ್ ಟಿವಿ ತಂಡದ ಜೊತೆ ಯುಗಾದಿ ಹಬ್ಬದಂದು ಅದೇ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.
Advertisement
ಕರುನಾಡ ಕನ್ನಡಿಗರ ಮನೆ ಮಾತಾಗಿರುವ 55 ವರ್ಷಗಳ ಹಿಂದಿನ ಕುಲವಧು ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ಹಿರಿಯ ನಟಿ ಡಾ. ಲೀಲಾವತಿಯವರು ಯುಗಾದಿ ಹಬ್ಬವನ್ನ ತಮ್ಮ ಮನೆಯಲ್ಲಿ ಸರಳವಾಗಿ ಆಚರಿಸಿದರು. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಮಗ ವಿನೋದ್ ರಾಜ್ ಹಾಗೂ ಮನೆಯ ಕೆಲಸಗಾರರ ಜೊತೆ ಲೀಲಾವತಿಯವರು ದೇವರಿಗೆ ಪೂಜೆ ಸಲ್ಲಿಸಿ ಬೇವು ಬೆಲ್ಲ ತಿಂದು ಸಂತಸಪಟ್ಟರು.
Advertisement
Advertisement
Advertisement
ಇದೇ ವೇಳೆ 1963ರಲ್ಲಿ ತಾವು ನಟಿಸಿರುವ ಕುಲವಧು ಚಿತ್ರದ ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ…. ಎಂಬ ಕರುನಾಡ ಕನ್ನಡಿಗರು ಮರೆಯಲಾಗದಂತಹ ಹಾಡಿಗೆ ಅಮ್ಮ-ಮಗ ಹೆಜ್ಜೆ ಹಾಕುವ ಮೂಲಕ ಯುಗಾದಿ ಹಬ್ಬವನ್ನ ಸಂಭ್ರಮಿಸಿದರು. ಐದುವರೆ ದಶಕದ ಹಿಂದಿನ ಕುಲವಧು ಚಿತ್ರದ ಸನ್ನಿವೇಶದ ಜೊತೆ ಮುಖ್ಯ ಪಾತ್ರವನ್ನ ನಟಿಸಿರುವ ವರನಟ ಡಾ.ರಾಜ್‍ರವರನ್ನು ನೆನೆದು ಲೀಲಾವತಿಯವರು ಕಣ್ಣೀರಿಟ್ಟರು.
ಒಟ್ಟಾರೆ ಮರೆಯಾಗದ ಮಾಣಿಕ್ಯದಂತಿರುವ ಐದುವರೆ ದಶಕದ ಹಿಂದಿನ ಕುಲವಧು ಚಿತ್ರದ ಹಾಡು, ಇಂದಿಗೂ ಯುಗಾದಿ ಹಬ್ಬದ ಸಂಭ್ರಮಕ್ಕೆ ರಾಜ್ಯದ ಜನರಲ್ಲಿ ಮನೆ ಮಾತಾಗಿಯೇ ಉಳಿದಿದೆ.