ಬೆಂಗಳೂರು: ಬಹುಭಾಷಾ ನಟಿ ಕೃಷ್ಣಕುಮಾರಿ ವಿಧಿವಶರಾಗಿದ್ದಾರೆ. 60-80 ರ ದಶಕದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಕೃಷ್ಣಕುಮಾರಿ ಇಂದು ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೃಷ್ಣಕುಮಾರಿ ನೈಹಾತಿಯ ತೆಲಗು ಬ್ರಾಹ್ಮಾಣ ಕುಟುಂಬದಲ್ಲಿ ಜನಿಸಿದ್ದರು. ನಂತರ ಅಜಯ್ ಮೋಹನ್ ಕೈತಾನ್ ಎಂಬುವರ ಜೊತೆ ಮದುವೆಯಾಗಿ ಸಿನಿಲೋಕದಿಂದ ದೂರ ಉಳಿದಿದ್ದರು. ಅವರಿಗೆ ಒಂದು ಹೆಣ್ಣು ಮಗಳಿದ್ದು, ಸುಮಾರು ವರ್ಷಗಳಿಂದ ಮಗಳ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಇವರ ಸಹೋದರಿ ಸಾಹುಕರ್ ಜಾನಕಿ ಕೂಡ ಸ್ಟಾರ್ ನಟಿಯಾಗಿ ಮಿಂಚಿದ್ದರು.
Advertisement
Advertisement
ತೆಲುಗು, ತಮಿಳು, ಕನ್ನಡ ಮಲಯಾಳಂ ಹಾಗು ಹಿಂದಿ ಸೇರಿದಂತೆ ಸುಮಾರು 230ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೃಷ್ಣಕುಮಾರಿ ನಟಿಸಿದ್ದರು. 1951ರಲ್ಲಿ ನವ್ವಿತೆ ನವರತ್ನುಲು ಎಂಬ ತೆಲುಗು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕೃಷ್ಣ ಕುಮಾರಿ, ಡಾ.ರಾಜ್ ಕುಮಾರ್, ಎನ್‍ಟಿಆರ್, ಎಎನ್‍ಆರ್, ಶಿವಾಜಿ ಗಣೇಶನ್ ರಂತಹ ಸ್ಟಾರ್ ನಟರ ಜೊತೆ ನಟಿಸಿದ್ದರು.
Advertisement
ಭಕ್ತ ಕನಕದಾಸ, ಆಶಾ ಸುಂದರಿ, ಶ್ರೀಶೈಲಾ ಮಹಾತ್ಮೆ, ಸ್ವರ್ಣಗೌರಿ ದಶಾವತಾರ, ಭಕ್ತ ಕಬೀರಾ, ಚಂದ್ರಕುಮಾರ ಸೇರಿದಂತೆ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಕೃಷ್ಣಕುಮಾರಿ ಅಭಿನಯಿಸಿದ್ದಾರೆ.