ಮುಂಬೈ: ಹಿರಿಯ ನಟಿ ತಬಸ್ಸುಮ್ (Tabassum) (78) ಅವರಿಂದು ಹೃದಯಾಘಾತದಿಂದ (HeartAttack) ನಿಧನರಾಗಿದ್ದಾರೆ.
ಬಾಲ ಕಲಾವಿದೆಯಾಗಿ ಮತ್ತು ಜನಪ್ರಿಯ ದೂರದರ್ಶನ ಟಾಕ್ ಶೋ (Tv TalkShow) ನಿರೂಪಕಿಯಾಗಿ ಹೆಸರುವಾಸಿಯಾಗಿದ್ದ ತಬಸ್ಸುಮ್ ಹೃದಯಾಘಾತದಿಂದ (HeartAttack) ಸಾವನ್ನಪ್ಪಿದ್ದಾರೆ ಎಂದು ಅವರ ಪುತ್ರ ಹೋಶಾಂಗ್ ಗೋವಿಲ್ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರದ್ಧಾ ಭೀಕರ ಹತ್ಯೆ ತೆರೆಯ ಮೇಲೆ ತರಲು ಪ್ಲ್ಯಾನ್ – ಸಿನಿಮಾ ನಿರ್ಮಾಣ ಘೋಷಿಸಿದ ನಿರ್ದೇಶಕ ಮನೀಶ್ ಸಿಂಗ್
Advertisement
Advertisement
ಕೆಲ ದಿನಗಳ ಹಿಂದೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಗ್ಯಾಸ್ಟ್ರೋ ಸಮಸ್ಯೆಯಿಂದ (ಗ್ಯಾಸ್ಟ್ರಿಕ್) ತಪಾಸಣೆಗಾಗಿ ಆಸ್ಪತ್ರೆಗೆ ಹೋದಾಗ ಶುಕ್ರವಾರ ರಾತ್ರಿ 8:40 ಮತ್ತು 8:42ಕ್ಕೆ ಎರಡು ಬಾರಿ ಹೃದಯಾಘಾತದ ನಂತರ ಅವರು ಸಾವನ್ನಪ್ಪಿದ್ದಾಗಿ ಹೋಶಾಂಗ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಾಲಿವುಡ್‌ಗೆ ಹಾರಿದ ಹೊಂಬಾಳೆ ಫಿಲ್ಮ್ಸ್ : ಸದ್ಯದಲ್ಲೇ ಹಿಂದಿ ಸಿನಿಮಾ ಘೋಷಣೆ
Advertisement
Advertisement
1947 ರಲ್ಲಿ ಬಾಲನಟಿಯಾಗಿ ತನ್ನ ವೃತ್ತಿಜೀವನ ಪ್ರಾರಂಭಿಸಿದ ತಬಸ್ಸುಮ್ ಬಾಲ ಕಲಾವಿದೆಯಾಗಿ ಬೇಬಿ ತಬಸ್ಸುಮ್ (Tabassum) ಎಂದೇ ಖ್ಯಾತರಾಗಿದ್ದರು. 1940ರ ದಶಕದ ಉತ್ತರಾರ್ಧದಲ್ಲಿ ನರ್ಗೀಸ್, ಮೇರಾ ಸುಹಾಗ್, ಮಂಜಧರ್ ಮತ್ತು ಬರಿ ಬೆಹೆನ್‌ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ದೂರದರ್ಶನದಲ್ಲಿ 1972 ರಿಂದ 1993 ರವರೆಗೆ ಫೂಲ್ ಖಿಲೆ ಹೈ ಗುಲ್ಶನ್ ಗುಲ್ಶನ್ ಎಂಬ ಪ್ರಸಿದ್ಧ ಟಾಕ್ ಶೋ ನಿರೂಪಕಿಯಾಗಿಯೂ ಹೆಸರು ಮಾಡಿದ್ದರು.