ಕನ್ನಡದ ಪ್ರಪಂಚ ಕುಳ್ಳ, ನಟ ದ್ವಾರಕೀಶ್ (Dwarakish) ನಿಧನಕ್ಕೆ (death) ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಕಂಬನಿ ಮಿಡಿದ್ದಾರೆ. ಹಿರಿಯ ನಟಿ ಬಿ.ಸರೋಜಾದೇವಿ, ಭವ್ಯ, ಜಯಮಾಲಾ, ನಿರ್ದೇಶಕ ಭಾರ್ಗವ, ನಟ ದೊಡ್ಡಣ್ಣ, ರಮೇಶ್ ಅರವಿಂದ್, ಶಿವರಾಜ್ ಕುಮಾರ್ ಸೇರಿದಂತೆ ಹಲವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಅಗಲಿದ ಹಿರಿಯ ನಟನಿಗೆ ಸಂತಾಪ (Condolence) ವ್ಯಕ್ತ ಪಡಿಸಿದ್ದಾರೆ.
Advertisement
ಅಲ್ಲದೇ ದರ್ಶನ್ (Darshan), ಶರಣ್, ನೀನಾಸಂ ಸತೀಶ್, ನಿರ್ದೇಶಕ ಆರ್. ಚಂದ್ರು ಸೇರಿದಂತೆ ಹಲವು ಗಣ್ಯರು ಸೋಷಿಯಲ್ ಮೀಡಿಯಾದ ಮೂಲಕ ತಮ್ಮ ಸಂತಾಪವನ್ನೂ ಸೂಚಿಸಿದ್ದಾರೆ. ಹಿರಿಯ ನಟ ಸಾಧನೆಯನ್ನು ಗುಣಗಾನ ಮಾಡಿದ್ದಾರೆ.
Advertisement
Advertisement
ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ ‘ಪ್ರಚಂಡ ಕುಳ್ಳ’ನಾಗಿ 5 ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ನಟ ದರ್ಶನ್ ಬರೆದುಕೊಂಡಿದ್ದಾರೆ.
Advertisement
ನಮ್ಮ ಕನ್ನಡ ಚಿತ್ರರಂಗದ ಹಿರಿಯರನ್ನು ಕಳೆದುಕೊಂಡ ಅನಾಥ ಭಾವನೆ ಕಾಡುತ್ತಿದೆ. ದ್ವಾರಕೀಶ್ ರವರ ಸಾಧನೆಗಳ ಬಗ್ಗೆ ಮಾತಾಡುವಷ್ಟು ನಾನು ದೊಡ್ಡವನಲ್ಲ. ನೀವು ನಮಗೆ ಇಟ್ಟ ಭದ್ರವಾದ ಅಡಿಪಾಯ ನಮ್ಮನೆಲ್ಲ ಇಂದಿಗೂ ಕಾಯುತ್ತಿದೆ. ಹೋಗಿ ಬನ್ನಿ ಕರ್ನಾಟಕದ ಪ್ರೀತಿಯ ಕುಳ್ಳ. ನಿಮ್ಮ ಕಥೆಗಳ ಭಕ್ತನಾಗಿ ಉಳಿಯುವವ ಎಂದು ನಟ ಶರಣ್ ಕಂಬನಿ ಮಿಡಿದಿದ್ದಾರೆ.
ನಿರ್ದೇಶಕ ಆರ್. ಚಂದ್ರು, ಕನ್ನಡ ನಾಡು ಕಂಡ ಅಪ್ರತಿಮ ದಿಗ್ಗಜ ನಟ, ನಿರ್ಮಾಪಕ ಮತ್ತು ನಿರ್ದೇಶಕ ದ್ವಾರಕೀಶ್ ಸರ್. ನೀವು ಹಾಕಿ ಕೊಟ್ಟ ಹಾದಿಯಲ್ಲಿ ಕನ್ನಡ ಚಲನಚಿತ್ರ ರಂಗ ನಡೆಯುತ್ತಿದೆ ಅಂದ್ರೆ ಅತಿಶಯೋಕ್ತಿ ಅಲ್ಲ. ನಿಮ್ಮ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಮತ್ತೆ ಹುಟ್ಟಿ ಬನ್ನಿ ಸರ್ ಎಂದು ಹೇಳಿದ್ದರೆ, ನಟ ನೀನಾಸಂ ಸತೀಶ್, ಕನ್ನಡಕ್ಕೆ,ಕನ್ನಡ ಚಿತ್ರರಂಗಕ್ಕೆ ನಿಮ್ಮ ಸೇವೆ ಅಪಾರ,ನಮ್ಮ ಬಾಲ್ಯ ಸಿನಿಬದುಕು ಚೆಂದವಾಗಿರಲು ನಿಮ್ಮ ಸಿನಿಮಾಗಳು ಕಾರಣ.ಕನ್ನಡ ಚಿತ್ರರಂಗದ ಶ್ರೀಮಂತಿಕೆಗೆ ನೀವು ಬಹು ಕಾರಣ ಅಂತಿಮ ನಮನಗಳು ಸರ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.