ಜೋಳದ ಹಿಟ್ಟನ್ನು ಬಳಸಿ ಅತ್ಯಂತ ಸುಲಭವಾಗಿ ದೋಸೆ ತಯಾರಿಸುವುದು ಹೇಗೆ ಎಂಬುದು ನಿಮಗೆ ಗೊತ್ತಾ? ತುಂಬಾನೇ ಸರಳವಾಗಿ ಹಾಗೂ ಆರೋಗ್ಯಕರವಾಗಿ ಜೋಳದ ದೋಸೆಯನ್ನು ದಿಢೀರ್ ಅಂತಲೇ ತಯಾರಿಸಬಹುದು. ಚಟ್ನಿಯೊಂದಿಗಿನ ಇದರ ಸ್ವಾದ ಎಂತಹವರನ್ನೂ ತನ್ನ ಅಭಿಮಾನಿಯನ್ನಾಗಿ ಮಾಡಬಲ್ಲುದು. ಸಿಂಪಲ್ ಆಗಿ ಮಾಡಬಹುದಾಗ ಜೋಳದ ದೋಸೆ ರೆಸಿಪಿ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ಜೋಳದ ಹಿಟ್ಟು – ಒಂದೂವರೆ ಕಪ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – 4 ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಕತ್ತರಿಸಿದ ಕರಿಬೇವಿನ ಎಲೆಗಳು – ಸ್ವಲ್ಪ
ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 2
ಜೀರಿಗೆ – 1 ಟೀಸ್ಪೂನ್
ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಎಣ್ಣೆ – ದೋಸೆ ತಯಾರಿಸಲು ಬೇಕಾಗುವಷ್ಟು ಇದನ್ನೂ ಓದಿ: ಫಟಾಫಟ್ ಅಂತ ಮಾಡ್ಬೋದು ಕೇಸರ್ ಪೇಡ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಜೋಳದ ಹಿಟ್ಟನ್ನು ತೆಗೆದುಕೊಳ್ಳಿ. ಅದಕ್ಕೆ ಉಪ್ಪು ಹಾಗೂ ನೀರನ್ನು ಸೇರಿಸಿ ಗಂಟಿಲ್ಲದಂತೆ ಮಿಶ್ರಣ ಮಾಡಿ.
* ಈಗ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಎಲೆಗಳು, ಮೆಣಸಿನಕಾಯಿ, ಜೀರಿಗೆ ಮತ್ತು ಕರಿಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಅದನ್ನು 10 ನಿಮಿಷಗಳ ಕಾಲ ವಿಶ್ರಾಂತಿಗೆ ಬಿಡಿ.
* ಬಳಿಕ ಹಿಟ್ಟಿನ ಸ್ಥಿರತೆಯನ್ನು ನೋಡಿ, ಅಗತ್ಯವಿದ್ದಲ್ಲಿ ಸ್ವಲ್ಪ ನೀರು ಸೇರಿಸಿ.
* ಈಗ ಪ್ಯಾನ್ ಅನ್ನು ಬಿಸಿಗಿಟ್ಟು, ಒಂದು ಸೌಟು ಹಿಟ್ಟನ್ನು ಪ್ಯಾನ್‌ನಲ್ಲಿ ತೆಳುವಾಗಿ ಹರಡಿ.
* ಅದರ ಮೇಲೆ 1 ಟೀಸ್ಪೂನ್ ಎಣ್ಣೆ ಹಾಕಿ, ಗರಿಗರಿಯಾಗುವವರೆಗೆ ಹುರಿಯಿರಿ.
* ಇದೀಗ ಜೋಳದ ದೋಸೆ ತಯಾರಾಗಿದ್ದು, ಅದನ್ನು ಚಟ್ನಿಯೊಂದಿಗೆ ಸವಿದರೆ ಸೂಪರ್ ಆಗಿರುತ್ತದೆ. ಇದನ್ನೂ ಓದಿ: ಎಷ್ಟೊಂದು ರುಚಿಕರ ಆಲೂ ಟಿಕ್ಕಿ ಕಬಾಬ್