ಚಿಕ್ಕಮಗಳೂರು: ಕಳೆದೊಂದು ತಿಂಗಳಿಂದ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿದ್ದ ಮಳೆ, ಇದೀಗ ಬಯಲುಸೀಮೆ ಭಾಗವಾದ ಕಡೂರು-ತರೀಕೆರೆಗೂ ಕಾಲಿಟ್ಟಿದೆ.
ಕಳೆದ ಮೂರು ದಿನಗಳಿಂದ ತರೀಕೆರೆ ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಕೆಮ್ಮಣ್ಣುಗುಂಡಿ ಸಮೀಪದ ಹೆಬ್ಬೆ ಜಲಪಾತದ ಸೊಬಗನ್ನ ನೋಡಲು ಎರಡು ಕಣ್ಣು ಸಾಲದಂತಾಗಿದೆ. ಧುಮ್ಮಿಕ್ಕುತ್ತಿರುವ ಜಲಧಾರೆಯನ್ನ ವರ್ಣಿಸಲು ಪದಗಳೇ ಇಲ್ಲವಾಗಿದೆ.
ತರೀಕೆರೆಯ ಕೆಮ್ಮಣ್ಣುಗುಂಡಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಲ್ಲತ್ತಿಗರಿ ಹಾಗೂ ಕೆಮ್ಮಣ್ಣುಗುಂಡಿಯಲ್ಲಿ ಜಲವೈಭವವೇ ಮನೆಮಾಡಿದೆ. ಸುಮಾರು 50-60 ಅಡಿ ಎತ್ತರದಿಂದ ಹಾಲ್ನೊರೆಯಂತೆ ಬೀಳುತ್ತಿರುವ ಹೆಬ್ಬೆ ಫಾಲ್ಸ್‍ನ ನೋಡಲು ಪ್ರವಾಸಿಗರು ಮುಗಿ ಬಿದ್ದಿದ್ದಾರೆ. ಸುತ್ತಲೂ ಕಾಫಿ ತೋಟ ಹಾಗೂ ದಟ್ಟ ಕಾನನ. ಅದರ ಮಧ್ಯೆ ಹಕ್ಕಿಗಳ ಚಿಲಿಪಿಲಿ ಜತೆ ಧುಮ್ಮುಕುತ್ತಿರುವ ಜಲಧಾರೆ ಪ್ರವಾಸಿಗರಿಗೆ ಹಾಟ್ ಸ್ಪಾಟ್ ಆಗಿದೆ.