ಉಡುಪಿ: ಪ್ರತಿಯೊಬ್ಬರಿಗೂ ಶಿಕ್ಷಣ ಇದೆ. ಎಲ್ಲಾ ವಿಚಾರಗಳು ಗೊತ್ತಿವೆ. ಯಾರೂ ಯಾವ ದೇವರನ್ನಾದರೂ ಪೂಜೆ ಮಾಡಬಹುದು. ವೈಯಕ್ತಿಕ ಹಕ್ಕನ್ನು ತಡೆಯಲು ನೀವು ಯಾರು ಎಂದು ಕಾಂಗ್ರೆಸ್ ಪ್ಯಾನಲಿಸ್ಟ್, ಕ್ರೈಸ್ತ ನಾಯಕಿ ವೆರೋನಿಕಾ ಕರ್ನೇಲಿಯೋ ಕಿಡಿಕಾರಿದ್ದಾರೆ.
ಜಿಲ್ಲೆಯ ಕಾರ್ಕಳದಲ್ಲಿ ಕ್ರೈಸ್ತ ಮತಾಂತರ ಕೇಂದ್ರದ ಮೇಲೆ ಹಿಂದೂ ಜಾಗರಾಣಾ ವೇದಿಕೆ ಎರಡು ದಿನದ ಹಿಂದೆ ದಾಳಿ ಮಾಡಿದೆ. ಈ ಘಟನೆಗೆ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವೆರೋನಿಕಾ, ಮಹಿಳೆಯರು ಮತ್ತು ಭಕ್ತಾದಿಗಳ ಮೇಲೆ ಹಲ್ಲೆ ಖಂಡನೀಯ. ಉಡುಪಿ ಸುಶಿಕ್ಷಿತರ ಜಿಲ್ಲೆ, ಸೌಹಾರ್ದತೆಯ ಜಿಲ್ಲೆ. ಯಾರು ಯಾವ ದೇವರನ್ನು ಪೂಜಿಸಬೇಕು ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ ಎಂದರು. ಇದನ್ನೂ ಓದಿ: ಭೀಮಾ ನದಿ ಪ್ರವಾಹ ಆತಂಕ – ನದಿ ತೀರಕ್ಕೆ ತೆರಳದಂತೆ ಡಿಸಿ ರಾಗಾಪ್ರಿಯಾ ಸೂಚನೆ
ಯಾವ ದೇವರನ್ನು ಪೂಜಿಸಬೇಕು ಎಂಬ ಸ್ವಾತಂತ್ರ್ಯವನ್ನು ಸಂವಿಧಾನ ನಮಗೆ ನೀಡಿದೆ. ಬಲವಂತದ ಮತಾಂತರ ಎಂಬೂದು ಸುಳ್ಳು ಆರೋಪ. ಮತಾಂತರ ನಡೆಯುತ್ತಿದೆ ಎಂದು ನಿಮಗೆ ಹೇಳಿದವರು ಯಾರು? ನಮ್ಮನ್ನು ಬಲವಂತವಾಗಿ ಕರೆತಂದಿದ್ದಾರೆ ಎಂದು ಹೇಳಿದ್ದಾರಾ? ದೇಶದ ಸಂವಿಧಾನ ಗೌರವಿಸುವವರು ಪೊಲೀಸರಿಗೆ ದೂರು ಕೋಡಬೇಕಿತ್ತು. ಇಲಾಖೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬಹುದಿತ್ತು ಎಂದರು. ಇದನ್ನೂ ಓದಿ: ನಳೀನ್ ಕುಮಾರ್ ಕಟೀಲ್ ಒಬ್ಬ ಜೋಕರ್: ಶರಣ್‍ಪ್ರಕಾಶ್ ಪಾಟೀಲ್
ಹಿಂದೂ ಸಂಸ್ಕøತಿಯ ಬಗ್ಗೆ ಮಾತನಾಡುವವರು ಈ ರೀತಿ ಮಾಡುವುದು ಸರಿಯಲ್ಲ. ದಾಳಿ ನಡೆಸುವುದು ಯಾವ ರೀತಿಯ ಸಂಸ್ಕೃತಿ? ಉಸ್ತುವಾರಿ ಸಚಿವ ಸುನಿಲ್ ಕುಮಾರ್ ತವರೂರಲ್ಲೇ ಈ ಘಟನೆ ನಡೆದಿದೆ. ಇದು ಜಿಲ್ಲೆಯ ಹಿಂದುಗಳು ಕೂಡಾ ತಲೆತಗ್ಗಿಸುವ ವಿಚಾರ. ಹಿಂದು ಜಾಗರಣ ವೇದಿಕೆ ಬೇಕಾದಷ್ಟು ಇತರ ವಿಚಾರಗಳಿವೆ. ಜಿಲ್ಲೆಯ ಜನರು ಕಷ್ಟದಲ್ಲಿದ್ದಾರೆ ಅದಕ್ಕೆ ಸ್ಪಂದಿಸಿ. ಶಾಂತಿಯುತವಾಗಿ ಮನವೊಲಿಸುವ ಕೆಲಸ ಮಾಡಿ ಎಂದು ಕರ್ನೇಲಿಯೋ ಸಲಹೆ ನೀಡಿದರು.