ಬೆಂಗಳೂರು: ಚಾಕ್ಲೇಟ್ ಅಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಪ್ರೇಮ ಪಕ್ಷಿಗಳಿಗಂತೂ ಚಾಕ್ಲೇಟ್ಸ್ ಅಂದರೆ ಹಾಟ್ ಫೇವರೇಟ್. ಹೀಗಾಗಿ ಪ್ರೇಮಿಗಳ ದಿನ ಹಾಗೂ ಚಾಕ್ಲೇಡ್ ಡೇ ಗಾಗಿ ಸ್ಪೆಷಲ್ ಆಗಿ ಚಾಕ್ಲೇಟ್‍ಗಳು ತಯಾರಾಗಿವೆ.
ನಗರದ ಚಾಕ್ಲೇಟ್ಸ್ ಜಂಕ್ಷನ್ ಸೇರಿದಂತೆ ಬಹುತೇಕ ಶಾಪ್‍ಗಳಲ್ಲಿ ಚಾಕ್ಲೇಟ್ಸ್ ಗಳು ಕಮಾಲ್ ಮಾಡುತ್ತಿವೆ. ಅವುಗಳನ್ನು ಪ್ರೇಮಿಗಳು ಲವ್ ಸಿಂಬಲ್ ಆಗಿ ಬಳಸುತ್ತಿದ್ದಾರೆ. ಪ್ಲೇನ್, ಆರೆಂಜ್, ನೆಟ್ಸ್, ಬಟರ್ ಸ್ಕಾಚ್, ಡಾರ್ಕ್, ಕಾಫಿ ಸೇರಿದಂತೆ 70 ಬಗೆಯ ಚಾಕ್ಲೇಟ್‍ಗಳಲ್ಲಿ ಪ್ರೀತಿಯ ಮೊಗ್ಗು ಅರಳಿದೆ ಎಂದು ಮಾಲೀಕರಾದ ಅನುಪಮಾ ಅಮರನಾಥ್ ಹೇಳಿದ್ದಾರೆ.
Advertisement
Advertisement
ಫೆಬ್ರವರಿ 14ಕ್ಕೆ ಮೊದಲೇ ಪ್ರೇಮಿಗಳ ಹಬ್ಬ ಆರಂಭವಾಗುತ್ತದೆ. ಈ ತಿಂಗಳ ಮೊದಲ ವಾರ, ರೋಜ್ ಡೇ, ಚಾಕ್ಲೇಟ್ಸ್ ಡೇ, ಹಗ್ ಡೇ, ಕಿಸ್ ಡೇಗಳು ಬರುತ್ತವೆ. ಅದರಂತೆ ಶನಿವಾರ ಚಾಕ್ಲೇಟ್ ಡೇ ಆಗಿತ್ತು. ಪ್ರಿಯಕರ ತನ್ನ ತನ್ನ ಪ್ರೇಯಸಿಗೆ ಪ್ರೀತಿಯ ಸಂಕೇತವಾಗಿ ಚಾಕ್ಲೇಟ್ಸ್ ತಿನ್ನಿಸಿ ಐ ಲವ್ ಯೂ ಎಂದು ಹೇಳುತ್ತಾರೆ. ಹೀಗಾಗಿ ಹಾರ್ಟ್ ಶೆಪ್, ಗುಲಾಬಿ, ಲಾಲಿಪಪ್ ಚಾಕ್ಲೇಟ್ ಗಳು ರೆಡಿಯಾಗಿದ್ದು, ಇವುಗಳನ್ನು ನೋಡಿದ ತಕ್ಷಣವೇ ರೊಮ್ಯಾಂಟಿಕ್ ಫೀಲ್ ಬರುತ್ತದೆ ಎಂದು ಗ್ರಾಹಕಿ ಶಾಂತಾ ಹೇಳಿದ್ದಾರೆ.
Advertisement
Advertisement
ಗರ್ಲ್ ಫ್ರೆಂಡ್‍ಗೆ ಪ್ರಪೋಸ್ ಮಾಡಲು ಚಾಕ್ಲೇಟ್ ಬೊಕ್ಕೆಗಳನ್ನು ತಯಾರಿಸಲಾಗಿದ್ದು, ಭಾರೀ ಡಿಮ್ಯಾಂಡ್ ಬಂದಿದೆ. ಇವುಗಳ ಜೊತೆಗೆ ವಿಶೇಷವಾಗಿ ಪ್ರಣಯ ಪಕ್ಷಿಗಳಿಬ್ಬರ ಭಾವಚಿತ್ರಗಳನ್ನು ಚಾಕ್ಲೇಟ್ಸ್ ನಲ್ಲಿ ಅರಳಿಸಿ, ಲವ್ ಈಸ್ ಗಾಡ್ ಎಂದು ಸಾರಲಾಗುತ್ತಿದೆ ಎಂಬುದಾಗಿ ಕಾಲೇಜು ವಿದ್ಯಾರ್ಥಿನಿ ಸುಕೃತಿ ಹೇಳಿದ್ದಾಳೆ.
ಒಟ್ಟಿನಲ್ಲಿ ಪ್ರೇಮಿಗಳ ದಿನ ಹತ್ತಿರವಾಗುತ್ತಿದ್ದಂತೆಯೇ ಪ್ರಿಯಕರ ತನ್ನ ಪ್ರಿಯತಮೆನ್ನು ಒಲಿಸಿಕೊಳ್ಳುವುದಕ್ಕೆ ಡಿಫರೆಂಟ್ ಡಿಫರೆಂಟ್ ಚಾಕ್ಲೇಟ್ ಗಳು ಮಾರ್ಕೆಟ್‍ಗೆ ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv