ವಿಜಯನಗರ: ಚೈತ್ರಾ ಕುಂದಾಪುರ (Chaithra Kundapura) ಹಾಗೂ ಗ್ಯಾಂಗ್ ನಡೆಸಿರುವ ಡೀಲ್ ಪ್ರಕರಣದ ವಿಚಾರಣೆಯನ್ನು ಸಿಸಿಬಿ (CCB) ಪೊಲೀಸರು ತೀವ್ರವಾಗಿ ನಡೆಸುತ್ತಿದ್ದಾರೆ. ವಂಚನೆ ಪ್ರಕರಣದಲ್ಲಿ (Fraud Case) ಸಿಸಿಬಿ ಪೊಲೀಸರು ಬಂಧಿಸಿರುವ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪ ಸ್ವಾಮೀಜಿಯನ್ನು (Halashree Swamiji) ಹರಪನಹಳ್ಳಿ ಸರ್ಕಾರಿ ಪ್ರವಾಸಿ ಮಂದಿರದ ಗಣ್ಯರ ಅತಿಥಿಗೃಹದಲ್ಲಿ ಇಡೀ ದಿನ ವಿಚಾರಣೆಗೆ ಒಳಪಡಿಸಿದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಬುಧವಾರ ರಾತಿ ಹಾಲಶ್ರೀಯನ್ನು ಹಿರೇಹಡಗಲಿ ಮಠಕ್ಕೆ ಕರೆದೊಯ್ದು ಮಹಜರು ನಡೆಸಿದ ಬಳಿಕ ಮಧ್ಯರಾತ್ರಿ 12:30ಕ್ಕೆ ಹರಪನಹಳ್ಳಿಯ ಪ್ರವಾಸಿ ಮಂದಿರ ಮತ್ತು ಗಣ್ಯರ ಅತಿಥಿಗೃಹದ ತಲಾ ಎರಡು ಕೊಠಡಿಗಳನ್ನು ಸಿಸಿಬಿ ತಂಡ ಪಡೆದಿತ್ತು. ತಡರಾತ್ರಿ ಊಟ ಮಾಡಿ, ನಸುಕಿನ ಜಾವ 3:30ರವರೆಗೆ ವಿಚಾರಣೆ ನಡೆಯಿತು. ಇದನ್ನೂ ಓದಿ: ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟ – ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೇ ಸಾವು
Advertisement
Advertisement
ಕೆಲ ಹೊತ್ತು ವಿಶ್ರಾಂತಿ ಪಡೆದ ಬಳಿಕ ಬೆಳಗ್ಗೆ 9 ಗಂಟೆಯಿಂದ ವಿಚಾರಣೆ ಮುಂದುವರೆಯಿತು. ಸಂಜೆ 4:30ಕ್ಕೆ ಪುನಃ ಹಿರೇಹಡಗಲಿಯತ್ತ ವಾಹನಗಳು ತೆರಳಿದಾಗ, ಹಾಲಶ್ರೀ ಸ್ವಾಮೀಜಿ ಮುಖವನ್ನು ಶಾಲಿನಿಂದ ಮುಚ್ಚಿ ಮಠಕ್ಕೆ ಕರೆತರಲಾಗಿತ್ತು. ಇದನ್ನೂ ಓದಿ: ಡಾನ್ಸ್ ಕ್ಲಾಸ್‌ಗೆ ಹೋಗಬೇಡ ಎಂದ ಪೋಷಕರು – ಮನನೊಂದು ಯುವತಿ ಆತ್ಮಹತ್ಯೆ
Advertisement
Advertisement
ಹಿರೇಹಡಗಲಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ (KGB) ಮತ್ತು ಬಿಡಿಸಿಸಿ ಬ್ಯಾಂಕ್‌ಗೆ ಸಿಸಿಬಿ ಪೊಲೀಸರು ಭೇಟಿ ನೀಡಿ ಸ್ವಾಮೀಜಿ ಹೊಂದಿರುವ ಖಾತೆಗಳ ಮಾಹಿತಿ ಪಡೆದರು. ಪಡೆದರು. ಕೆಜಿಬಿ ಬ್ಯಾಂಕ್‌ನಲ್ಲಿ ಸ್ವಾಮೀಜಿಗೆ ಸೇರಿದ ಲಾಕರ್ ತೆಗೆಸಿ ಪರಿಶೀಲಿಸಿದರು. ಹೂವಿನಹಡಗಲಿ ಐಡಿಎಫ್‌ಸಿ ಬ್ಯಾಂಕ್‌ನಲ್ಲಿನ ಸ್ವಾಮೀಜಿ ಖಾತೆಯ ಹಣಕಾಸು ವಹಿವಾಟಿನ ದಾಖಲೆಯನ್ನು ಸಿಸಿಬಿ ಪೊಲೀಸರು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಸಾಬೂನು ಕಾರ್ಖಾನೆಗೆ ತ್ವರಿತ ಗತಿಯಲ್ಲಿ ಕಾರ್ಪೊರೇಟ್ ರೂಪ: ಎಂ.ಬಿ ಪಾಟೀಲ್
Web Stories