ಉಡುಪಿ: ಬಾನಲ್ಲಿ ಬೆಳ್ಳಿ ಚುಕ್ಕಿಗಳ ನಡುವೆ ಶುಕ್ರ ಗ್ರಹ (Venus) ಈಗ ಅತ್ಯಂತ ಸುಂದರವಾಗಿ ಗೋಚರಿಸಲಿದೆ. ಸುಮಾರು 19 ತಿಂಗಳಿಗೊಮ್ಮೆ ಸಂಜೆಯ ಪಶ್ಚಿಮ ಆಕಾಶದಲ್ಲಿ ವಿಜೃಂಭಿಸುವ ಶುಕ್ರ ಸುಮಾರು 43 ಡಿಗ್ರಿ ಎತ್ತರದಲ್ಲಿ ಹೊಳೆಯುತ್ತಿದೆ.
Advertisement
ಜುಲೈ ತಿಂಗಳ ಅಂತ್ಯದವರೆಗೂ ಶುಕ್ರ ಹೊಳೆಯುತ್ತಾ ಆಗಸ್ಟ್ ಪ್ರಾರಂಭದಲ್ಲಿ ಕಣ್ಮರೆಯಾಗುತ್ತದೆ. ಆಗಸ್ಟ್ 8 ರಿಂದ ಆಗಸ್ಟ್ 19 ರವರೆಗೆ ಸೂರ್ಯನಿಗೆ (Sun) ನೇರ ಬಂದು ಕಾಣದಾದಾಗ ಆ ವಿದ್ಯಾಮಾನವನ್ನು ಶುಕ್ರಾಸ್ತ ಎನ್ನಲಾಗುತ್ತದೆ. ನಂತರ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಶುಕ್ರನ ಗೋಚರವಾಗಲಿದೆ. ಮೇ 30 ರಿಂದ ಭೂಮಿಗೆ ಸಮೀಪಿಸುತ್ತಿದ್ದಂತೆ ದಿನದಿಂದ ದಿನಕ್ಕೆ ದಿಗಂತದೆಡೆಗೆ ಕೆಳಗಿಳಿಯುತ್ತಾ, ಪ್ರಭೆ ಹೆಚ್ಚಿಸಿಕೊಳ್ಳುತ್ತಾ ಜುಲೈ 7 ರಂದು ಅತಿ ಹೆಚ್ಚಿನ ಪ್ರಭೆಯಲ್ಲಿ ಕಂಗೊಳಿಸುತ್ತದೆ.
Advertisement
Advertisement
ಶುಕ್ರ ಈಗ ಭೂಮಿಯಿಂದ (Earth) ಸುಮಾರು 15 ಕೋಟಿ ಕಿ.ಮೀ ದೂರದಿಂದ ಆಗಸ್ಟ್ 8ರ ಹೊತ್ತಿಗೆ 4 ಕೋಟಿ ಕಿ.ಮೀ ಗೆ ಸಮೀಪಿಸುತ್ತದೆ. ಹೀಗೆ ಶುಕ್ರ ಗ್ರಹ ಕಾಣಲು ಪ್ರಮುಖ ಕಾರಣ ಬುಧ ಗ್ರಹದಂತೆ ಸೂರ್ಯ ಭೂಮಿಯ ದೂರಕ್ಕಿಂತ ಕಡಿಮೆ ದೂರದಲ್ಲಿ ಇರುವುದು. ಸೂರ್ಯನಿಂದ ಬುಧ ಸುಮಾರು 6 ಕೋಟಿ, ಶುಕ್ರ 11 ಕೋಟಿ ಕಿ.ಮೀ ದೂರ ಆದರೆ ಭೂಮಿ 15 ಕೋಟಿ ಕಿ.ಮೀ ದೂರವಿದೆ. ಹೀಗಾಗಿ ಸೌರವ್ಯೂಹದಲ್ಲಿ ಭೂಮಿಗಿಂತ ಒಳಗಿರುವ ಈ ಎರಡು ಗ್ರಹಗಳು ರಾತ್ರಿ ಇಡೀ ಕಾಣುವುದಿಲ್ಲ. ಕಾಣುವುದೇ ಪಶ್ಚಿಮ ಆಕಾಶದಲ್ಲಿ ಸಂಜೆ ಹಾಗೂ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಮಾತ್ರ. ಇದನ್ನೂ ಓದಿ: ಬ್ರಿಜ್ ಭೂಷಣ್ ತೆಗೆದು ಆ ಸ್ಥಾನಕ್ಕೆ ಮಹಿಳೆ ನೇಮಿಸಿ – ಅಮಿತ್ ಶಾಗೆ ಕುಸ್ತಿಪಟುಗಳ ಬೇಡಿಕೆ
Advertisement
ಸಂಜೆ ಆಕಾಶದಲ್ಲಿ ಸೂರ್ಯಾಸ್ತದ ನಂತರ ಕೆಲ ಗಂಟೆ, ಹೆಚ್ಚೆಂದರೆ ದಿಗಂತದಿಂದ 47 ಡಿಗ್ರಿ ಎತ್ತರದಲ್ಲಿ ಹಾಗೂ ಬುಧ 27 ಡಿಗ್ರಿ ಎತ್ತರದಲ್ಲಿ ಮತ್ತೆ ಕೆಲ ಸಮಯ ಪೂರ್ವ ಆಕಾಶದಲ್ಲಿ ಸೂರ್ಯೋದಯಕ್ಕಿಂತ ಮೊದಲು ಕಾಣಿಸುತ್ತದೆ. ಸೂರ್ಯನಿಂದ ಶುಕ್ರ ಸುಮಾರು 11 ಕೋಟಿ ಕಿ.ಮೀ ಒಂದೇ ದೂರದಲ್ಲಿದೆಯಾದರೂ ಭೂಮಿಯಿಂದ ಯಾವಾಗಲೂ ಒಂದೇ ದೂರದಲ್ಲಿ ಇರುವುದಿಲ್ಲ. 19 ತಿಂಗಳಿಗೊಮ್ಮೆ ಅತಿ ಸಮೀಪ ದೂರ 4 ಕೋಟಿ ಕಿ.ಮೀ (ಆಗಸ್ಟ್ 13 ಇನ್ಫೀರಿಯರ್ ಕಂಜಂಕ್ಷನ್) ನಂತರ ಜನವರಿ 2025 ರಲ್ಲಿ ಅತ್ಯಂತ ದೂರ 26 ಕೋಟಿ ಕಿ.ಮೀ (ಸುಪೀರಿಯರ್ ಕಂಜಂಕ್ಷನ್) ಇರುತ್ತದೆ ಎಂದು ಹಿರಿಯ ಭೌತಶಾಸ್ತ್ರ ಉಪನ್ಯಾಸಕ ಎಪಿ ಭಟ್ ಮಾಹಿತಿ ನೀಡಿದ್ದಾರೆ.
ಗ್ರಹಗಳಲ್ಲಿ ಬರಿಗಣ್ಣಿಗೆ ಶುಕ್ರನೇ ಚೆಂದ. ಸುಮಾರು 95% ಇಂಗಾಲದ ಆಕ್ಸೈಡುಗಳ ವಾತಾವರಣ ಸ್ವಲ್ಪ ರಂಜಕದ ಡೈಆಕ್ಸೈಡುಗಳಿಂದ ಅತಿ ಹೆಚ್ಚು ಸೂರ್ಯನ ಬೆಳಕನ್ನು ಪ್ರತಿ ಫಲಿಸುವುದರಿಂದ ಶುಕ್ರ ಪಳಪಳ ಹೊಳೆಯುತ್ತಾನೆ. ದೂರದರ್ಶಕದಲ್ಲೀಗ ಶುಕ್ರ ಗ್ರಹ ಚೌತಿಯ ಚಂದ್ರನಂತೆ ಕಾಣುತ್ತದೆ. ಜುಲೈ ಕೊನೆಯ ವಾರ ಬಿದಿಗೆ ಚಂದ್ರನಿಗಿಂತ ಕ್ಷೀಣವಾಗುತ್ತಾನೆ ಎಂದು ಡಾ. ಎಪಿ ಭಟ್ ವಿವರಿಸಿದ್ದಾರೆ. ಇದನ್ನೂ ಓದಿ: ಗೋ ಹತ್ಯೆ ನಿಷೇಧ ಬಗ್ಗೆ ಸರ್ಕಾರದಿಂದ ಸಮೀಕ್ಷೆ: ಸತೀಶ್ ಜಾರಕಿಹೊಳಿ