ವಿಶ್ವದ ಏಕೈಕ ಮಂದಸ್ಮಿತ ಬಾಹುಬಲಿಗೆ ಗುರುವಾರ ಮಹಾಮಸ್ತಕಾಭಿಷೇಕ

Public TV
1 Min Read
BAHUBALI

ಮಂಗಳೂರು: ಇಲ್ಲಿನ ವೇಣೂರು ಬಾಹುಬಲಿ ಸ್ವಾಮಿಗೆ  (Venuru Bahubali) ಗುರುವಾರ ಮಹಾಮಸ್ತಕಾಭಿಷೇಕ ನಡೆಯಲಿದೆ. ಮಾ.1ರ ವರೆಗೆ ಈ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೆಯಲಿದೆ.

ಮಹಾಮಸ್ತಕಾಭಿಷೇಕದ ಈ 9 ದಿನಗಳಲ್ಲೂ ಸಂಜೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನ ಸಂಜೆ 5:30ಕ್ಕೆ ಮಹಾಮಸ್ತಕಾಭಿಷೇಕ ಆರಂಭಗೊಳ್ಳಲಿದ್ದು, ಜಲ, ಕಷಾಯ, ಕಲ್ಕಚೂರ್ಣ, ಅರಶಿನ, ಶ್ರೀಗಂಧ, ಚಂದನ, ಅಷ್ಟಗಂಧ, ಹಾಲು, ಎಳನೀರು, ಕೇಸರಿ ದ್ರವ್ಯಗಳಿಂದ ಮಸ್ತಕಾಭಿಷೇಕ ನೆರವೇರಲಿದೆ. ಇದನ್ನೂ ಓದಿ: ಆಗುಂಬೆ ಘಾಟ್- ಒಂದು ಬಾರಿ ಹೋದ್ರೆ ಮತ್ತೆ ಮತ್ತೆ ಸೆಳೆಯುವ ಏಕೈಕ ಸ್ಥಳ

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆ (Veerendra Heggade) ಅವರ ಅಧ್ಯಕ್ಷತೆಯಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ. ದಿಗಂಬರ ಮುನಿಶ್ರೀಗಳಾದ 108ನೇ ಅಮೋಘಕೀರ್ತಿ ಮಹರಾಜ್ ಮತ್ತು 108ನೇ ಅಮರಕೀರ್ತಿ ಮಹಾರಾಜ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K. Shivakumar) ಭಾಗವಹಿಸಲಿದ್ದಾರೆ.

1604ರಲ್ಲಿ 35 ಅಡಿ ಎತ್ತರದ ಏಕಶಿಲಾ ಬಾಹುಬಲಿ ಮೂರ್ತಿಯನ್ನು ಅಜಿಲ ಅರಸ ತಿಮ್ಮಣ್ಣ ಪ್ರತಿಷ್ಠಾಪಿಸಿದ್ದರು. ವಿಶ್ವದಲ್ಲಿರುವ ಏಕೈಕ ಮಂದಸ್ಮಿತ ಬಾಹುಬಲಿ ಮೂರ್ತಿ ಇದಾಗಿದೆ. ಪ್ರತೀ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಇದನ್ನೂ ಓದಿ: ಬೆಳಗಾವಿ ಗಡಿವಿವಾದ: ಹೈವೋಲ್ಟೇಜ್ ಮೀಟಿಂಗ್ ಕರೆದ ಮಹಾರಾಷ್ಟ್ರ ಸರ್ಕಾರ

Share This Article