ಕಿಚ್ಚ ಸುದೀಪ್ ಅವರ 52ನೇ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇದೇ ಸೆಪ್ಟಂಬರ್ 2ರಂದು ಸುದೀಪ್ ಹುಟ್ಟುಹಬ್ಬವಿದೆ. ಪ್ರತಿವರ್ಷ ಜಯನಗರದ ಗ್ರೌಂಡ್‌ನಲ್ಲಿ ಸುದೀಪ್ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಾ ಬಂದಿದ್ದಾರೆ. ಆದರೆ ಈ ವರ್ಷ ತಮ್ಮ ಅಗಲಿಕೆ ನೋವಿನಲ್ಲಿರುವ ಸುದೀಪ್ ಮನೆ ಬಳಿ ಯಾರೂ ಬಂದು ಅಲ್ಲಿರುವ ಜನರ ಶಾಂತಿ ಭಂಗ ಮಾಡೋದು ಬೇಡ. ಎರಡರ ಬದಲಾಗಿ ಸೆ.1ರ ರಾತ್ರಿ ಸೇರೋಣ ಅಂತಾ ಮನವಿ ಮಾಡಿಕೊಂಡಿದ್ದರು. ಅದರಂತೆ ಇದೀಗ ಸುದೀಪ್ ಆಪ್ತ ಬಳಗ ಮನವಿಯನ್ನ ಮಾಡಿಕೊಂಡಿದೆ. ಜೊತೆಗೆ ಬರ್ತ್ಡೇ ನಡೆಯುವ ಸ್ಥಳ ಹಾಗೂ ಟೈಮಿಂಗ್ ಬಹಿರಂಗಪಡಿಸಿದ್ದಾರೆ.
ನಟ ಸುದೀಪ್ ಅವರ 52ನೇ ಹುಟ್ಟುಹಬ್ಬವನ್ನ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಸೆಲಬ್ರೇಷನ್ ಮಾಡಲು ಸ್ಥಳ ನಿಗದಿಯಾಗಿದೆ. ಇನ್ನು ಸೆ.1ರ ರಾತ್ರಿ 9 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಆಚರಣೆ ಮಾಡಿಕೊಳ್ಳಲು ಸುದೀಪ್ ಆಪ್ತರು ತೀರ್ಮಾನ ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸುದೀಪ್ ಆಪ್ತಬಳಗ ಸಂದೇಶ ರವಾನೆ ಮಾಡಿದೆ. ಜೊತೆಗೆ ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ನಿವಾಸದ ಬಳಿ ಯಾರೂ ಬರೋದು ಬೇಡ ಅಂತಾ ಮನವಿ ಮಾಡಿಕೊಂಡಿದ್ದಾರೆ.
ಸುದೀಪ್ ತಾಯಿ ಸರೋಜಮ್ಮ ಅಗಲಿ ಒಂದು ವರ್ಷವೂ ಕೂಡಾ ಕಳೆದಿಲ್ಲ. ಆದರೆ ತಮ್ಮನ್ನ ಭೇಟಿಗಾಗಿ ಕಾಯುವ ಲಕ್ಷಾಂತರ ಅಭಿಮಾನಿಗಳಿಗೆ ನಿರಾಸೆಗೊಳಿಸಬಾರದು ಎನ್ನುವ ಕಾರಣಕ್ಕೆ ನಟ ಕಿಚ್ಚ ಸುದೀಪ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಸೆ.1ರ ರಾತ್ರಿ ಕಿಚ್ಚ ಸುದೀಪ್ ಬರ್ತ್ಡೇ ಸೆಲಬ್ರೇಷನ್ ಮಾಡಲು ಅಭಿಮಾನಿಗಳು ಕಾತುರದಿಂತ ಕಾಯುತ್ತಿದ್ದಾರೆ.