ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಕುರಿತು ಭವಿಷ್ಯ ಹೇಳುತ್ತಾ ಆಗಾಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುವ ಜ್ಯೋತಿಷಿ ವೇಣುಸ್ವಾಮಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕನ್ನಡದ ‘ಗಿಲ್ಲಿ’ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ದಾಂಪತ್ಯ ಬದುಕು ಮುರಿದು ಬೀಳಲಿದೆ ಎಂದು ಸೆಲೆಬ್ರಿಟಿ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ:ದರ್ಶನ್ ನೋಡಲು ಪುತ್ರನ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹಲವು ವರ್ಷಗಳು ಪ್ರೀತಿಸಿ ಇತ್ತೀಚೆಗೆ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ರಕುಲ್ ಮದುವೆಯಾದರು. ಖುಷಿಯಿಂದ ಜೀವನ ಸಾಗಿಸುತ್ತಿರುವ ಈ ಜೋಡಿಯ ಬಗ್ಗೆ ವೇಣುಸ್ವಾಮಿ ಸ್ಪೋಷಕ ಭವಿಷ್ಯ ಹೇಳಿದ್ದಾರೆ. ರಕುಲ್ ದಾಂಪತ್ಯದಲ್ಲಿ ಬಿರುಕು ಮೂಡಲಿದೆ. ಸಾಲದ ಕಾರಣ ಇಬ್ಬರೂ ಬೇರೆಯಾಗುತ್ತಾರೆ. ರಕುಲ್‌ಗೆ ಪತಿಯೇ ಡಿವೋರ್ಸ್ ನೀಡಲಿದ್ದಾರೆ ಎಂದು ಜ್ಯೋತಿಷಿ ಹೇಳಿದ್ದಾರೆ.
ಇತ್ತೀಚೆಗೆ ಶೋಭಿತಾ ಜೊತೆಗಿನ ನಾಗಚೈತನ್ಯ ನಿಶ್ಚಿತಾರ್ಥದ ಬಗ್ಗೆ ಮಾತನಾಡಿದರು. ಈ ಮದುವೆ ಕೂಡ ಹೆಚ್ಚು ದಿನ ಬಾಳಲ್ಲ ಎಂದಿದ್ದರು. ಅವರ ಹೇಳಿಕೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಆ ಕೋಪದ ಕಾವು ಮಾಸುವ ಮುನ್ನವೇ ರಕುಲ್ ಬಗ್ಗೆ ಜ್ಯೋತಿಷಿ ಮಾತನಾಡಿರೋದು ಫ್ಯಾನ್ಸ್‌ಗೆ ಕೋಪ ತರಿಸಿದೆ.
ಅಂದಹಾಗೆ, ಕೆಲ ವರ್ಷಗಳ ಹಿಂದೆ ನಾಗಚೈತನ್ಯ ಜೊತೆ ಸಮಂತಾ (Samantha) ಮದುವೆ ಸಮದರ್ಭದಲ್ಲಿ, ಇವರ ದಾಂಪತ್ಯದಲ್ಲಿ ಬಿರುಕಾಗಲಿದೆ ಎಂದಿದ್ದರು. ಅದರಂತೆಯೇ ಆಯಿತು. 2021ರಲ್ಲಿ ಇಬ್ಬರೂ ಡಿವೋರ್ಸ್ ಘೋಷಿಸಿದ್ದರು.