ಸಮಂತಾ, ರಶ್ಮಿಕಾ ಈಗ ಶ್ರೀಲೀಲಾ ಭವಿಷ್ಯ ನುಡಿದ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ

Public TV
2 Min Read
sreeleela 3

ಟಾಲಿವುಡ್‌ನಲ್ಲಿ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಹೆಸರಾಗಿರೋ ವೇಣು ಸ್ವಾಮಿ (Venu Swamy) ಅವರು ಈ ಹಿಂದೆ ಸಮಂತಾ- ಚೈತನ್ಯರ ದಾಂಪತ್ಯದ ಬಗ್ಗೆ ಮಾತನಾಡಿದ್ದರು. ಅವರು ಹೇಳಿದಂತೆಯೇ ಇಬ್ಬರು ಬೇರೆಯಾದರು. ರಶ್ಮಿಕಾ(Rashmika), ಪ್ರಭಾಸ್(Prabhas) , ವಿಜಯ್ ದೇವರಕೊಂಡ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿ ಭವಿಷ್ಯ ನುಡಿದಿರೋ ತೆಲುಗಿ ಜ್ಯೋತಿಷಿ ವೇಣು ಸ್ವಾಮಿ ಇಘ ಶ್ರೀಲೀಲಾ (Sreeleela) ಬಗ್ಗೆ ಮಾತನಾಡಿದ್ದಾರೆ.

sreeleela 1 2

ವೇಣು ಸ್ವಾಮಿ ಅವರು ಹೇಳುವ ಮಾತು ಸತ್ಯ ಎಂದು ನಂಬುವ ನಟ-ನಟಿಯರು ಅಲ್ಲಿಯೇ ಬಂದು ದೇವಿ ಪೂಜೆ ಮಾಡಿಸಿ ಹೋಗುತ್ತಾರೆ. ಹಾಗಿಯೇ ರಶ್ಮಿಕಾ ಮಂದಣ್ಣ (Rashmika Mandanna) ಅಷ್ಟರಮಟ್ಟಿಗೆ ಯಶಸ್ಸು ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಈಗ ತೆಲುಗು ರಂಗದಲ್ಲಿ ಅಗ್ರ ಸ್ಥಾನದಲ್ಲಿರುವ ನಟಿ ಶ್ರೀಲೀಲಾ 10 ಹೆಚ್ಚು ಸಿನಿಮಾಗಳಿಗೆ ನಾಯಕಿಯಾಗುವ ಬೇಡಿಕೆ ಕ್ರಿಯೆಟ್ ಮಾಡಿಕೊಂಡಿದ್ದಾರೆ.

sreeleela

ಇತ್ತೀಚಿನ ಸಂದರ್ಶನವೊಂದರಲ್ಲಿ ವೇಣು ಸ್ವಾಮಿ ಶ್ರೀಲೀಲಾ ಜಾತಕ ನೋಡಿ ಭವಿಷ್ಯ ಹೇಳಿದ್ದಾರೆ. ಚಿತ್ರರಂಗಕ್ಕೆ ಹೊಸ ಹೊಸ ನಟಿಯರು ಬರುತ್ತಿರುತ್ತಾರೆ. ಎಲ್ಲರ ಜೊತೆ ಪೈಪೋಟಿ ನಡೆಸುತ್ತಾ ಬಹಳ ದಿನ ಉಳಿದುಕೊಳ್ಳುವುದು ಕಷ್ಟ. ತಮನ್ನಾ, ಕಾಜಲ್ ಅಗರ್‌ವಾಲ್, ತ್ರಿಶಾ, ಶ್ರಿಯಾ ಶರಣ್ ಮಾತ್ರ ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಸ್ಟಾರ್ ನಟಿಯರಾಗಿ ಮುನ್ನುಗ್ಗುತ್ತಿದ್ದಾರೆ. ಅದೇ ರೀತಿ ಶ್ರೀಲೀಲಾ ಸಿನಿ ಕೆರಿಯರ್ ಬಗ್ಗೆ ವೇಣು ಸ್ವಾಮಿ ಮಾತನಾಡಿದ್ದಾರೆ. ಶ್ರೀಲೀಲಾ (Sreeleela) ಅವರದ್ದು ಮೀನ ರಾಶಿ. ಆಕೆಯ ಜಾತಕದಲ್ಲಿ ರಾಜಯೋಗವಿದೆ. ಆದರೆ ಆ ರಾಜಯೋಗ ಬಹುಕಾಲ ಇರುತ್ತದೆಯೇ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ವೇಣು ಸ್ವಾಮಿ ಹೇಳಿದ್ದಾರೆ.

sreeleela 2

ಸದ್ಯ ಆಕೆಯ ಗ್ರಹಬಲ ನೋಡಿದರೆ 2028ರ ವರೆಗೆ ಶ್ರೀಲೀಲಾಗೆ ಸೋಲೇ ಇಲ್ಲ. ಶ್ರೀಲೀಲಾ ಮತ್ತು ನಯನತಾರಾ (Nayanatara) ಜಾತಕಗಳು ಬಹುತೇಕ ಒಂದೇ ರೀತಿ ಇದೆ. ಆದರೆ ನಯನತಾರಾ ಸೌತ್‌ನಲ್ಲಿ ಟಾಪ್ ಹೀರೋಯಿನ್ ಆಗಿ ಮುಂದುವರೆದಿದ್ದಾರೆ. ಆ ಮಟ್ಟಕ್ಕೆ ಶ್ರೀಲೀಲಾ ಹವಾ ಇರುತ್ತದೋ ಇಲ್ಲವೋ ಗೊತ್ತಿಲ್ಲ ಎಂದು ವೇಣು ಸ್ವಾಮಿ ವಿವರಿಸಿದ್ದಾರೆ. ಒಟ್ಟಾರೆಯಾಗಿ ಇನ್ನು 5 ವರ್ಷ ಕಾಲ ಶ್ರೀಲೀಲಾ ದರ್ಬಾರ್ ಜೋರಾಗಿರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಮತ್ತೆ ಪ್ರೀತಿಯಲ್ಲಿ ಬಿದ್ರಾ ಸಮಂತಾ- ಏನಿದು ಹೊಸ ಕಹಾನಿ?

ಶ್ರೀಲೀಲಾ, ಪೆಳ್ಳಿ ಸಂದಡಿ ಸಿನಿಮಾ ಮೂಲಕ ತೆಲುಗಿಗೆ ಲಗ್ಗೆ ಇಟ್ಟರು ‘ಧಮಾಕಾ’ ನಾಯಕಿಯಾಗಿ ಬೆಳಗಿದ್ದರು. ಕಡಿಮೆ ಸಮಯದಲ್ಲಿ ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ರು. ಮಹೇಶ್ ಬಾಬು, ಪವನ್ ಕಲ್ಯಾಣ್, ರಾಮ್ ಪೋತಿನೇನಿ, ನಿತಿನ್, ವಿಜಯ್ ದೇವರಕೊಂಡಗೆ ಹೀರೋಯಿನ್ ಆಗುವ ಮೂಲಕ ಸಂಚಲನ ಮೂಡಿಸಿದ್ದಾರೆ.

Share This Article