ನವದೆಹಲಿ: ಉಪರಾಷ್ಟ್ರಪತಿ, ರಾಜ್ಯಸಭಾ ಸ್ಪೀಕರ್ ಆಗಿರುವ ಎಂ ವೆಂಕಯ್ಯ ನಾಯ್ಡು ಅವರು ಸದನದಲ್ಲಿ 10 ಭಾಷೆಗಳಲ್ಲಿ ಮಾತನಾಡುವ ಮೂಲಕ ದಾಖಲೆ ಬರೆದಿದ್ದಾರೆ.
ಮಾನ್ಸೂನ್ ಅಧಿವೇಶನದ ಮೊದಲ ದಿನದ ಬುಧವಾರದಂದು ಸದನ ವೇಳೆ ವೆಂಕಯ್ಯ ನಾಯ್ಡು ಅವರು ಮಾತನಾಡಿ, ಸದನದಲ್ಲಿ ಇಂಗ್ಲೀಷ್ ಸೇರಿದಂತೆ ಭಾರತೀಯ 22 ಭಾಷೆಗಳಲ್ಲಿ ಮಾತನಾಡಬಹುದು ಎಂದು ತಿಳಿಸಿದರು.
Advertisement
ಇದೂವರೆಗೂ ಇದ್ದ 17 ಭಾಷೆಗಳಲ್ಲಿ ಪ್ರಮುಖವಾದ ಆಸ್ಸಾಮಿಸ್, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳ್, ತೆಲುಗು ಮತ್ತು ಉರ್ದು ಭಾಷೆಗಳೊಂದಿಗೆ ಹೆಚ್ಚವರಿಯಾಗಿ ಕೊಂಕಣಿ, ದೋಗ್ರಿ, ಕಾಶ್ಮೀರಿ, ಸಂಥಾಲಿ, ಸಿಂಧಿ ಭಾಷೆಗಳು ಮಾತನಾಡಬಹುದು. ಆದರೆ ಈ ಕುರಿತು ಸಂಸದರು ಮಾತನಾಡುವ ಮೊದಲು ಸಭೆಗೆ ಮಾಹಿತಿ ನೀಡಬೇಕು ಎಂಬ ಸೂಚನೆಯನ್ನು ನೀಡಿದರು.
Advertisement
ಈ ಕುರಿತು ಘೋಷಣೆ ಮಾಡಿದ ವೇಳೆ ಕೆಲ ಪದಗಳನ್ನು ಬಾಂಗ್ಲಾ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸ್ವತಃ ತಾವೇ ಮಾತನಾಡಿದ್ದು ದಾಖಲೆಯಾಗಿದೆ.