ಮೈಸೂರು: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ ಚಾಲಕ ನಿಯಂತ್ರಣ ತಪ್ಪಿ ಫೋರ್ಸ್ ವಾಹನವೊಂದು ಉದ್ಯಾನವನದ ಒಳಗೆ ನುಗ್ಗಿದ ಘಟನೆ ನಡೆದಿದೆ.
ಚಾಮರಾಜ ಜೋಡಿರಸ್ತೆಯಲ್ಲಿ ತಡರಾತ್ರಿ ಈ ಅವಘಡ ಸಂಭವಿಸಿದ್ದು, ಅಪಘಾತದ ಬಳಿಕ ಫೋರ್ಸ್ ವಾಹನ ಮೈಸೂರಿನ ಫ್ರೀಡಂ ಪಾರ್ಕ್‍ನಲ್ಲಿರೋ ಚಾಮರಾಜ ಮೊಹಲ್ಲಾದ ಉದ್ಯಾನವನದ ಗೋಡೆಗೆ ಡಿಕ್ಕಿ ಹೊಡೆದು ನಂತ್ರ ಒಳಗೆ ನುಗ್ಗಿದೆ.
Advertisement
ಘಟನೆಯಿಂದ ಬೈಕ್ ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.