ಧಾರವಾಡ: ಡೀಸೆಲ್ ಹಾಕಿಸಲು ಬಂಕ್‍ಗೆ ಹೋದಾಗ ಬಂಕ್‍ನವರು ವಾಹನ ಮಾಲಿಕರಿಗೆ ಹೇಗೆ ಮೋಸ ಮಾಡ್ತಾರೆ ಅನ್ನೋ ಸಂಗತಿ ಬೆಳಕಿಗೆ ಬಂದಿದೆ.
ಧಾರವಾಡದ ರಾಷ್ಟ್ರೀಯ ಹೆದ್ದಾರಿ 4ರ ಮುಮ್ಮಿಗಟ್ಟಿ ಗ್ರಾಮದ ಬಳಿ ಇರುವ ಹಿಂದೂಸ್ತಾನ್ ಪೆಟ್ರೋಲಿಯಂ ಬಂಕ್‍ನಲ್ಲಿ ರಾತ್ರಿ ಅಜೀತ ಅಷ್ಟಗಿ ಎಂಬವರು ಡೀಸೆಲ್ ಹಾಕಿಸಲು ಹೋಗಿದ್ದರು. ಅವರು 2000 ಸಾವಿರ ರೂ.ಗಳ ಡೀಸೆಲ್ ಕ್ಯಾನಿನಲ್ಲಿ ಹಾಕಿಸಿದ್ದಾರೆ. ಡಿಸೇಲ್ ಕಡಿಮೆ ಬಂದಿರುವುದಾಗಿ ಅನುಮಾನ ಗೊಂಡು ಮತ್ತೆ ಬಂಕ್ ಸಿಬ್ಬಂದಿ ಇಂದಲೇ ಅಳತೆ ಮಾಡಿಸಿದಾಗ, ಸುಮಾರು 4 ರಿಂದ 5 ಲೀಟರನಷ್ಟು ಡೀಸೆಲ್ ಕಡಿಮೆ ಬಂದಿದ್ದು ಗೊತ್ತಾಗಿ ಮಾಲೀಕರ ವಿರುದ್ಧ ಆಕ್ರೋಶಗೊಂಡು ಬಂಕ್ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ.
Advertisement
Advertisement
ಈ ಪೆಟ್ರೋಲ್ ಬಂಕ್ ನಿವೃತ್ತ ಡಿವೈಎಸ್‍ಪಿ ಚೌಹಾಣರದ್ದು. ಪ್ರತಿ ದಿನ ಸಾವಿರಾರು ಲಾರಿಗಳು ಹಾಗೂ ವಾಹನಗಳು ಡೀಸೆಲ್ ಹಾಕಿಸಲು ಬರುತ್ತವೆ. ಇಲ್ಲಿ ಎಷ್ಟೊಂದು ಮೋಸ ಆಗುತ್ತೆ ಎಂಬುದು ಕ್ಯಾನಿನಲ್ಲಿ ಡೀಸೆಲ್ ಹಾಕಿದ ಮೇಲೆಯೇ ಗೊತ್ತಾಗಿದ್ದು. ಬೇರೆ ಯಾರಿಗೂ ಈ ರೀತಿ ಮೋಸ ಆಗದೇ ಇರಲಿ ಎಂಬುದು ನಮ್ಮ ಕಾಳಜಿ ಅಂತ ವಾಹನ ಮಾಲಿಕ ಅಜೀತ ಹೇಳಿದ್ದಾರೆ.
Advertisement
ಈ ಬಗ್ಗೆ ಬಂಕ್ ಸಿಬ್ಬಂದಿಯನ್ನು ವಿಚಾರಿಸಿದಾಗ ಡೀಸೆಲ್ ಕಡಿಮೆ ಬಂದಿದ್ದನ್ನು ಒಪ್ಪಿಕೊಂಡಿದ್ದಾರೆ. ಎಷ್ಟು ಜನ ಈ ರೀತಿ ಮೋಸ ಹೋಗ್ತಾರೋ ಗೊತ್ತಿಲ್ಲ. ವಾಹನ ಸವಾರರು ಸ್ವಲ್ಪ ಎಚ್ಚರದಿಂದ ತಮ್ಮ ವಾಹನಗಳಿಗೆ ಡೀಸೆಲ್ ಹಾಗೂ ಪೆಟ್ರೋಲ್ ಹಾಕಿಸಬೇಕು. ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿಯ ಬಂಕ್‍ನಲ್ಲೇ ಈ ರೀತಿಯಾದ್ರೆ ಇನ್ನುಳಿದ ಬಂಕ್‍ನವರು ಎಷ್ಟು ಮೋಸ ಮಾಡುತ್ತಾರೋ ಗೊತ್ತಿಲ್ಲ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.