-`ಟೈಗರ್’ ಘರ್ಜನೆಗೆ ವಾಹನಗಳು ಡ್ಯಾಮೇಜ್..!
ಬೆಂಗಳೂರು: ಟ್ರಾಫಿಕ್ ಪೊಲೀಸರ ಕೆಲ ವರ್ತನೆ ವಾಹನ ಸವಾರರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಇದರಿಂದ ನೋ ಪಾರ್ಕಿಂಗ್‍ನಲ್ಲಿ ನಿಲ್ಲಿಸುವ ವಾಹನಗಳನ್ನು ಟ್ರಾಫಿಕ್ ಪೊಲೀಸರು ತಮ್ಮ ಟೈಗರ್ ವಾಹನದಲ್ಲಿ ಹೊತ್ತಿಕೊಂಡು ಹೋಗುತ್ತಾರೆ.
ನಗರದಲ್ಲಿ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೇನು ಕಡಿಮೆ ಇಲ್ಲ. ಎಷ್ಟೇ ದಂಡ ಹಾಕಲಿ ಏನೇ ಮಾಡಲಿ. ಟ್ರಾಫಿಕ್ ಉಲ್ಲಂಘನೆ ಮಾಡುತ್ತಿರುತ್ತಾರೆ. ಇದಕ್ಕೆ ಟಾಂಗ್ ಕೊಡುವಂತೆ ನಮ್ಮ ಟ್ರಾಫಿಕ್ ಪೊಲೀಸರು ಕೂಡ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್ ಮಾಡುವ ಟ್ರಾಫಿಕ್ ಪೊಲೀಸರು ತಮ್ಮ ಟೈಗರ್ ವಾಹನದಲ್ಲಿ ಹೊತ್ತುಕೊಂಡು ಹೋಗುತ್ತಾರೆ. ಆದರೆ ಈ ವೇಳೆ ವಾಹನಗಳಿಗೆ ಸಾಕಷ್ಟು ಡ್ಯಾಮೇಜ್ ಮಾಡಿ ಫೈನ್ ಕೂಡಾ ಕಟ್ಟಿಸಿಕೊಳ್ಳುತ್ತಾರೆ.
Advertisement
Advertisement
ನಿಯಮ ಉಲ್ಲಂಘನೆ ಮಾಡುವವರ ವಾಹನಗಳನ್ನು ಎತ್ತಿಕೊಂಡು ಹೋಗಿ ಫೈನ್ ಹಾಕುತ್ತಾರೆ. ಈ ವೇಳೆ ಕೆಲವೊಂದು ನಿಯಮ ಪಾಲಿಸಬೇಕು. ಆದರೆ ಫೈನ್ ಕಲೆಕ್ಟ್ ಮಾಡುವ ಆತುರದಲ್ಲಿ ಘೋಷಣೆ ಮಾಡದೇ ಕಡಿಮೆ ಸಂಬಳಕ್ಕೆ ತರಬೇತಿ ಇಲ್ಲದ ಸಿಬ್ಬಂದಿಯನ್ನು ನೇಮಿಸಿಕೊಂಡು ವಾಹನ ಟೋಯಿಂಗ್ ಮಾಡುತ್ತಿರುವುದು ನಿಮ್ಮ ಪಬ್ಲಿಕ್ ಟಿವಿಯ ರಿಯಾಲಿಟಿ ಚೆಕ್ ನಲ್ಲಿ ಬಯಲಾಗಿದೆ.
Advertisement
ಎಸ್‍ಪಿ ರೋಡ್‍ನ ನೋ ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿದ್ದ ವ್ಯಕ್ತಿ ತನ್ನ ಬೈಕಿನಲ್ಲಿ ಮೂರೂವರೆ ಕೋಟಿ ರೂಪಾಯಿ ಮೌಲ್ಯದ ಮನೆ ಪತ್ರಗಳಿಟ್ಟಿದ್ದರಂತೆ. ಬೈಕ್ ನಿಲ್ಲಿಸಿದ 5 ನಿಮಿಷದಲ್ಲಿ ಟ್ರಾಫಿಕ್ ಪೊಲೀಸರು ಟೋಯಿಂಗ್ ಮಾಡಿಕೊಂಡು ಹೋಗಿದ್ದಾರೆ. ಇದನ್ನು ಗಮನಿಸಿ ಸುಮಾರು ಒಂದು ಕಿಲೋಮಿಟರ್ ನಷ್ಟು ದೂರ ಹಿಂದೆಯೇ ಓಡಿ ವಾಹನದ ಮಾಲೀಕರು ಆಸ್ತಿಪತ್ರ ಪಡೆದುಕೊಂಡಿದ್ದಾರೆ.
Advertisement
ತೀವ್ರ ಜ್ವರದಿಂದ ಬಳಲುತ್ತಿದ್ದ ಬೈಕ್ ಸವಾರ ಮಾತ್ರೆ ತೆಗೆದುಕೊಳ್ಳೋಕೆ ಮೆಡಿಕಲ್ ಶಾಪ್ ಬಳಿ ಬೈಕ್ ನಿಲ್ಲಿಸಿದ್ದಾರೆ. ಮರುಕ್ಷಣ ಟೋಯಿಂಗ್ ವಾಹನದಲ್ಲಿ ಬೈಕ್ ತೆಗೆದುಕೊಂಡು ಹೊರಟಿದ್ದಾರೆ. ಫೈನ್ ಕಟ್ಟಿಸಿಕೊಳ್ಳಿ ನಾನು ಬೇಗ ಹೋಗಬೇಕು ಅಂತ ಸವಾರ ಹೇಳಿದ್ದರೂ ಕೇಳದ ಪೊಲೀಸರು ತಡ ಮಾಡಿದ್ದಾರೆ. ಇದರಿಂದ ಜ್ವರದಿಂದ ಸುಸ್ತಾದ ಸವಾರ ತಲೆಸುತ್ತಿ ಕೆಳಗೆ ಬಿದ್ದಿದ್ದಾರೆ.
ಇದು ಟೋಯಿಂಗ್ ಸಿಬ್ಬಂದಿ ಭ್ರಷ್ಟಾಚಾರವಾಗಿದ್ದು, ಟ್ರಾಫಿಕ್ ಪೊಲೀಸರಿಗೆ ಗೊತ್ತಿಲ್ಲದೇ ವಾಹನ ಮಾಲೀಕರಿಂದ ಹಣ ತಗೆದುಕೊಂಡು ಬಿಟ್ಟು ಕಳಿಸುತ್ತಿದ್ದಾರೆ. ಕಾರು ಚಾಲಕರೊಬ್ಬರ ಬಳಿ 750 ರೂ.ಪಡೆದಿದ್ದ ಟೋಯಿಂಗ್ ಸಿಬ್ಬಂದಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಟ್ರಾಫಿಕ್ ಪೊಲೀಸರು ಕಪಾಳಮೋಕ್ಷ ಮಾಡಿದ್ದಾರೆ.
ತುರ್ತು ಕೆಲಸ ನಿಮಿತ್ತ ಎಲ್ಲಂದರಲ್ಲಿ ವಾಹನ ಪಾರ್ಕ್ ಮಾಡುವವರೇ ಸದ್ಯ ಟ್ರಾಫಿಕ್ ಪೊಲೀಸರ ಟಾರ್ಗೆಟ್ ಆಗಿದ್ದಾರೆ. ಟೋಯಿಂಗ್ ಮಾಡಿದ ಸ್ಪಾಟ್ ನಲ್ಲಿ ಹಣ ಕಟ್ಟಿಸಿಕೊಂಡು ಬಿಟ್ಟು ಕಳಿಸುತ್ತಿದ್ದಾರೆ. ದಿನೇ ದಿನೇ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತರು ಇಂಥ ಗಮನ ಹರಿಸಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv