ಬೆಂಗಳೂರು: ಸತತ ಒಂದು ವಾರದಿಂದ ತರಕಾರಿ ಬೆಲೆ ಪಾತಾಳಕ್ಕೆ ಇಳಿಯುತ್ತಿದೆ. ತರಕಾರಿ ಕಡಿಮೆ ಆದರೆ ಜನ ಖರೀದಿ ಮಾಡುವುದು ಹೆಚ್ಚಾಗುತ್ತೆ. ಆದರೆ ಕೊರೊನಾ ವೈರಸ್ ಭೀತಿ ಗ್ರಾಹಕರನ್ನು ಆವರಿಸಿದೆ. ಚಿಕನ್ ಅಂದರೆ ದೂರ ಹೋಗುತ್ತಿದ್ದ ಜನ ಈಗ ತರಕಾರಿ ಅಂದರೆ ಭಯಪಡುತ್ತಿದ್ದಾರೆ.
ಈ ಹಿಂದೆ ಟೊಮ್ಯಾಟೋ ದರ 22 ರೂ. ಇತ್ತು. ಆದರೆ ಈಗ 15 ರೂ. ಆಗಿದೆ. ಬೀಟ್‍ರೂಟ್ ಹಿಂದಿನ ದರ 20 ರೂ. ಆಗಿತ್ತು. ಆದರೆ ಈಗ 18 ರೂ. ಆಗಿದೆ. 30 ರೂ. ಇದ್ದ ಮೂಲಂಗಿ ಇದೀಗ 22 ರೂ. ಆಗಿದೆ. ಸೀಮೆ ಬದನೆಕಾಯಿ ದರ 30 ರೂ. ಇತ್ತು. ಆದರೆ ಈಗ 21 ರೂ. ಆಗಿದೆ. ಹಾಗೆಯೇ ಕ್ಯಾಪ್ಸಿಕಂ 30 ರೂ. ಇತ್ತು. ಆದರೆ ಈಗ 22 ರೂ. ಆಗಿದೆ. 30 ರೂ. ಇದ್ದ ಗೆಡ್ಡೆಕೋಸು ಈಗ 21 ರೂ. ಆಗಿದೆ. ಈರುಳ್ಳಿ 40 ರೂ. ಇತ್ತು. ಆದರೆ ಈಗ 21 ರೂ. ಆಗಿದೆ. ಕ್ಯಾರೇಟ್ ದರ 55 ರೂ. ಆಗಿತ್ತು. ಇದೀಗ 44 ರೂ. ಆಗಿದೆ. 40 ರೂ. ಇದ್ದ ಬೀನ್ಸ್ ಇದೀಗ 30 ರೂ. ಆಗಿದೆ. ಹಾಗೆಯೇ ಮೆಣಸಿನಕಾಯಿ 50 ರೂ. ಇತ್ತು. ಆದರೆ ಈಗ 44 ರೂ. ಆಗಿದೆ.
Advertisement
Advertisement
ಎಲ್ಲಾ ಮಾರ್ಕೆಟ್‍ಗಳು ಹಾಗೂ ಹಾಪ್‍ಕಾಮ್ಸ್ ಗಳಲ್ಲೂ ಗ್ರಾಹಕರಿಲ್ಲದೇ ಖಾಲಿ ಹೊಡೆಯುತ್ತಿತ್ತು. ಬೆಲೆ ಕಡಿಮೆಯಾಗಿದ್ರೂ ಜನ ಖರೀದಿ ಮಾಡುತ್ತಿಲ್ಲ. ಎಲ್ಲಿ ತರಕಾರಿಯಿಂದ ಕೊರೊನಾ ಬಂದುಬಿಡುತ್ತೋ ಎಂದು ಅಂಗಡಿ ಬಳಿ ಬರುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಎಲ್ಲಾ ಕೊರೊನಾ ಎಫೆಕ್ಟ್ ಅನ್ನಿಸುತ್ತೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಕೆಜಿಗೆ ನೂರು ರೂ. ಬೆಲೆಯಲ್ಲಿದ್ದ ತರಕಾರಿಗಳು ಈಗ 100 ರೂ.ಗೆ 6 ಕೆಜಿಯಷ್ಟು ಸಿಕ್ರು ಜನ ಖರೀದಿ ಮಾಡುತ್ತಿಲ್ಲ.