ರಾಯಚೂರು: ಬರಗಾಲದ ಎಫೆಕ್ಟ್ ರಾಯಚೂರಿನಲ್ಲಿ ನೆಮ್ಮದಿಯಿಂದ ಅಡುಗೆ ಮಾಡಿಕೊಂಡು ತಿನ್ನಲು ಆಗದ ಪರಸ್ಥಿತಿಯನ್ನು ತಂದೊಡ್ಡಿದೆ.
ಮಳೆಯಿಲ್ಲದೆ ತರಕಾರಿ ಬೆಲೆ ಗಗನಕ್ಕೇರಿದ್ದು ಸಾರ್ವಜನಿಕರು ಮಾರುಕಟ್ಟೆಯಲ್ಲಿ ತರಕಾರಿ ಕೊಳ್ಳಲು ಹಿಂದೆಮುಂದೆ ನೋಡುವಂತಾಗಿದೆ. ಮೊದಲೆಲ್ಲಾ 40 ರೂಪಾಯಿಗೆ ಕೆ.ಜಿ ಇದ್ದ ಬೀನ್ಸ್ ಈಗ 150 ರೂಪಾಯಿಗೆ ಕೆ.ಜಿ ಆಗಿದೆ. ಬೆಂಡೆಕಾಯಿ, ಸವತೆಕಾಯಿ, ಬದನೆಕಾಯಿ 40 ರಿಂದ 60 ರೂಪಾಯಿ ಆಗಿವೆ. ಕ್ಯಾರೆಟ್, ಹೀರೇಕಾಯಿ 70 ರೂಪಾಯಿಗೆ ಕೆ.ಜಿ ಆಗಿದೆ.
Advertisement
Advertisement
ಎಲ್ಲಾ ತರಕಾರಿಗಳ ಬೆಲೆ ಕನಿಷ್ಠ ಅಂದ್ರೂ 20 ರಿಂದ 40 ರೂಪಾಯಿ ಏರಿಕೆಯಾಗಿದೆ. ಜಿಲ್ಲೆಯಲ್ಲಿ ತರಕಾರಿ ಕೊರತೆ ಎದುರಾಗಿರುವುದರಿಂದ ಬೇರೆ ಜಿಲ್ಲೆಗಳಿಂದ ತರಿಸಲಾಗುತ್ತಿದೆ. ಹೀಗಾಗಿ ಬೆಲೆಗಳು ಗಗನಕ್ಕೇರಿವೆ. ಆದರೆ ತರಕಾರಿ ಬೆಳೆದ ರೈತನಿಗೆ ಲಾಭ ಎಷ್ಟರ ಮಟ್ಟಿಗೆ ಸಿಗುತ್ತಿದೆಯೋ ಇಲ್ಲವೋ ಸಾರ್ವಜನಿಕರಂತೂ ಊಟ ಮಾಡಲು ಸಹ ಯೋಚಿಸುವಂತಾಗಿದೆ.