ನವದೆಹಲಿ: ದೇಶದಲ್ಲಿ ತರಕಾರಿ ಬೆಲೆ ಏರಿಕೆ (Price Hike) ಬೆನ್ನಲ್ಲೇ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Delhi) ದೆಹಲಿಯ ಆಜಾದ್‌ಪುರ (Azadpur) ಮಂಡಿ ತರಕಾರಿ ಮಾರುಕಟ್ಟೆಗೆ (Vegetable Market) ಭೇಟಿ ನೀಡಿದ್ದಾರೆ.
ಮಂಗಳವಾರ ಬೆಳಗ್ಗೆ ಮಂಡಿ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದ ರಾಹುಲ್ ಗಾಂಧಿ, ತರಕಾರಿ ವರ್ತಕರೊಂದಿಗೆ ನೇರ ಮಾತುಕತೆ ನಡೆಸಿದ್ದಾರೆ. ಈ ಕುರಿತು ವಿಡಿಯೋವೊಂದು ಲಭ್ಯವಾಗಿದ್ದು, ವಿಡಿಯೋದಲ್ಲಿ ತರಕಾರಿ ಬೆಲೆಗಳ ಕುರಿತು ರಾಹುಲ್ ಗಾಂಧಿ ವರ್ತಕರೊಂದಿಗೆ ಮಾತನಾಡುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: Commercial LPG Cylinder Price: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 100 ರೂ. ಇಳಿಕೆ
ಶನಿವಾರ ರಾಹುಲ್ ಗಾಂಧಿ ಅವರು, ದೆಹಲಿಯ ಆಜಾದ್‌ಪುರ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟಗಾರರೊಬ್ಬರು ಕಣ್ಣೀರು ಹಾಕುತ್ತಿರುವ ವಿಡಿಯೋವೊಂದನ್ನು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ತರಕಾರಿ ವ್ಯಾಪಾರಿ ರಾಮೇಶ್ವರ್ ಎಂಬವರು ಕಣ್ಣಿರು ಹಾಕುತ್ತಾ, ಟೊಮೆಟೋ ತುಂಬಾ ದುಬಾರಿಯಾಗಿದೆ. ಅದನ್ನು ಖರೀದಿಸಲು ನನ್ನ ಬಳಿ ಸಾಕಷ್ಟು ಹಣವಿಲ್ಲ ಎಂದು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಚುನಾವಣಾ ಭರವಸೆ ಈಡೇರಿಸಲು ಸಾಧ್ಯವಾಗ್ಲಿಲ್ಲ ಅಂತ ತನಗೆ ತಾನೇ ಚಪ್ಪಲಿಯಿಂದ ಹೊಡೆದುಕೊಂಡ ಕೌನ್ಸಿಲರ್
ಅಲ್ಲದೇ ಅದನ್ನು ಯಾವ ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ಹೇಳಲು ಅಸಾಧ್ಯ. ಮಳೆಯಲ್ಲಿ ತೇವವಾದರೆ ಅಥವಾ ಸ್ಟಾಕ್‌ಗೆ ಏನಾದರೂ ಹಾನಿಯಾದರೆ ನಾವು ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದರು. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇ ನಿರ್ಮಾಣದ ವೇಳೆ ಕ್ರೇನ್ ಕುಸಿದು 16 ಮಂದಿ ಕಾರ್ಮಿಕರು ದುರ್ಮರಣ
ಇಷ್ಟು ಮಾತ್ರವಲ್ಲದೇ ಹಣದುಬ್ಬರವು ತನ್ನನ್ನು ಹತಾಶ ಪರಿಸ್ಥಿತಿಗೆ ತಳ್ಳಿದ್ದು, ದಿನಕ್ಕೆ 100ರಿಂದ 200 ರೂ. ಗಳಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ತ್ರಿಶೂಲ ಏನು ಮಾಡುತ್ತಿದೆ? – ಯೋಗಿ ಆದಿತ್ಯನಾಥ್ ಪ್ರಶ್ನೆ
Web Stories