ಬೆಂಗಳೂರು: ರಾಜ್ಯದಲ್ಲಿ ಸರಿಯಾದ ಮಳೆಯಾಗದೇ (Rain) , ಜೊತೆಗೆ ಬಿಸಿಲ ಬೇಗೆಯ ಪರಿಣಾಮದಿಂದ ಕೆಲ ತರಕಾರಿಗಳ ದರ (Vegetable Price Hike) ಗಗನಕ್ಕೇರಿದೆ. ಕಳೆದೊಂದು ವಾರದಿಂದ ಬೀನ್ಸ್ ಕೆಜಿಗೆ 170 ರಿಂದ 200 ರೂ. ಗಡಿ ದಾಟಿದೆ. ಅತ್ತ ಕ್ಯಾರೆಟ್ ಕೂಡ ಸೆಂಚುರಿ ತುದಿಯಲ್ಲಿದ್ದು, ಕಳೆದೊಂದು ವಾರದಿಂದ ಮೆಣಸಿನಕಾಯಿ ದರ ಕೂಡ ಅದೇ ದಾರಿಯಲ್ಲಿದೆ.
Advertisement
ನಗರಕ್ಕೆ (Bengaluru) ನೆರೆಯ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಹೆಚ್ಚು ಬಿನ್ಸ್ ಮತ್ತು ಮೆಣಸಿನಕಾಯಿ ಪೂರೈಕೆಯಾಗುತ್ತದೆ. ಈ ಭಾಗದಲ್ಲೆಲ್ಲ ತಾಪಮಾನ ಏರಿಕೆಯಾಗಿದ್ದು, ಇಳುವರಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇನ್ನೂ ಕ್ಯಾರೆಟ್ ತಮಿಳುನಾಡು ಭಾಗದಿಂದ ಹೆಚ್ಚು ಪೂರೈಕೆಯಾಗುತ್ತಿದ್ದು, ಅಲ್ಲಿಯೂ ಕೂಡ ಇದೇ ಪರಿಸ್ಥಿತಿ ಹಿನ್ನೆಲೆ ಬೆಲೆ ಗಗನಕ್ಕೇರಿದೆ. ಇದನ್ನೂ ಓದಿ: ನಟಿ ಅಮೂಲ್ಯ ಮಾವ, ಬಿಜೆಪಿ ಮುಖಂಡ ರಾಮಚಂದ್ರ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ
Advertisement
Advertisement
ಕೇವಲ ತರಕಾರಿ ಮಾತ್ರವಲ್ಲದೇ ಹಣ್ಣುಗಳ ದರದಲ್ಲೂ ಕೂಡ ಏರಿಕೆ ಕಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಜೂನ್ ಅಂತ್ಯದವರೆಗೂ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ. ಜೂನ್‍ನಲ್ಲಿ ಈ ಬಾರಿ ಉತ್ತಮ ಮಳೆಯಾದರೆ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂಬುದು ವ್ಯಾಪಾರಿಗಳ ಮಾತು.
Advertisement
ಕೆಲ ತಿಂಗಳಿನಿಂದ ಒಂದಲ್ಲ ಒಂದು ಅಗತ್ಯ ವಸ್ತುಗಳ ದರ ಏರಿಕೆಯಿಂದ ಕಂಗೆಟ್ಟಿರುವ ಜನ, ಅಗತ್ಯ ತರಕಾರಿಗಳ ಬೆಲೆ ಏರಿಕೆಯಿಂದ ಮತ್ತಷ್ಟು ಹೈರಾಣಾಗಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಜೆಡಿಯು ನಾಯಕನಿಗೆ ಗುಂಡಿಕ್ಕಿ ಹತ್ಯೆ