ಇನ್ನೆರಡು ತಿಂಗಳಲ್ಲಿ ಸಿಎಂ ಮನೆ ಗೃಹಪ್ರವೇಶ – ಮನೆಗೆ 100 ಮೀ ದೂರದಲ್ಲಿದ್ದ ತರಕಾರಿ, ಫಾಸ್ಟ್‌ಫುಡ್‌ ಅಂಗಡಿ ತೆರವು

Public TV
1 Min Read
Mysuru shop teravu

ಮೈಸೂರು: ಮೈಸೂರಿನ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಮನೆ ಕಟ್ಟಿಸುತ್ತಿದ್ದು, ಒಂದೆರಡು ತಿಂಗಳಲ್ಲಿ ಮನೆ ಗೃಹ ಪ್ರವೇಶ ಆಗಲಿದೆ. ಈ ಹೊತ್ತಿನಲ್ಲೇ ಮನೆಗೆ ಕೂಗಳತೆ ದೂರದಲ್ಲಿರುವ ತರಕಾರಿ, ಟೀ, ಫಾಸ್ಟ್‌ಫುಡ್‌ ಅಂಗಡಿಗಳ ತೆರವಿಗೆ ನಗರ ಪಾಲಿಕೆ ಮುಂದಾಗಿದೆ.

ಮೈಸೂರು ಪಾಲಿಕೆಯು ವಿಶ್ವಮಾನವ ಜೋಡಿ ರಸ್ತೆಯ ಬೀದಿಬದಿ ವ್ಯಾಪಾರಸ್ಥರ ಅಂಗಡಿ ತೆರವಿಗೆ ನೋಟಿಸ್ ನೀಡಿದೆ. ಪಾಲಿಕೆಯ ಈ ನಿರ್ಧಾರಕ್ಕೆ ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಗುರುವೈಭವೋತ್ಸವ ಸಂಭ್ರಮ – ಇಂದು ರಾಯರ 404ನೇ ಪಟ್ಟಾಭಿಷೇಕ ಮಹೋತ್ಸವ

ಸಿಎಂ ಸಿದ್ದರಾಮಯ್ಯ ಮೈಸೂರಿನ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಮನೆ ಕಟ್ಟಿಸುತ್ತಿದ್ದಾರೆ. ಇನ್ನೂ ಒಂದೆರಡು ತಿಂಗಳಲ್ಲಿ ಮನೆ ಗೃಹಪ್ರವೇಶ ಮಾಡಲಾಗುತ್ತಿರುವ ಬೆನ್ನಲ್ಲೇ, ನಗರ ಪಾಲಿಕೆಯಿಂದ ದಿಢೀರ್ ಫುಟ್‌ಪಾತ್ ತೆರವು ಹೆಸರಲ್ಲಿ ಮನೆಯ ಕೂಗಾಳತೆ ದೂರದಲ್ಲಿರುವ 20 ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಸ್ಥರನ್ನು ಎತ್ತಂಗಡಿ ಮಾಡಿಸಲಾಗುತ್ತಿದೆ. ಇದನ್ನೂ ಓದಿ: ವಿವಿಗಳಿಂದ ಲಾಭವಿಲ್ಲ ಎಂದಿದೆ ಕಾಂಗ್ರೆಸ್ ಸರ್ಕಾರ.. ಶಿಕ್ಷಣವೆಂದರೆ ವ್ಯಾಪಾರವಲ್ಲ: ಅಶೋಕ್ ಕಿಡಿ

ಸಿಎಂ ಮನೆಯಿಂದ 100 ಮೀಟರ್ ಅಂತರದಲ್ಲಿ 20ಕ್ಕೂ ಜನರು ತರಕಾರಿ, ಟೀ, ಫಾಸ್ಟ್‌ಫುಡ್‌ ಅಂಗಡಿ ಇಟ್ಟುಕೊಂಡಿದ್ದಾರೆ. ಕಳೆದ 35 ವರ್ಷಗಳಿಂದ ಅಲ್ಲೇ ವ್ಯಾಪಾರ ಮಾಡುತ್ತಿದ್ದರು. ಇದೀಗ ಮೈಸೂರು ಪಾಲಿಕೆ, ಬೆಂಗಳೂರು ಮೂಲದ ವಕೀಲರೊಬ್ಬರು ದೂರು ಕೊಟ್ಟಿದ್ದಾರೆ ಎಂದು ಹೇಳಿ ವ್ಯಾಪಾರಸ್ಥರಿಗೆ ಅಂಗಡಿ ಹಾಕದಂತೆ ನೋಟಿಸ್ ನೀಡಿದ್ದಾರೆ.

ಮೈಸೂರಿನಲ್ಲಿ ಅತಿ ಹೆಚ್ಚು ಜನ ಓಡಾಡುವ ಸಯ್ಯಾಜಿರಾವ್ ರಸ್ತೆಯಲ್ಲೇ ಫುಟ್‌ಪಾತ್‌ನಲ್ಲಿ ತೆರವು ಮಾಡುತ್ತಿಲ್ಲ. ಮೈಸೂರಿನ ದೇವರಾಜ ಮಾರ್ಕೆಟ್, ಬಂಬೂ ಬಜಾರ್ ರಸ್ತೆ, ಬಸ್ ನಿಲ್ದಾಣ ಸುತ್ತಮುತ್ತಾ ಫುಟ್‌ಪಾತ್‌ನಲ್ಲಿ ವ್ಯಾಪಾರ ಜೋರಿದೆ. ಯಾವ ರಸ್ತೆಯ ಮೇಲೂ ಪ್ರಯೋಗ ಆಗದ ತೆರವಿನ ಕಾರ್ಯ ವಿಶ್ವಮಾನವ ಜೋಡಿ ರಸ್ತೆ ಮೇಲೆ ಮಾಡಲಾಗುತ್ತಿದೆ. ಸಿಎಂ ಮನೆ ಕಟ್ಟುತ್ತಿದ್ದಾರೆ ಎಂಬ ಕಾರಣಕ್ಕೆ ಇಲ್ಲದ ನೆಪ ಹೇಳಿ ಅಂಗಡಿ ತೆರವು ಮಾಡುತ್ತಿದ್ದಾರೆ ಎಂದು ವ್ಯಾಪಾರಸ್ಥರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ| ತಂದೆ, ಮಗಳು ನೇಣಿಗೆ ಶರಣು – ಮಗಳ ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ ಶಂಕೆ

Share This Article