ಜೆಡಿಎಸ್ ಜೊತೆ ಹೋಗಿ ನಮ್ಮ ಸಮಯ ವೇಸ್ಟ್ ಆಯ್ತು: ಮೊಯ್ಲಿ

Public TV
1 Min Read
MOILY

ಚಿಕ್ಕಬಳ್ಳಾಪುರ: ನಮ್ಮ ಕಾರ್ಯಕರ್ತರು ಜೆಡಿಎಸ್ ಜೊತೆ ಹೋಗಿದ್ದಕ್ಕೆ ನಮ್ಮ ಸಮಯ ವ್ಯರ್ಥವಾಯಿತು. ಅವರ ಬೆಂಬಲ ಕೂಡ ನಮಗೆ ಸಿಗಲಿಲ್ಲ ಎಂದು ಮಾಜಿ ಸಿಎಂ ವೀರಪ್ಪಮೊಯ್ಲಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಜೊತೆ ಹೋಗಿ ನಾವು ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೇವೆ. ಲೋಕಭೆಯಲ್ಲಿ ನಮಗೆ ಕಹಿ ಅನುಭವವಾಗಿದೆ. ಅದು ಮುಂದೆ ಆಗದಂತೆ ನೋಡಿಕೊಳ್ಳಬೇಕು. ನಮ್ಮ ಪಕ್ಷವನ್ನ ಸಂಘಟನೆ ಮಾಡಿ ಚುನಾವಣೆ ಎದುರಿಸಬೇಕು. ಮೇಲ್ನೋಟಕ್ಕೆ ಜೆಡಿಎಸ್ ಅವರ ಬೆಂಬಲ ನಮಗೆ ಸಿಗಲಿಲ್ಲ. ಅನೇಕ ಕಡೆ ನಮ್ಮ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಪೋರ್ಟ್ ಮಾಡಲಿಲ್ಲ. ಜೊತೆಗೆ ನಮ್ಮ ಸಮಯವೂ ವ್ಯರ್ಥವಾಯಿತು ಎಂದು ವೀರಪ್ಪಮೊಯ್ಲಿ ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ.

HDD app

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುತ್ತೆ ಅನ್ನೋ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, ದೇವೆಗೌಡರು ಇಂದು ಒಂದು ಹೇಳುತ್ತಾರೆ, ನಾಳೆ ಒಂದು ಹೇಳುತ್ತಾರೆ. ಆದರೆ ನಾನು ದೇವೇಗೌಡರ ರೀತಿ ಹೇಳಿಕೆ ಕೊಡಲ್ಲ. ಹೀಗಾಗಿ ದೇವೇಗೌಡರ ಬಗ್ಗೆ ಮಾತನಾಡುವಷ್ಟು ದೊಡ್ಡವನೂ ನಾನಲ್ಲ ಎಂದು ಮೋಯ್ಲಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಸರ್ಕಾರದ ಬಗ್ಗೆ ಮತದಾರರಿಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಮೈತ್ರಿ ನಂಬಿ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಾಯಿತು. ಆದ್ದರಿಂದ ಮೈತ್ರಿ ಇಲ್ಲವಾಗಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತಿತ್ತು. ಸಮ್ಮಿಶ್ರ ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸದೇ ಇರುವುದು ಸಹ ಸೋಲಿಗೆ ಕಾರಣವಾಗಿದೆ. ಸರ್ಕಾರ ಉಳಿಸಿಕೊಳ್ಳಲು ಕೇವಲ ಹರಸಾಹಸ ಪಡುತ್ತಿದ್ದಾರೆ ಎಂದು ಸರ್ಕಾರದ ಬಗ್ಗೆ ಮೋಯ್ಲಿ ಅಸಾಮಾಧಾನ ವ್ಯಕ್ತಪಡಿಸಿದರು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *