ಮಂಗಳೂರು: ಎತ್ತರದ ಬೆಟ್ಟದಲ್ಲಿ ನೀರು ನಿಲ್ಲೋದಿಲ್ಲ. ಅದೇ ರೀತಿ ಮುಂದೆ ಎಲ್ಲಾ ಕಷ್ಟಗಳು ಜಾರಿ ಹೋಗುತ್ತವೆ ಎಂದು ಧರ್ಮಸ್ಥಳ (Dharmasthala ) ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು (Veerendra Heggade) ಹೇಳಿದ್ದಾರೆ.
ಧರ್ಮಸ್ಥಳ ಅಮೃತವರ್ಷಿಣಿ ಸಭಾಂಗಣದಲ್ಲಿ ಎಸ್.ಡಿ.ಎಂ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ, ಇತ್ತೀಚೆಗೆ ನಡೆದ ಆಘಾತಗಳಿಂದ ನಾನು ಕೂಡ ಜರ್ಜರಿತಗೊಂಡಿದ್ದೇನೆ. ಅನಾವಶ್ಯಕವಾಗಿ ಷಡ್ಯಂತ್ರ ನಡೆಯುತ್ತಿದೆ. ಷಡ್ಯಂತ್ರ ಎಂದು ಕೋರ್ಟ್‍ನಲ್ಲೇ ಗೊತ್ತಾಗಿದೆ. ಎತ್ತರದ ಬೆಟ್ಟದಲ್ಲಿ ನೀರು ನಿಲ್ಲೋದಿಲ್ಲ, ಆದು ಜಾರಿ ಕೆಳಗೆ ಬರಲೇ ಬೇಕು. ಅದೇ ರೀತಿ ಮುಂದಕ್ಕೆ ಎಲ್ಲಾ ಕಷ್ಟಗಳು ಹೋಗುತ್ತವೆ ಎಂದಿದ್ದಾರೆ. ಇದನ್ನೂ ಓದಿ: ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟ ಆರೋಪ – ಮಹೇಶ್ ಶೆಟ್ಟಿ ತಿಮರೋಡಿಗೆ ಬಂಧನ ಭೀತಿ
ಹಳೆಯ ವಿದ್ಯಾರ್ಥಿಗಳು ಬಂದಿದ್ದು ತುಂಬಾ ಸಂತೋಷವಾಗಿದೆ. ಈ ವಿಚಾರದ ಬಗ್ಗೆ ಈಗ ಹೆಚ್ಚು ಮಾತನಾಡೋದಿಲ್ಲ. ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ಸಂಸ್ಥೆಗಳ ಗುಣಮಟ್ಟ ಹೆಚ್ಚಿಸುತ್ತೇವೆ. ಈ ಕಿರಿಕಿರಿಯಿಂದ ಗುಣಮಟ್ಟವನ್ನು ತ್ಯಾಗ ಮಾಡಲ್ಲ ಎಂದಿದ್ದಾರೆ.
ಸಭೆಯಲ್ಲಿ ಹೆಗ್ಗಡೆ ಕುಟುಂಬಸ್ಥರು, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮೋಹನ್ ಆಳ್ವಾ ಭಾಗಿಯಾಗಿದ್ದರು. ಇದನ್ನೂ ಓದಿ: ತಿಮರೋಡಿ ಬಳಿಗೆ ನಮ್ಮನ್ನ ಕರೆದುಕೊಂಡು ಹೋಗಿದ್ದೇ ಸೌಜನ್ಯ ಮಾವ: ಚಿನ್ನಯ್ಯನ 2ನೇ ಪತ್ನಿ ಬಾಂಬ್