ನವದೆಹಲಿ: ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು.
ಪ್ರಧಾನಿ ಮೋದಿ ಅವರಿಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ ಕೃತಜ್ಞತೆ ತಿಳಿಸಿದರು. ಜೊತೆಗೆ ಪ್ರಸಾದ ಕೂಡ ನೀಡಿದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು. ಇದನ್ನೂ ಓದಿ: ಜ್ಞಾನವಾಪಿ ವಿವಾದ – ಶಿವಲಿಂಗ ಪೂಜೆಗಿಲ್ಲ ಅವಕಾಶ: ಸುಪ್ರೀಂ ಕೋರ್ಟ್
Advertisement
ಪ್ರಧಾನಿ ಶ್ರೀ @narendramodi ಅವರನ್ನು ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ನೂತನ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ ವೀರೇಂದ್ರ ಹೆಗ್ಗಡೆ ಅವರೊಂದಿಗೆ ಸಂಸತ್ ಭವನದಲ್ಲಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. pic.twitter.com/cABwbB9HjG
— BJP Karnataka (@BJP4Karnataka) July 21, 2022
Advertisement
ಪ್ರಧಾನಿ ಭೇಟಿ ಕುರಿತು ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರೇಂದ್ರ ಹೆಗ್ಗಡೆ ಅವರು, ಸಂಸತ್ ನೋಡುವ ಆಸೆ ಮೊದಲಿನಿಂದಲೂ ಇತ್ತು. ಆದರೆ ಸಂಸತ್ ಸದಸ್ಯನಾಗಿ ಒಳಗೆ ಹೋಗುವ ಅವಕಾಶ ಸಿಕ್ಕಿತು. ಒಳಗೆ ಹೋಗಿ ನೋಡಿದ ಮೇಲೆ ತುಂಬಾ ಗೌರವ ಬಂತು. ಎಲ್ಲ ಭಕ್ತರು ನನ್ನ ಆಯ್ಕೆಯಿಂದ ಸಂತೋಷ ಪಟ್ಟಿದ್ದಾರೆ. ಎಲ್ಲರೂ ಗೌರವ ಸಲ್ಲಿಸುತ್ತಿದ್ದಾರೆ ಎಂದು ಖುಷಿ ಹಂಚಿಕೊಂಡಿದ್ದಾರೆ.
Advertisement
Advertisement
ಈ ಹಿಂದೆ ಹಲವು ಪ್ರಯೋಗಗಳನ್ನು ಮಾಡಿದ್ದೇವೆ. ಅವು ಯಶಸ್ಸು ಕಂಡಿವೆ, ಅವುಗಳನ್ನು ಬೇರೆ ರಾಜ್ಯಗಳಿಗೆ ವಿಸ್ತರಿಸಲು ಅವಕಾಶ ಇದೆ. ಸರ್ಕಾರದ ಬೆಂಬಲವೂ ಇರುವುದರಿಂದ ಇದು ಸುಲಭವಾಗಬಹುದು. ಮೊದಲು ಅರ್ಜಿ ಹಾಕಿ ಪದವಿ ಪಡೆಯುತ್ತಿದ್ದರು. ಈಗ ಕೆಲಸ ಮಾಡಿದವರನ್ನು ಗುರುತಿಸಲಾಗುತ್ತಿದೆ. ನಾನು ಯಾವುದೇ ಪಕ್ಷಕ್ಕೂ ಈಗಲೂ ಹೊದಿಕೊಳ್ಳುವುದಿಲ್ಲ. ನಾನು ಪಕ್ಷಾಂತರವಾಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ವಿದ್ಯುತ್ ಉಚಿತ ಪೂರೈಕೆ ಭರವಸೆ ನೀಡಿದ ಕೇಜ್ರಿವಾಲ್
ರಾಜ್ಯಸಭೆಗೆ ಆಯ್ಕೆಯಾಗಿರುವುದರಿಂದ ಪಕ್ಷಾತೀತವಾಗಿ ಕೆಲಸ ಮಾಡಿದೆ. ನಾವು ಯಾವುದೇ ಫಲಾಪೇಕ್ಷೆ ಇಲ್ಲದೇ ಕೆಲಸ ಮಾಡಿದ್ದೇವೆ. ಇಂದು ಮೊದಲ ಬಾರಿ ಕಲಾಪಕ್ಕೆ ಹಾಜರಾಗಿದ್ದೆ, ಮುಂದೆ ಕಾರ್ಯಗಳ ಬಗ್ಗೆ ಚಿಂತನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.