ಚೆನ್ನೈ: ದಂತಚೋರ, ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ತಮಿಳುನಾಡಿನ ಕೃಷ್ಣಗಿರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿರುವುದಾಗಿ ವರದಿಯಾಗಿದೆ.
ವೃತ್ತಿಯಲ್ಲಿ ವಕೀಲೆ ಆಗಿರುವ ವಿದ್ಯಾರಾಣಿ ಅವರು ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅವರ ಸಮ್ಮುಖದಲ್ಲಿ ಕಮಲಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಮಾಜಿ ಕೇಂದ್ರ ಸಚಿವ ಪೊನ್ನ ರಾಧಾಕೃಷ್ಣನ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Advertisement
Advertisement
ಬಿಜೆಪಿ ಸೇರ್ಪಡೆಗೊಂಡ ಬಳಿಕ ಮಾತನಾಡಿದ ವಿದ್ಯಾರಾಣಿ, ನನ್ನ ತಂದೆ ವೀರಪ್ಪನ್ ತಪ್ಪು ಮಾಡಿರಬಹುದು ಆದ್ರೆ ಅವರು ಯಾವಾಗಲು ಬಡವರಿಗಾಗಿ ಬದುಕುತ್ತಿದ್ದರು. ಅವರು ಕೂಡಾ ಸಮಾಜ ಸೇವೆ ಮಾಡಲು ಬಯಸಿದ್ದರು, ಆದರೆ ಅವರು ಆಯ್ಕೆ ಮಾಡಿಕೊಂಡ ಮಾರ್ಗ ತಪ್ಪಾಗಿತ್ತು. ಈಗ ನಾನು ಸಮಾಜ ಸೇವೆ ಮಾಡುವ ಉದ್ದೇಶದಿಂದ ಬಿಜೆಪಿ ಸೇರಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
Advertisement
Advertisement
ವೀರಪ್ಪನ್ ಅವರ ಹಿರಿಯ ಮಗಳಾದ ವಿದ್ಯಾರಾಣಿ ಈ ಹಿಂದೆ ಕೂಡ ಸುದ್ದಿಯಾಗಿದ್ದರು. ಪ್ರೀತಿಸಿ ಮದುವೆಯಾಗಲು ಹೊರಟಾದ ಅವರ ತಾಯಿ ಮುತ್ತುಲಕ್ಷ್ಮೀ ವಿರೋಧಿಸಿದ್ದರು. ಆಗ ಈ ವಿಚಾರ ಹೈಕೋರ್ಟ್ ಮೆಟ್ಟಿಲೇರಿತ್ತು.