ಅನ್ಯಧರ್ಮದ ಹುಡುಗನನ್ನು ಹುಚ್ಚಿಯಂತೆ ಪ್ರೀತಿಸಿದ್ದಕ್ಕೆ ವಿಷಾದವಿದೆ: ‘ವೀರ ಕನ್ನಡಿಗ’ ನಟಿ

Public TV
2 Min Read
anita

ನ್ನಡದ ‘ವೀರ ಕನ್ನಡಿಗ’ ನಟಿ ಅನಿತಾ ಹಸನಂದಾನಿ (Anita hassanandani) ಅವರು ರೋಹಿತ್ ರೆಡ್ಡಿ ಜೊತೆ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಇದೀಗ ಇತ್ತೀಚಿನ ಸಂದರ್ಶನವೊಂದರಲ್ಲಿ ಮದುವೆಗೂ ಮುನ್ನ ಪ್ರೀತಿಸಿದ ಅನ್ಯಧರ್ಮದ ಹುಡುಗನ ಜೊತೆಗಿನ ಬ್ರೇಕಪ್ (Breakup) ಬಗ್ಗೆ ಮಾತನಾಡಿದ್ದಾರೆ. ಅನ್ಯಧರ್ಮದ ಹುಡುಗನನ್ನು ಹುಚ್ಚಿಯಂತೆ ಪ್ರೀತಿಸಿದ್ದಕ್ಕೆ ವಿಷಾದವಿದೆ ಎಂದು ನಟಿ ಹೇಳಿದ್ದಾರೆ. ಇದನ್ನೂ ಓದಿ:ತಿರುಪತಿ ಲಡ್ಡು ವಿವಾದ: ತಿಮ್ಮಪ್ಪನ ಕ್ಷಮೆ ಕೋರಿ 11 ದಿನಗಳ ಉಪವಾಸ ಕೈಗೊಂಡ ಪವನ್ ಕಲ್ಯಾಣ್

anita hassanandani 1ಅನಿತಾ ಈ ಹಿಂದಿನ ಪ್ರೇಮಕಥೆಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ನನ್ನ ಬದುಕಿನಲ್ಲಿ ಬಂದ ಕೆಲವು ಪ್ರಮುಖ ವ್ಯಕ್ತಿಗಳ ಪೈಕಿ ಎಜಾಜ್ ಖಾನ್ ಕೂಡ ಒಬ್ಬರು, ನಾನು ಅವರನ್ನು ಹುಚ್ಚಿಯಂತೆ ಪ್ರೀತಿ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಆದರೆ ನಮ್ಮ ಪ್ರೀತಿಗೆ ಧರ್ಮ ಅಡ್ಡಿ ಬಂತು, ನನ್ನ ತಾಯಿ ನಮ್ಮ ಸಂಬಂಧಕ್ಕೆ ವಿರುದ್ಧವಾಗಿದ್ದರು ಎಂದು ಹೇಳಿದ್ದಾರೆ. ಅವನು ಮುಸ್ಲಿಂ ಮತ್ತು ನಾನು ಹಿಂದೂ ನಮ್ಮ ನಡುವೆ ಪರಸ್ಪರ ಕಾಳಜಿ ಇತ್ತು ಆದರೂ ಸಂಬಂಧ ಉಳಿಯಲಿಲ್ಲ. ಅಂದು ಎಜಾಜ್ ಅವರಿಂದ ದೂರವಾಗುವುದು ತುಂಬಾ ಕಷ್ಟವಾಗಿತ್ತು. ಆ ನೋವಿನಿಂದ ಹೊರಬರಲು ನನಗೆ ಒಂದು ವರ್ಷವೇ ಬೇಕಾಯಿತು ಎಂದು ಹೇಳಿದ್ದಾರೆ.

anita hassanandani

ಯಾರಾದರೂ ನಿಮ್ಮನ್ನು ಬದಲಾಯಿಸಲು ಪ್ರಯತ್ನ ಮಾಡಿದರೆ ಅದು ಪ್ರೀತಿ ಅಲ್ಲವೇ ಅಲ್ಲ ಎಂದಿದ್ದಾರೆ ಅನಿತಾ. ನಾನು ಅವನಿಗೋಸ್ಕರ ನನ್ನನ್ನು ತುಂಬಾ ಬದಲಿಸಿಕೊಂಡಿದ್ದೆ ಎಂದಿದ್ದಾರೆ. ಕೈತುಂಬಾ ಅವಕಾಶಗಳಿರುವ ಸಮಯದಲ್ಲಿ ಆ ವ್ಯಕ್ತಿಗೋಸ್ಕರ ನಾನು ಎಲ್ಲವನ್ನೂ ತ್ಯಾಗ ಮಾಡಿದೆ. ಈ ವಿಚಾರದಲ್ಲಿ ನನಗೆ ಈಗಲೂ ಬೇಸರವಿದೆ ಎಂದು ಕೂಡ ಹೇಳಿದ್ದಾರೆ. ಪ್ರೀತಿಸುವ ವ್ಯಕ್ತಿಗಾಗಿ ನಾವು ನಮ್ಮನ್ನು ಬದಲಿಸಿಕೊಳ್ಳಬಾರದು. ಬದಲಾಯಿಸಲು ಪ್ರಯತ್ನ ಮಾಡುವವರ ಜೊತೆ ನಾವು ಯಾವತ್ತೂ ಕೂಡ ಇರಬಾರದು ಎಂದಿದ್ದಾರೆ.

ಅಂದಹಾಗೆ, ಜನಪ್ರಿಯ ಹಿಂದಿ ಸೀರಿಯಲ್ ‘ಕಾವ್ಯಾಂಜಲಿ’ ಸೀರಿಯಲ್‌ನಲ್ಲಿ ನಾಯಕಿಯಾಗಿ ಅನಿತಾ ನಟಿಸಿದ್ದರು. ಇದೇ ಸೀರಿಯಲ್‌ನ ಸಹನಟ ಎಜಾಜ್ ಖಾನ್ ಜೊತೆ ಅನಿತಾಗೆ ಲವ್ ಆಗಿತ್ತು. ವೈಯಕ್ತಿಕ ಕಾರಣಗಳಿಂದ 2007ರಲ್ಲಿ ಇಬ್ಬರೂ ದೂರವಾದರು. ಬಳಿಕ 2013ರಲ್ಲಿ ರೋಹಿತ್ ರೆಡ್ಡಿ ಜೊತೆ ನಟಿ ಮದುವೆಯಾದರು. ಇದೀಗ ಇಬ್ಬರ ದಾಂಪತ್ಯಕ್ಕೆ ಗಂಡು ಮಗು ಸಾಕ್ಷಿಯಾಗಿದ್ದಾನೆ.

Share This Article