ವಿಜಯಪುರ: ರಾಜ್ಯದಲ್ಲಿ ಸಾವರ್ಕರ್ ಪರ-ವಿರೋಧ ವಾದ ತಾರಕಕ್ಕೇರುತ್ತಿರುವ ನಡುವೆಯೇ ವಿಜಯಪುರದ ಕಾಂಗ್ರೆಸ್ ಕಚೇರಿಯಲ್ಲಿ ಸಾವರ್ಕರ್ ಫೋಟೋ ರಾರಾಜಿಸಿದೆ.
Advertisement
ಜಲನಗರದ ಕಚೇರಿ ಗೋಡೆಗಳ ಮೇಲೆ ಸಾವರ್ಕರ್ ಭಾವಚಿತ್ರ ಪ್ರತ್ಯಕ್ಷವಾಗಿದೆ. ರಾತ್ರೋರಾತ್ರಿ ಸಾವರ್ಕರ್ ಫೋಟೋ ಪ್ರತ್ಯಕ್ಷವಾಗಿದ್ದು, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ್ ನೇತೃತ್ವದಲ್ಲಿ ಕೃತ್ಯ ನಡೆಸಲಾಗಿದೆ ಎಂಬ ಆರೋಪವಿದೆ. ಈ ವಿವಾದ ಮತ್ತಷ್ಟು ತಾರಕಕ್ಕೇರುವ ಸಾಧ್ಯತೆಯನ್ನು ಅರಿತ ಪೊಲೀಸರು ಫೋಟೋಗಳನ್ನು ತೆರವುಗೊಳಿಸಿದ್ದಾರೆ. ಇದನ್ನೂ ಓದಿ: ಆಜಾನ್ ವಿರುದ್ಧ ಮತ್ತೆ ಸಮರ – 23ರಂದು ರಾಜ್ಯಾದ್ಯಂತ ಹೋರಾಟಕ್ಕೆ ಶ್ರೀರಾಮಸೇನೆ ಕರೆ
Advertisement
Advertisement
ಸಾವರ್ಕರ್ ಬಗ್ಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ರಾಜ್ಯದ ವಿವಿಧೆಡೆ ಸಾವರ್ಕರ್ ಫ್ಲೆಕ್ಸ್, ಫೋಟೋ ಹಾಕುವ ಮೂಲಕ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ. ಕೆಲದಿನಗಳ ಹಿಂದೆ ಸಿದ್ದರಾಮಯ್ಯ ಮಡಿಕೇರಿ ಪ್ರವಾಸ ಕೈಗೊಂಡಿದ್ದಾಗ ಸಾವರ್ಕರ್ ಫೋಟೋ ಪ್ರದರ್ಶಿಸಿ ಅವರ ಕಾರಿಗೆ ಮೊಟ್ಟೆ ಎಸೆಯಲಾಗಿತ್ತು. ಆ ಬಳಿಕ ಸಾವರ್ಕರ್ ಫೋಟೋ ಎಲ್ಲೆಡೆ ಕಂಡು ಬರುತ್ತಿದ್ದು, ಇದೀಗ ಸಾವರ್ಕರ್ ಫೋಟೋ ಕಾಂಗ್ರೆಸ್ ಕಚೇರಿಯ ಗೋಡೆಗಳ ಮೇಲೆ ಹಾಕಿರುವುದು ವಿವಾದಕ್ಕೆ ಇನ್ನಷ್ಟು ಬೆಂಕಿ ಹಚ್ಚಿದಂತಾಗಿದೆ. ಇದನ್ನೂ ಓದಿ: 23 ಏಮ್ಸ್‌ಗಳಿಗೆ ಸ್ವಾತಂತ್ರ್ಯ ಹೋರಾಟಗಾರರು, ಸ್ಥಳೀಯ ನಾಯಕರ ಹೆಸರಿಡಿ – ಕೇಂದ್ರಕ್ಕೆ ಪ್ರಸ್ತಾವ
Advertisement
Live Tv
[brid partner=56869869 player=32851 video=960834 autoplay=true]