ಬೆಳಗಾವಿ: ಪೀಠಗಳಿಗಿಂತ ಮೀಸಲಾತಿಗೆ ಒತ್ತಡ ಹಾಕಲಿ, ಸತ್ಯಾಗ್ರಹ ಮಾಡಲಿ, ಹೋರಾಟ ಮಾಡಲಿ ಆದರೆ ಈ ಸಮಯದಲ್ಲಿ ಪೀಠ ಅಗತ್ಯವಿತ್ತಾ ಎಂದು ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ ವಾಗ್ದಾಳಿ ನಡೆಸಿದರು.
ಲಿಂಗಾಯತ ಪಂಚಮಸಾಲಿ 4ನೇ ಮಹಿಳಾ ಪೀಠ ಸ್ಥಾಪನೆ ಸಿದ್ಧತೆ ವಿಚಾರವಾಗಿ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೀಠದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಜನರಿಗೂ ಗೊತ್ತಿದೆ. ಮೀಸಲಾತಿಗಾಗಿ ಮಹಿಳೆಯರಿಂದ ಹೋರಾಟ ಮುಂದುವರೆಯುತ್ತದೆ. ಗ್ರಾಮಗಳಲ್ಲಿ ಮಹಿಳೆಯರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇವೆ. ಆದರೆ ನಾಲ್ಕನೇ ಪೀಠ ಮಹಿಳಾ ಪೀಠ ಮಾಡುತ್ತಾರೆ ಎನ್ನುವ ಮಾಹಿತಿ ಇದೆ ಎಂದು ಹೇಳಿದರು.
ಕಿಶೋರಿ ಎನ್ನುವವರು ಈಗ ನಾಲ್ಕನೇ ಪೀಠ, ಮಹಿಳಾ ಪೀಠ ಮಾಡುತ್ತಿದ್ದಾರೆ. ಹೀಗಾಗಿ ನಾವು ಅವರನ್ನು ಕೈ ಬಿಟ್ಟಿದ್ದೇವೆ. ಇದನ್ನು ಮಹಿಳಾ ಘಟಕವು ವಿರೋಧಿಸುತ್ತದೆ. ನಮಗೆ ನಾಲ್ಕನೇ ಪೀಠದ ಅವಶ್ಯಕತೆ ಇಲ್ಲ. ನಾವು ಆ ಪೀಠಕ್ಕೆ ಬೆಂಬಲ ನೀಡುತ್ತಿಲ್ಲ. ಜನರ ಹಾದಿ ತಪ್ಪಿಸಲು ಹೊರಟಿದ್ದಾರೆ. ಇನ್ನೂ ನನ್ನ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ನಾವು ಆ ಪೀಠಕ್ಕೆ ಬೆಂಬಲ ನೀಡಲ್ಲ ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ: ನಕಲಿ ಸಮಾಜವಾದ: ಅಖಿಲೇಶ್ ಯಾದವ್ ಪಕ್ಷದ ವಿರುದ್ಧ ಮೋದಿ ವಾಗ್ದಾಳಿ