-ಮಹಾತ್ಮ ಗಾಂಧೀಜಿ ರಾಷ್ಟ್ರಪಿತ ಅಲ್ವಾ..?
ಧಾರವಾಡ: ಮಹಾಭಾರತ ರಚಿಸಿರೋ ವೇದವ್ಯಾಸರೊಬ್ಬರೇ ನಮ್ಮ ದೇಶದ ರಾಷ್ಟ್ರಪಿತ. ಉಳಿದವರು ಅನೇಕರು ದೊಡ್ಡ ವ್ಯಕ್ತಿಗಳಿದ್ದರೂ ಅವರೆಲ್ಲ ರಾಷ್ಟ್ರಪುತ್ರರು ಮಾತ್ರ ಅಂತ ಪೇಜಾವರ ಶ್ರೀಗಳು ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿ, ಪರೋಕ್ಷವಾಗಿ ಮಹಾತ್ಮಾ ಗಾಂಧಿ ರಾಷ್ಟ್ರಪಿತ ಅಲ್ಲ ಅಂತ ವಿವಾದದ ಕಿರಿ ಹೊತ್ತಿಸಿದ್ದಾರೆ.
Advertisement
ಮಹಾಭಾರತದಲ್ಲಿ ಎಲ್ಲವೂ ಅಡಗಿದೆ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ತತ್ವಶಾಸ್ತ್ರ, ವೇದಾಂತ ಹೀಗೆ ಎಲ್ಲವನ್ನು ವೇದವ್ಯಾಸರು ಮಹಾಭಾರತದ ಮೂಲಕ ಹೇಳಿಕೊಟ್ಟಿದ್ದಾರೆ. ರಾಜಕಾರಣ ಹೇಗಿರಬೇಕು, ರಾಜನಾದವರು ದೇಶ ಪರಿಪಾಲನೆ ಹೇಗೆ ಮಾಡಬೇಕು ಎಂಬುದೆಲ್ಲವನ್ನು ವೇದವ್ಯಾಸರು ಮಹಭಾರತದ ಮೂಲಕ ಪರಿಚಯ ಮಾಡಿಕೊಟ್ಟಿದ್ದಾರೆ. ಹೀಗಾಗಿ ವೇದವ್ಯಾಸರೊಬ್ಬರೇ ನಮ್ಮ ದೇಶದ ರಾಷ್ಟ್ರಪಿತ ಅಂತಾ ಹೇಳಿದ್ದಾರೆ.
Advertisement
Advertisement
ಪ್ರಧಾನಿಗಳು ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ಬಹುಮತ ಪಡೆದು ಎರಡನೇ ಬಾರಿ ಸಂಸತ್ ಪ್ರವೇಶ ಮಾಡುತ್ತಿದ್ದಾರೆ. ಹಾಗಾಗಿ ಪ್ರಧಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ. ಮುಂದಿನ ದಿನಗಳಲಿಯೂ ರಾಜ್ಯಸಭೆಯಲ್ಲಿ ಬಹುಮತ ಬರಲಿದ್ದು, ರಾಮಮಂದಿರ ನಿರ್ಮಾಣ ಆಗಲಿದೆ ಎಂಬ ಪೂರ್ಣ ಭರವಸೆಯನ್ನು ಹೊಂದಿದ್ದೇವೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಯಬೇಕು. ಮೋದಿ ಅವರ ಕೈಯಲ್ಲಿ ಐದು ವರ್ಷಗಳಿದ್ದು, ರಾಮಮಂದಿರ ನಿರ್ಮಾಣ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.