ನವದೆಹಲಿ: ಫಾಕ್ಸ್‌ಕಾನ್(Foxconn) ಜೊತೆಗೂಡಿ 1.54 ಲಕ್ಷ ಕೋಟಿ ಹೂಡಿಕೆಯ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಗುಜರಾತ್(Gujarat) ರಾಜ್ಯವನ್ನು ಆಯ್ಕೆ ಮಾಡಿದ್ದು ಯಾಕೆ ಎಂಬ ಪ್ರಶ್ನೆಗೆ ವೇದಾಂತ(Vedanta Ltd.) ಕಂಪನಿಯ ಮುಖ್ಯಸ್ಥ ಅನಿಲ್ ಅಗರ್‌ವಾಲ್(Anil Agarwal) ಉತ್ತರ ನೀಡಿದ್ದಾರೆ.
ಮಾಧ್ಯಮ ಕೇಳಿದ ಪ್ರಶ್ನೆಗೆ, ಉನ್ನತ ನಿರ್ವಹಣಾ ಸಲಹಾ ಸಂಸ್ಥೆ, ಅಕೌಂಟೆನ್ಸಿ ಸಂಸ್ಥೆ ಮತ್ತು ಫಾಕ್ಸ್‌ಕಾನ್ ಪರಿಣಿತರು ಐದಾರು ರಾಜ್ಯಗಳಿಗೆ ಭೇಟಿ ನೀಡಿದರು. ಗುಜರಾತ್ ಅನ್ನು ಆಯ್ಕೆ ಮಾಡುವುದು ʼವೃತ್ತಿಪರ ನಿರ್ಧಾರʼ ಎಂದು ಅಗರ್‌ವಾಲ್ ಉತ್ತರಿಸಿದರು.
Advertisement
Advertisement
ನಮಗೆ ಬೇಗನೆ ಘಟಕ ಆರಂಭಿಸಬೇಕಿತ್ತು ಮತ್ತು ಸಮಯದ ನಿರ್ಬಂಧವಿತ್ತು. ಮತ್ತಷ್ಟು ಮೌಲ್ಯಮಾಪನ ಮಾಡುವುದನ್ನು ಮುಂದುವರಿಸಲು ಅವರಿಗೆ ಇನ್ನೆರಡು ತಿಂಗಳು ಕಾಲಾವಕಾಶ ನೀಡಲು ನಾವು ಬಯಸಿರಲಿಲ್ಲ. ಹೀಗಾಗಿ ಕೂಡಲೇ ರಾಜ್ಯಗಳ ಮೌಲ್ಯಮಾಪನಕ್ಕೆ ಪೂರ್ಣವಿರಾಮ ಹಾಕಿ ಶಿಫಾರಸು ಮಾಡಿ. ನೀವು ಯಾವುದನ್ನು ಅಂತಿಮವಾಗಿ ಹೇಳುತ್ತಿರೋ ಅದನ್ನು ನಾವು ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದ್ದೆವು. ಅವರು ನಮಗೆ ಗುಜರಾತ್‌ಗೆ ಹೋಗಬೇಕೆಂದು ಶಿಫಾರಸು ಮಾಡಿದರು ಎಂದು ತಿಳಿಸಿದರು.
Advertisement
ಈ ವೇಳೆ ಗುಜರಾತ್ ರಾಜ್ಯವನ್ನು ಫೈನಲ್ ಮಾಡಿದ ಆ ಸಲಹೆಗಾರರು ಯಾರು ಎಂಬ ಪ್ರಶ್ನೆಗೆ ಅನಿಲ್ ಅಗರ್‌ವಾಲ್ ಉತ್ತರ ನೀಡಲಿಲ್ಲ. ಇದನ್ನೂ ಓದಿ: ಕರ್ನಾಟಕವನ್ನು ಹಿಂದಿಕ್ಕಿ 1.54 ಲಕ್ಷ ಕೋಟಿ ಹೂಡಿಕೆಯ ಸೆಮಿಕಂಡಕ್ಟರ್ ಘಟಕ ತನ್ನದಾಗಿಸಿಕೊಂಡ ಗುಜರಾತ್, ವೇದಾಂತ ಕಂಪನಿಯ ಷರತ್ತು ಏನಿತ್ತು?
Advertisement
ಎರಡು ಹಂತದಲ್ಲಿ ಈ ಘಟಕ ಆರಂಭವಾಗಲಿದೆ. ಮೊದಲ ಹಂತದಲ್ಲಿ ನಾವು ಸುಮಾರು 10 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗುವುದು. ಹಣ ಎಂದಿಗೂ ಸಮಸ್ಯೆಯಾಗುವುದಿಲ್ಲ ಎಂದರು.
ಈ ಘಟಕದಲ್ಲಿ ಸ್ಮಾರ್ಟ್‌ಫೋನ್ ಮತ್ತು ಎಲೆಕ್ಟ್ರಿಕ್ ವಾಹನಗಳು ತಯಾರಾಗಲಿದೆ ಎಂಬ ವರದಿಯನ್ನು ನಿರಾಕರಿಸಿದ ಅವರು, ಈ ಸಮಯದಲ್ಲಿ ನಾವು ಕಚ್ಚಾ ವಸ್ತುಗಳ ತಯಾರಿಕೆಯತ್ತ ಗಮನಹರಿಸಿದ್ದೇವೆ ಎಂದು ಹೇಳಿದರು.
ವೇದಾಂತ ಲಿಮಿಟೆಡ್ ಮತ್ತು ತೈವಾನ್‌ನ ಫಾಕ್ಸ್‌ಕಾನ್ ಕಂಪನಿಯ ಸೆಮಿಕಂಡಕ್ಟರ್ ಘಟಕಕ್ಕೆ ಸ್ಥಾಪನೆಗೆ ಜಾಗ ನೀಡಲು ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್ ಮುಂದಾಗಿದ್ದವು. ಆದರೆ ವೇದಾಂತ ಷರತ್ತನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಯಾಗಲಿದೆ. ವೇದಾಂತ ಕಂಪನಿ ಶೇ.60, ಫಾಕ್ಸ್‌ಕಾನ್ ಕಂಪನಿ ಶೇ.40 ರಷ್ಟು ಬಂಡವಾಳವನ್ನು ಹೂಡಲಿದೆ. ಎರಡು ವರ್ಷದಲ್ಲಿ ಈ ಘಟಕ ಸ್ಥಾಪನೆಯಾಗಲಿದೆ.
ಸೆಮಿಕಂಡಕ್ಟರ್ ಚಿಪ್‌ಗಳು ಅಥವಾ ಮೈಕ್ರೋಚಿಪ್‌ಗಳು ಕಾರು, ಮೊಬೈಲ್ ಫೋನ್‌ಗಳಿಂದ ಹಿಡಿದು ಎಟಿಎಂ ಕಾರ್ಡ್, ಅನೇಕ ಡಿಜಿಟಲ್ ಗ್ರಾಹಕ ಉತ್ಪನ್ನಗಳಿಗೆ ಅತ್ಯಗತ್ಯ. ಭಾರತೀಯ ಸೆಮಿಕಂಡಕ್ಟರ್ ಮಾರುಕಟ್ಟೆಯು 2021 ರಲ್ಲಿ 27.2 ಶತಕೋಟಿ ಡಾಲರ್ ಮೌಲ್ಯ ಹೊಂದಿದರೆ 2026ರಲ್ಲಿ 64 ಶತಕೋಟಿ ಡಾಲರ್‌ಗೆ ಬೆಳವಣಿಗೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿಯವರೆಗೆ ಭಾರತದಲ್ಲಿ ಚಿಪ್ ತಯಾರಾಗುತ್ತಿರಲಿಲ್ಲ. ಚಿಪ್ ಕ್ಷೇತ್ರದಲ್ಲಿ ಚೀನಾ, ತೈವಾನ್ ಮುಂಚೂಣಿಯಲ್ಲಿದೆ. ಈಗ ಭಾರತ ಈ ಕ್ಷೇತ್ರದತ್ತ ಗಮನ ಹರಿಸಿದೆ.