ನವದೆಹಲಿ: ಸೆಮಿಕಂಡಕ್ಟರ್ ಘಟಕ ಸ್ಥಾಪನೆಯ ಪೈಪೋಟಿಯಲ್ಲಿ ಕರ್ನಾಟಕಕ್ಕೆ(Karnataka) ಸೋಲಾಗಿದೆ. ಮೂರು ರಾಜ್ಯಗಳನ್ನು ಹಿಂದಿಕ್ಕಿ 1.54 ಲಕ್ಷ ಕೋಟಿ ರೂ. ಹೂಡಿಕೆ ಘಟಕವನ್ನು ತನ್ನದಾಗಿಸಿಕೊಳ್ಳುವಲ್ಲಿ ಗುಜರಾತ್(Gujarat) ಯಶಸ್ವಿಯಾಗಿದೆ.
ವೇದಾಂತ ಲಿಮಿಟೆಡ್ (Vedanta Ltd.) ಮತ್ತು ತೈವಾನ್‌ನ ಫಾಕ್ಸ್‌ಕಾನ್ (Foxconn) ಕಂಪನಿಯ ಸೆಮಿಕಂಡಕ್ಟರ್ ಘಟಕಕ್ಕೆ ಸ್ಥಾಪನೆಗೆ ಜಾಗ ನೀಡಲು ಕರ್ನಾಟಕ, ಮಹರಾಷ್ಟ್ರ, ತೆಲಂಗಾಣ, ಗುಜರಾತ್ ಮುಂದಾಗಿದ್ದವು.
Advertisement
ರಾಜ್ಯಗಳು ಪೈಪೋಟಿಗೆ ಇಳಿದ ಹಿನ್ನೆಲೆಯಲ್ಲಿ ಕಂಪನಿ ಭಾರೀ ರಿಯಾಯಿಯಿತಿಯನ್ನು ಬಯಸಿತ್ತು. ಮುಖ್ಯವಾಗಿ 1000 ಎಕ್ರೆ ಭೂಮಿಯನ್ನು ಯಾವುದೇ ಶುಲ್ಕವಿಲ್ಲದೇ 99 ವರ್ಷಗಳ ಅವಧಿಗೆ ಗುತ್ತಿಗೆ (Lease) ನೀಡಬೇಕು. ಇದರ ಜೊತೆ 20 ವರ್ಷಗಳ ಅವಧಿಗೆ ನೀರು ಮತ್ತು ವಿದ್ಯುತ್ ಅನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು ಎಂದು ಬೇಡಿಕೆ ಇಟ್ಟಿತ್ತು.
Advertisement
Advertisement
ಈ ಬೇಡಿಕೆಗೆ ಗುಜರಾತ್ ಸರ್ಕಾರ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ ಹೊಸ ಸೆಮಿಕಂಡಕ್ಟರ್ ಮತ್ತು ಡಿಸ್‌ಪ್ಲೇ ಉತ್ಪಾದನಾ ಘಟಕ ಆರಂಭವಾಗಲಿದೆ. ಇದನ್ನೂ ಓದಿ: ಟಾಟಾ ಕಂಪನಿಯಿಂದ ಮೇಡ್ ಇನ್ ಇಂಡಿಯಾ ಐಫೋನ್ ಉತ್ಪಾದನೆ?
Advertisement
ವೇದಾಂತ ಕಂಪನಿಯ ಮುಖ್ಯಸ್ಥ ಅನಿಲ್ ಅಗರ್‌ವಾಲ್ ಈ ಬಗ್ಗೆ ಟ್ವೀಟ್ ಮಾಡಿ, ಇತಿಹಾಸ ನಿರ್ಮಾಣವಾಗುತ್ತದೆ! ಹೊಸ ವೇದಾಂತ-ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ಸ್ಥಾವರವನ್ನು ಗುಜರಾತ್‌ನಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಲು ಸಂತೋಷವಾಗುತ್ತಿದೆ. ವೇದಾಂತದ 1.54 ಲಕ್ಷ ಕೋಟಿಗಳ ರೂ. ಹೂಡಿಕೆಯು ಭಾರತದ ಆತ್ಮನಿರ್ಭರ್ ಸಿಲಿಕಾನ್ ವ್ಯಾಲಿಯ ಕನಸನ್ನು ನನಸು ಮಾಡಲಿದೆ ಎಂದಿದ್ದಾರೆ.
This project will help fulfil Hon'ble PM @narendramodi Ji's vision of creating a robust manufacturing base in India. It will reduce our electronics imports & provide 1 lakh direct skilled jobs to our people…going from job seekers to job creators! (2/4)
— Anil Agarwal (@AnilAgarwal_Ved) September 13, 2022
ಇದು ನಮ್ಮ ಎಲೆಕ್ಟ್ರಾನಿಕ್ಸ್ ಆಮದುಗಳನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ಜನರಿಗೆ 1 ಲಕ್ಷ ನೇರ ಕೌಶಲ್ಯದ ಉದ್ಯೋಗಗಳನ್ನು ಒದಗಿಸುತ್ತದೆ . ಗುಜರಾತ್ ಸರ್ಕಾರ ಮತ್ತು ಕೇಂದ್ರ ಐಟಿ ಸಚಿವರಿಗೆ ನನ್ನ ಧನ್ಯವಾದಗಳು. ಹೊಸ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರಗಳ ಮೂಲಕ ಪ್ರತಿ ರಾಜ್ಯವೂ ಪ್ರಯೋಜನ ಪಡೆಯುವುದರೊಂದಿಗೆ ಭಾರತದ ಟೆಕ್ ಪರಿಸರ ವ್ಯವಸ್ಥೆಯು ಅಭಿವೃದ್ಧಿ ಹೊಂದುತ್ತದೆ. ಭಾರತ ಸಿಲಿಕಾನ್ ವ್ಯಾಲಿಯಾಗುವ ಹೆಜ್ಜೆ ಹತ್ತಿರವಾಗಿದೆ. ಚಿಪ್ ಟೇಕರ್‌ನಿಂದ ಚಿಪ್ ಮೇಕರ್‌ನತ್ತ ಪ್ರಯಾಣ ಅಧಿಕೃತವಾಗಿ ಪ್ರಾರಂಭವಾಗಿದೆ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.
India's own Silicon Valley is a step closer now. #India will fulfil the digital needs of not just her people, but also those from across the seas. The journey from being a Chip Taker to a Chip Maker has officially begun…Jai Hind! ???????? (4/4)
— Anil Agarwal (@AnilAgarwal_Ved) September 13, 2022
ಆಪಲ್ ಕಂಪನಿಯ ಐಫೋನ್ ಸೇರಿದಂತೆ ಹಲವು ಉತ್ಪನ್ನಗಳನ್ನು ಫಾಕ್ಸ್‌ಕಾನ್ ತಯಾರಿಸುತ್ತಿವೆ. ಈಗಾಗಲೇ ಫಾಕ್ಸ್‌ಕಾನ್ ತಮಿಳುನಾಡಿನಲ್ಲಿ ತನ್ನ ಘಟಕವನ್ನು ತೆರೆದಿದೆ.
ಪ್ರಸ್ತುತ ವಿಶ್ವದ ಚಿಪ್ ಮಾರುಕಟ್ಟೆಯಲ್ಲಿ ಚೀನಾ ಮತ್ತು ತೈವಾನ್ ಕಂಪನಿಗಳೇ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ. ಭಾರತವನ್ನು ಚಿಪ್, ಮೊಬೈಲ್ ಉತ್ಪಾದನಾ ಹಬ್ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್ಐ) ಯೋಜನೆಯನ್ನು ಆರಂಭಿಸಿದೆ. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಿಎಲ್‌ಐ ಯೋಜನೆ ಅಡಿ ಲಾಭ ಪಡೆದುಕೊಳ್ಳಲು ದೇಶದ ಹಲವು ಕಂಪನಿಗಳು ಆಯ್ಕೆಯಾಗಿವೆ.
This MoU is an important step accelerating India’s semi-conductor manufacturing ambitions. The investment of Rs 1.54 lakh crore will create a significant impact to boost economy and jobs. This will also create a huge ecosystem for ancillary industries and help our MSMEs. https://t.co/nrRbfKoetd
— Narendra Modi (@narendramodi) September 13, 2022
ಭಾರತದ ಸರ್ಕಾರದ ಪಿಎಲ್ಐ ಅಡಿ ಐಎಸ್‌ಎಂಸಿ ಡಿಜಿಟಲ್ ಫ್ಯಾಬ್ ಅಲ್ಲದೇ ವೇದಾಂತ-ಫಾಕ್ಸ್‌ಕಾನ್ ಮತ್ತು ಸಿಂಗಾಪೂರ ಮೂಲದ ಐಜಿಎಸ್‌ಎಸ್ ಆಯ್ಕೆಯಾಗಿವೆ. ಚಿಪ್ ತಯಾರಿಕಾ ಘಟಕ ಸ್ಥಾಪನೆ ಸಂಬಂಧ ರಾಜ್ಯ ರಾಜ್ಯಗಳ ಮಧ್ಯೆ ಆರೋಗ್ಯಕರ ಸ್ಪರ್ಧೆ ಇದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯದ ಸೆಮಿಕಂಡಕ್ಟರ್ ಸಲಹಾ ಸಮಿತಿಯ ಸದಸ್ಯರು ಈ ಹಿಂದೆ ತಿಳಿಸಿದ್ದರು.
2020ರ ವೇಳೆಗೆ ಕೇವಲ 1.12 ಲಕ್ಷ ಕೋಟಿ ರೂ. ನಷ್ಟಿದ್ದ ಭಾರತದ ಸೆಮಿಕಂಡಕ್ಟರ್ ವಲಯ 2026ರ ವೇಳೆಗೆ 5 ಲಕ್ಷ ಕೋಟಿ ರೂ. ಗೆ ತಲುಪುವ ನಿರೀಕ್ಷೆ ಇದೆ.