-10ಕ್ಕೂ ಹೆಚ್ಚು ಕೆರೆಗಳು ಭರ್ತಿ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಯಲುಸೀಮೆಯ ಜೀವನಾಡಿಯಾಗಿದ್ದ ವೇದಾ ನದಿಯು 10 ವರ್ಷಗಳ ಬಳಿಕ ಮೈದುಂಬಿ ಹರಿಯುತ್ತಿದ್ದು, ರೈತರ ಸಂತಸಕ್ಕೆ ಕಾರಣವಾಗಿದೆ.
ಬಯಲುಸೀಮೆ ಹಾಗೂ ಬರ ಪೀಡಿತ ತಾಲೂಕು ಎಂದೇ ಹೆಸರುಗಳಿಸಿದ್ದ ಜಿಲ್ಲೆಯ ಕಡೂರು ತಾಲೂಕು ಈ ಬಾರಿ ಸುರಿದ ವರ್ಷಾಧಾರೆಯಿಂದ ತನ್ನ ಮೂಲ ಸ್ವರೂಪಕ್ಕೆ ಮರಳಿದೆ. ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವೇದಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದಾಗಿ ತಾಲೂಕಿನ ಜೀವನಾಡಿಯಾಗಿರುವ ವೇದಾ ನದಿಯು ಕಳೆದ 10 ವರ್ಷಗಳ ಬಳಿಕ ಮೈದುಂಬಿ ಹರಿಯುತ್ತಿದೆ.
Advertisement
Advertisement
ವೇದಾ ನದಿಯು ಮೈದುಂಬಿ ಹರಿಯುತ್ತಿರುವ ಪರಿಣಾಮ ತಾಲೂಕಿನ 10 ಕ್ಕೂ ಹೆಚ್ಚು ಕೆರೆಗಳು ತುಂಬುವ ಹಂತ ತಲುಪಿದೆ. ಹಲವು ವರ್ಷಗಳ ಬಳಿಕ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿದೆ. ಕೆರೆಯಲ್ಲಿ ನೀರು ತುಂಬಿದ್ದರಿಂದ ಬರಗಾಲ ಪೀಡಿತ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಒಂದು ಕಡೆ ಪ್ರವಾಹ ಪರಿಸ್ಥಿತಿ ಎದುರಾಗಿದ್ದರೆ, ಮತ್ತೊಂದೆಡೆ ಸಂತಸಕ್ಕೆ ಕಾರಣವಾಗಿದೆ. ವರುಣದೇವನ ಕೃಪೆಯಿಂದಾಗಿ ನೀರನ್ನೆ ಕಾಣದ ತಾಲೂಕಿನ ಬಹುತೇಕ ಕೆರೆಗಳು ತುಂಬುವ ಹಂತ ತಲುಪಿವೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv