– ಜನಪ್ರತಿನಿಧಿಗಳು, ಅಧಿಕಾರಿಗಳ ಬೇಜವಾಬ್ದಾರಿ
– ಇನ್ನೂ ನಿರ್ಮಾಣವಾಗಿಲ್ಲ ತಡೆಗೋಡೆ
ಮಂಡ್ಯ: ಸಾವಿರಾರು ಎಕರೆ ಪ್ರದೇಶಕ್ಕೆ ಕಾವೇರಿ (Cauvery) ಜೀವಾಮೃತವನ್ನು ಉಣಿಸುವ ಮಂಡ್ಯ ಜಿಲ್ಲೆ ವಿಸಿ ನಾಲೆ (VC Canal) ಇದೀಗ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸಾವಿನ ಕೂಪವಾಗಿ ಬದಲಾಗಿದೆ.
2018 ರಿಂದ ಇಲ್ಲಿಯವರೆಗೆ ನಡೆದಿರುವ ವಿಸಿ ನಾಲೆ ದುರಂತದಲ್ಲಿ 46 ಮಂದಿ ಜಲಸಮಾಧಿಯಾಗಿದ್ದಾರೆ. ಅಂದಿನ ಇಂದಿನವರೆಗೂ ತಡೆಗೋಡೆ ನಿರ್ಮಾಣಕ್ಕೆ ಸ್ಥಳೀಯರು ಆಗ್ರಹಿಸುತ್ತಲೇ ಇದ್ದಾರೆ. ಅದರೆ ಜಿಲ್ಲಾಡಳಿತ ದುರಂತ ಸಂಭವಿಸಿದ ವೇಳೆ ತಡೆಗೋಡೆ ನಿರ್ಮಾಣದ ಭರವಸೆ ನೀಡಿ ಕೈ ತೊಳೆದುಕೊಳ್ಳುತ್ತಿದೆ.
Advertisement
Advertisement
ವಿಸಿ ನಾಲೆ ದುರಂತಗಳು
ವರ್ಷ: 2018ರ ನವೆಂಬರ್ 24
ಜಲಸಮಾಧಿ: 31 ಜನ
ಸ್ಥಳ: ಕನಗನನರಡಿ ವಿಸಿ ನಾಲೆ (ಪಾಂಡವಪುರ ತಾಲೂಕು)
Advertisement
ವರ್ಷ: 2023 ಜುಲೈ 27
ಜಲಸಮಾಧಿ: 1
ಸ್ಥಳ: ತಿಬ್ಬನಹಳ್ಳಿ ವಿಸಿ ನಾಲೆ
Advertisement
ವರ್ಷ: 2023 ಜುಲೈ 29
ಜಲಸಮಾಧಿ: 4
ಸ್ಥಳ: ಗಾಮನಹಳ್ಳಿ ವಿಸಿ ನಾಲೆ (ಶ್ರೀರಂಗಪಟ್ಟಣ) ಇದನ್ನೂ ಓದಿ: 20 ಸಾವಿರಕ್ಕೆ ಮಾರಾಟ ಮತ್ತೆ 50 ಸಾವಿರಕ್ಕೆ ಖರೀದಿ – ಈಗ 1.48 ಲಕ್ಷಕ್ಕೆ 8 ತಿಂಗಳ ಟಗರು ಸೇಲ್!
ವರ್ಷ: 2023 ನವೆಂಬರ್ 08
ಜಲಸಮಾಧಿ: 5
ಸ್ಥಳ: ಬನಘಟ್ಟ ಬಳಿಯ ವಿಸಿ(ಪಾಂಡವಪುರ)
ವರ್ಷ: 2024 ಮಾರ್ಚ್ 12
ಜಲಸಮಾಧಿ: 1
ಸ್ಥಳ: ಅವ್ವೇರಹಳ್ಳಿ ವಿಸಿ ನಾಲೆ(ಮಂಡ್ಯ)
ವರ್ಷ: 2024 ಆಗಸ್ಟ್ 05
ಜಲಸಮಾಧಿ: 1
ಸ್ಥಳ: ಕಾಳೇನಳ್ಳಿ ಬಳಿ ವಿಸಿ (ಪಾಂಡವಪುರ)
ವರ್ಷ: 2025 ಫೆ 03
ಜಲಸಮಾಧಿ: 3
ಸ್ಥಳ: ಮಾಚಹಳ್ಳಿಯ ವಿಸಿ ನಾಲೆ(ಮಂಡ್ಯ)
ವಿಸಿ ನಾಲೆಯಲ್ಲಿನ ಕಿರಿದಾದ ರಸ್ತೆ, ತಡೆಗೋಡೆ ಇಲ್ಲದ ಕಾರಣ ಈ ದುರಂತ ಸಂಭವಿಸುತ್ತಿದೆ. 560 ಕಿ.ಮೀ. ಉದ್ದದ ವಿಸಿ ನಾಲೆ ಇದ್ದು, ನಾಲೆಯ ಯಾವ ಜಾಗ ಅಪಾಯಕಾರಿಯಾಗಿದೆ ಎಂದು ತಿಳಿಯಲು ತಂಡ ನಿಯೋಜನೆ ಮಾಡಲಾಗಿತ್ತು. ಆ ತಂಡ ಅಪಘಾತ ಸ್ಥಳವನ್ನು ಗುರುತು ಮಾಡಿದೆ. ಆದರೆ ಇಲ್ಲಿಯವರೆಗೆ ನಾಲೆಯ ಪಕ್ಕ ತಡೆಗೋಡೆಯನ್ನು ನಿರ್ಮಾಣ ಮಾಡಿಲ್ಲ. ಇದರಿಂದ ದಿನೇ ದಿನೇ ಈ ರೀತಿಯ ಘಟನೆಗಳು ಜರುಗುತ್ತಿವೆ.
ಸೋಮವಾರ ಮಂಡ್ಯದ ಮಾಚಹಳ್ಳಿ ಬಳಿ ವಿಸಿ ನಾಲೆಗೆ ಇಂಡಿಕಾ ಕಾರು ಉರಳಿತ್ತು. ನಾಲೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದ ಹಿನ್ನೆಲೆ ಕಾರು ಸಂಪೂರ್ಣವಾಗಿ ಮುಳುಗಿತ್ತು. ನಂತರ ಫಯಾಜ್ ಮೃತದೇಹ ಸಿಕ್ಕಿದರೆ, ಅರೆ ಪ್ರಜ್ಞೆಯಲ್ಲಿ ಸಿಕ್ಕಿದ್ದ ನಯಾಜ್‌ಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರು ನೀರಿನಲ್ಲಿ ಮುಳುಗಿದ್ದ ಕಾರನ್ನು ಪತ್ತೆ ಮಾಡಿ ಹಗ್ಗ ಕಟ್ಟಿ ಕ್ರೇನ್ ಮೂಲಕ ಮೇಲೆ ಎತ್ತಿದ್ದಾರೆ. ಈ ವೇಳೆ ಕಾರಿನಲ್ಲಿ ಅಸ್ಲಾಂ ಪಾಷ ಮೃತ ದೇಹ ಇತ್ತು. ಆದರೆ ಇವರೊಟ್ಟಿಗೆ ಇದ್ದ ಫೀರ್ ಖಾನ್ ಮೃತದೇಹ ಪತ್ತೆಯಾಗಿರಲಿಲ್ಲ. ನಾಲೆಯ ನೀರನ್ನು ನಿಲ್ಲಿಸಿ ಇಂದು ಕಾರ್ಯಾಚರಣೆ ಮಾಡಿದ ನಂತರ ಫೀರ್ ಖಾನ್ ಮೃತದೇಹ ಪತ್ತೆಯಾಗಿದೆ. ಈ ಮೂಲಕ ನಿನ್ನೆ ನಡೆದ ದುರಂತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿರುವ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವಂತೆ ಮೃತರ ಸ್ನೇಹಿತರು ಆಗ್ರಹಿಸಿದ್ದಾರೆ.